Dharmasthala: ಧರ್ಮಸ್ಥಳ: ಶವ ಉತ್ಪನನಕ್ಕೆ ಮೀಸಲು ಅರಣ್ಯದಲ್ಲಿ ಜೆಸಿಬಿ ಬಳಸದಿರಲು ನಿರ್ಧಾರ ಸಾಧ್ಯತೆ!

Dharmasthala: ಧರ್ಮಸ್ಥಳದಲ್ಲಿ (Dharmasthala) ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.30ರಂದು ಎರಡನೇ ದಿನದ ಉತ್ಪನನ ಕಾರ್ಯ ನಡೆಯಲಿದೆ. ಆದರೆ ಉತ್ಪನನವನ್ನು ತೀವ್ರಗತಿಯಲ್ಲಿ ಮಾಡಲು ಎಸ್ ಐ ಟಿ ನಿರ್ಧರಿಸಿದ್ದು, ಒಂದಕ್ಕಿಂತ ಹೆಚ್ಚು ತಂಡಗಳನ್ನು ರಚಿಸಿ ಎಸ್ ಐ ಟಿ ಇಂದು ಅಗೆಯುವ ಕಾರ್ಯಕ್ಕೆ ಮುಂದಾಗುವ ಸಾದ್ಯತೆಯಿದೆ.

ಇದಕ್ಕಾಗಿ ಪುತ್ತೂರು ಮತ್ತು ಮಂಗಳೂರು ಎಸಿಯ ಸಾಥ್ ಪಡೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮುಖ್ಯವಾಗಿ ಮೀಸಲು ಅರಣ್ಯದಲ್ಲಿ ಅಗೆಯುವ ಕಾರ್ಯ ಮುಂದುವರೆಯಲಿದ್ದು, ಜೆಸಿಬಿ ಬಳಸದೇ ಮಾನವ ಶ್ರಮದಿಂದಲೇ ಅಗೆಯಿಸುವ ಸಾಧ್ಯತೆ ಹೆಚ್ಚಿದೆ.
Comments are closed.