Dharmasthala Case: ಮಾಸ್ಕ್‌ಮ್ಯಾನ್‌ ತೋರಿಸಿದ ಜಾಗದಲ್ಲಿ ಉತ್ಖನನ ಕಾರ್ಯ ಶುರು

Share the Article

Dharmasthala Case: ಧರ್ಮಸ್ಥಳದ ಅರಣ್ಯಗಳಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎನ್ನಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ತಂಡ ನೇತ್ರಾವತಿ ನದಿಯ ದಡದಲ್ಲಿರೋ ಕಾಡಿನಲ್ಲಿ ಉತ್ಖನನ ಕಾರ್ಯ ಪ್ರಾರಂಭ ಮಾಡಿದೆ. ಮಾಸ್ಕ್‌ಧಾರಿ ವ್ಯಕ್ತಿಯನ್ನು ಜುಲೈ 28 ರಂದು ಸ್ಥಳಕ್ಕೆ ಕರೆತಂದು ಮಹಜರು ಮಾಡಲಾಗಿತ್ತು. ಮಾಸ್ಕ್‌ಮ್ಯಾನ್‌ 13 ಜಾಗಗಳನ್ನು ಗುರುತಿಸಿದ್ದಾನೆ ಎನ್ನಲಾಗಿದೆ.

ಇದೀಗ ವ್ಯಕ್ತಿ ತೋರಿಸಿದ ಮೊದಲ ಜಾಗದಲ್ಲಿ ಉತ್ಖನನ ಕಾರ್ಯ ಪ್ರಾರಂಭವಾಗಿದೆ. ಆರು ಅಡಿ ಅಗಲ, ಆರು ಅಡಿ ಉದ್ದ ಮಾದರಿಯಲ್ಲಿ ಗುಂಡಿ ತೆಗೆಯಲಾಗುತ್ತದೆ. ವಿಡಿಯೋ ಮೂಲಕ ಎಲ್ಲಾ ಕಾರ್ಯವನ್ನು ಸೆರೆ ಹಿಡಿಯಲಾಗುತ್ತದೆ. ಸೀಮಿತ ಅಧಿಕಾರಿಗಳಿಗೆ ಮಾತ್ರ ಉತ್ಖನನ ಮಾಗದಲ್ಲಿ ಇರುವ ಅವಕಾಶವಿದೆ.

ಮಾಸ್ಕ್‌ಮ್ಯಾನ್‌ ತೋರಿಸಿದ ಜಾಗದಲ್ಲಿ ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್‌ ಸಮ್ಮುಖದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದ್ದು, ಪ್ರತಿ ಜಾಗ ಅಗೆಯೋಕೆ ಕನಿಷ್ಠ ನಾಲ್ಕು ಗಂಟೆ ಅವಧಿ ಬೇಕಾಗುತ್ತದೆ.

ಇದನ್ನೂ ಓದಿ: No Electricity: ವಿದ್ಯುತ್ ಸಂಪರ್ಕ ಕಡಿತ – ಒಂದು ವಾರದಿಂದ ಕತ್ತಲಲ್ಲಿ ಬದುಕುತ್ತಿರುವ ತೋರ ಗ್ರಾಮದ ನಿವಾಸಿಗಳು

Comments are closed.