Bangalore: ಸಾಮಾಜಿಕ ಜಾಲತಾಣದ ಮೂಲಕ ಉಗ್ರರ ಜೊತೆ ನಿರಂತರ ಸಂಪರ್ಕ: ಬೆಂಗಳೂರಿನಲ್ಲಿ ಶಂಕಿತ ಮಹಿಳೆ ವಶಕ್ಕೆ

Share the Article

Bangalore: ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ್ದ ಮಹಿಳೆಯೊಬ್ಬಾಕೆಯನ್ನು ಗುಜರಾತ್‌ ಎಟಿಎಸ್‌ ಮತ್ತು ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿದ ಬಂಧನ ಮಾಡಿದೆ.

ಶಂಕಿತ ಮಹಿಳೆಯನ್ನು ಪರ್ವಿನ್‌ ಎಂದು ಗುರುತಿಸಲಾಗಿದೆ. ಭಯೋತ್ಪಾದಕರ ಜೊತೆ ಈಕೆ ನಿರಂತರ ಸಂಪರ್ಕ ಹೊಂದಿರುವುದಾಗಿ ವರದಿಯಾಗಿದೆ. ಹೆಬ್ಬಾಳದ ಮನೋರಮಾ ಪಾಳ್ಯದಲ್ಲಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಗುಜರಾತ್‌ ಪೊಲೀಸರು ಶಂಕಿತ ಮಹಿಳೆಯನ್ನು ಬಂಧನ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಇನ್ಸ್‌ಟಾಗ್ರಾಮ್‌ ಮೂಲಕ ಶಂಕಿತ ಉಗ್ರರ ಜೊತೆ ಈಕೆ ಸಂಪರ್ಕದಲ್ಲಿದ್ದಳು. ಮೆಸೇಜ್‌, ಕರೆಗಳ ಮೂಲಕ ಈಕೆ ಮಾತನಾಡುತ್ತಿದ್ದ ಕುರಿತು ವರದಿಯಾಗಿದೆ. ವಿಚಾರಣೆ ಮಾಡಿದ ನಂತರ ಈಕೆಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು.

ಇದನ್ನೂ ಓದಿ: Chinnaswamy Stadium Stampede: ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌: ನಾಲ್ವರು ಪೊಲೀಸ್‌ ಅಧಿಕಾರಿಗಳ ಅಮಾನತು ಆದೇಶ ರದ್ದು

Comments are closed.