Pune: ಆಫೀಸ್ ಮೀಟಿಂಗ್‌ನಿಂದ ಅರ್ಧಕ್ಕೇ ಹೊರಬಂದು ಕಟ್ಟಡದಿಂದ ಜಿಗಿದು ಟೆಕ್ಕಿ ಆತ್ಮ*ಹತ್ಯೆ

Pune: ಆಫೀಸ್‌ನಲ್ಲಿ ನಡೆಯುತ್ತಿದ್ದ ಮೀಟಿಂಗ್‌ನಿಂದ ಅರ್ಧಕ್ಕೆ ಹೊರ ಬಂದ 23 ವರ್ಷದ ಇಂಜಿನಿಯರ್ ಓರ್ವ ಸೀದಾ ಸಂಸ್ಥೆಯ ಮೇಲ್ಛಾವಣಿಗೆ ಹೋಗಿ ಕಟ್ಟಡದಿಂದ ಹಾರಿ ಸಾವಿಗೆ ಶರಣಾಗಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಪಿಯೂಷ್ ಅಶೋಕ್ ಕವಡೆ (23 ವರ್ಷ) ಮೇತ ಯುವಕ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಜುಲೈನಿಂದ ಪುಣೆಯ ಜಿಂಜೆವಾಡಿಯ ಐಟಿ ಹಬ್‌ನಲ್ಲಿರುವ ಅಟ್ಲಾಸ್ ಕೊಪ್ಕೋ (ಇಂಡಿಯಾ)ದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಬೆಳಗ್ಗೆ 9.30 ಕ್ಕೆ ಕಟ್ಟಡದಿಂದ ಹಾರಿ ಸಾವಿಗೆ ಶರಣಾಗಿದ್ದಾರೆ.
ಕೆಲಸದ ಒತ್ತಡವಿತ್ತ ಎಂಬ ಪ್ರಶ್ನೆಗೆ ಮೊದಲ ನೋಟದಲ್ಲಿ ಅಂತಹ ಲಕ್ಷಣಗಳು ಕಂಡು ಬಂದಿಲ್ಲ. ಡೆತ್‌ನೋಟ್‌ನಲ್ಲಿ ಬರೆದಿರುವುದರ ಕುರಿತು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ತನ್ನ ಕುಟುಂಬಕ್ಕೆ ಪತ್ರವೊಂದನ್ನು ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ನವನಾದ ಈತ ಎದೆನೋವು ಎಂದು ಮೀಟಿಂಗ್‌ನಿಂದ ಹೊರ ಬಂದು ಹೇಳಿದ್ದಾನೆ ಎಂದು ನಂತರ ತಿಳಿದು ಬಂದಿದೆ.
Comments are closed.