KSRTC Strike: ಪಟ್ಟು ಬಿಡ ಸಾರಿಗೆ ಕಾರ್ಮಿಕರು – ಬೇಡಿಕೆ ಈಡೇರಿಕೆಗಾಗಿ ಸಾರಿಗೆ ಸಂಘಟನೆಯ ಮತ್ತೊಂದು ಬಣದಿಂದ ಹೋರಾಟ

KSRTC Strike: ಇಂದಿನಿಂದಲೇ ಸಾರಿಗೆ ಸಂಘಟನೆಯ ಮತ್ತೊಂದು ಬಣದಿಂದ ಬೇಡಿಕೆ ಈಡೇರಿಕೆಗೆ ಹೋರಾಟ ನಡೆಸಲು ಮುಂದಾಗಿದ್ದು, ಅನಿರ್ಧಿಷ್ಟಾವಧಿ ಉಪವಾಸ ಧರಣಿ ಸತ್ಯಗ್ರಹಕ್ಕೆ ಸಾರಿಗೆ ಸಂಘಟನೆ ಮುಂದಾಗಿದೆ. ಸಾರಿಗೆ ನಿಗಮಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಿಂದ ಸತ್ಯಾಗ್ರಹ ನಡೆಯಲಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿರುವ ನೌಕರರು, ಹಿಂಬಾಕಿ, ಸಮಾನವೇತನ, ಕಾರ್ಮಿಕ ಸಂಘಟನೆಗಳ ಚುನಾವಣೆ, ವಜಾಗೊಂಡ ನೌಕರರ ಮರು ನೇಮಕ ಆಗ್ರಹಿಸಿ ಹೋರಾಟ ಕೈಗೊಳ್ಳಲಿದ್ದಾರೆ. ಈಗಾಗಲೇ ಸಾರಿಗೆ ಸಂಘಟನೆಯ ಒಂದು ಬಣ ಆಗಸ್ಟ್ 5 ರಿಂದ ಬಸ್ ನಿಲ್ಲಿಸಿ ಹೋರಾಟಕ್ಕೆ ಕರೆ ಕೊಟ್ಟಿದೆ. ಈ ಮಧ್ಯೆ ಮತ್ತೊಂದು ಬಣದಿಂದ ಇಂದಿನಿಂದಲೇ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದೆ.
ಕಳೆದ ಹಲವು ವರ್ಷಗಳಿಂದ ಸಾರಿಗೆ ಇಲಾಖೆ ನೌಕರರು ಹಾಗೂ ಸರ್ಕಾರದ ಮಧ್ಯೆ ಹಗ್ಗ ಜಗ್ಗಾಟ ನಡೆಯುತ್ತಲೇ ಇದೆ. ನೌಕರರು ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಹಲವು ಬಾರಿ ಸರ್ಕಾರವನ್ನು ಮನವಿ ಮಾಡಿದ್ದರು, ಸರ್ಕಾರ ನೌಕರರ ಮೂಗಿಗೆ ತುಪ್ಪ ಸವರಿ, ಬೆಣ್ಣೆಯಂತ ಮಾತುಗಳನ್ನಾಡಿ ಈವರೆಗೆ ಅವರ ಬೇಡಿಕೆಗಳನ್ನು ಈಡೇರಿಸಲಿಲ್ಲ. ತಾಳ್ಮೆಯಿಂದ ಕಾದ ನೌಕರರು ಈ ಬಾರಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪಟ್ಟು ಹಿಡಿದು ಕುಳಿತಿದ್ದಾರೆ. ಇಂದಿನಿಂದಲೇ ಹೋರಾಟಕ್ಕೆ ಮುಂದಾಗಿರುವ ನೌಕರರ ಜೊತೆ ಆಗಸ್ಟ್ 5ರಂದು ಮತ್ತೊಂದು ಬಣ ಕೈ ಜೋಡಿಸಲಿದೆ.
ಇದು ಖಂಡಿತ ಸರ್ಕಾರಕ್ಕೆ ಭಾರವಾಗಲಿದೆ. ಈ ಕೂಡಲೆ ಸರ್ಕಾರ ಎಚ್ಚೆತ್ತುಕೊಂಡೆರೆ ಡ್ಯಾಮೇಜ್ ಕಂಟ್ರೋಲ್ ಹಾಗೂ ನೌಕರರ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಡೆಯಬಹುದು.
Comments are closed.