Dharmasthala Case: ಧರ್ಮಸ್ಥಳ ತಲೆಬುರುಡೆ ಪ್ರಕರಣ: ಇವರ ಹಿಂದಿದೆ PFI, SFI ಸಂಘಟನೆ -ಅಶ್ವಥ್‌ ನಾರಾಯಣ್ ಗಂಭೀರ ಆರೋಪ

Share the Article

Dharmasthala Case: 20 ವರ್ಷಗಳ ಹಿಂದಿನ ಸಮಾಧಿ ರಹಸ್ಯ ಬಯಲಾಗುತ್ತದೆಯೇ? ಎನ್ನುವ ಕುತೂಹಲದ ಮಧ್ಯೆ ಧರ್ಮಸ್ಥಳದ ಕುರಿತು ಆರೋಪ ಮಾಡಿದವರ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಧರ್ಮಸ್ಥಳದ ಕೇಸ್‌ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲವೂ ಕಾನೂನಾತ್ಮಕವಾಗಿ ನಡೆಯಲಿದೆ. ಯಾವುದೇ ಅನುಮಾನ ಇದ್ದರೂ ಸೂಕ್ಷ್ಮವಾಗಿ ನಡೀಬೇಕು ಎಂದು ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಡಿಸಿಎಂ ಅಶ್ವತ್ಥ್‌ ನಾರಾಯಣ ಅವರು ಹೇಳಿದ್ದಾರೆ.

ಸರ್ಕಾರ 2 ಅಥವಾ 3 ತಿಂಗಳ ಕಾಲಾವಧಿಯಲ್ಲಿ ತನಿಖೆ ಮಾಡಬೇಕು. ರಾಜ್ಯ ಸರ್ಕಾರದ ಕರ್ಮಕಾಂಡ ಮುಚ್ಚಿ ಹಾಕೋಕೆ ಇವೆಲ್ಲವನ್ನ ಮಾಡೋದು ಬೇಡ. ತನಿಖೆಗೆ ಕಾಲಾವಾಧಿ ನಿಗದಿ ಮಾಡಿ. ಈ ಆರೋಪಗಳ ಹಿಂದೆ ಇರೋ PFI, SFI ಸಂಘಟನೆಗಳನ್ನು ತನಿಖೆ ಮಾಡ್ಬೇಕು ಎನ್ನುವ ಮೂಲಕ ಇದರ ಹಿಂದೆ PFI, SFI ಸಂಘಟನೆ ಇದೆ. ಧರ್ಮಸ್ಥಳ ಪ್ರಕರಣವನ್ನು ಸಿನಿಮಾಗಳಂತೆ ತೋರಿಸುವವರ ವಿರುದ್ಧ ತನಿಖೆ ನಡೆಯಬೇಕು. ನಮ್ಮ ನಂಬಿಕೆ ಕೇಂದ್ರಕ್ಕೆ ಅಪಮಾನ ‌ಮಾಡೋರಿಗೆ ತಕ್ಕ ಪಾಠ ಕಲಿಸಬೇಕು. ಕಾಲಾವಧಿಯಲ್ಲಿ ಸರ್ಕಾರ ತನಿಖೆ ಮಾಡ್ಬೇಕು ಎಂದು ಬಿಜೆಪಿ ನಾಯಕ ಅಶ್ವಥ್ ನಾರಾಯಣ್ ಆಗ್ರಹಿಸಿದ್ದಾರೆ.

ಜುಲೈ 28ರಂದು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಬಿಜೆಪಿ ನಾಯಕ ಆರ್ ಅಶೋಕ್, ʼನಾನೇ ಹೆಣಗಳನ್ನು ಹೂತಿಟ್ಟಿದ್ದೇನೆ ಅಂತಿರೋ ಈ ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರ್ಕಾರ ಇದೆ ಎಂದು ಗಂಭೀರ ಆರೋಪವನ್ನು ಜುಲೈ 28 ರ ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕ ಆರ್‌ ಅಶೋಕ್‌ ಮಾಡಿದ್ದಾರೆ. ಇದು ಯಾರೋ ಕಾಣದ ಕೈಗಳು ಮಾಡಿರೋ ಕೆಲ್ಸ ಇದು. ಈ ಕೇಸ್ ಜಟಿಲ ಆಗ್ತಿಲ್ಲ, ಜಟಿಲ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mangaluru: ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟ‌ರ್ ಮಂಜೂರು: ಸಂಸದ ಕ್ಯಾ. ಚೌಟ

Comments are closed.