Aniruddhacharya: ಮದುವೆಗೂ ಮುಂಚೆ ಯುವತಿಯರು ಅನೇಕ ಪುರುಷರ ಜೊತೆ ಇರ್ತಾರೆ – ನಾಲಿಗೆ ಹರಿಬಿಟ್ಟ ಅನಿರುದ್ಧಾಚಾರ್ಯ!!

Share the Article

Aniruddhacharya: ತಮ್ಮ ಹೇಳಿಕೆಗಳ ಮೂಲಕವೇ ವಿವಾದಕ್ಕೀಡಾಗಿರುವ ಪ್ರಸಿದ್ಧ ಕಥೆಗಾರ (Katha Vachak) ಮತ್ತು ಭಾಗವತಾಚಾರ್ಯ ಅನಿರುದ್ಧಾಚಾರ್ಯ ಮಹಾರಾಜ್ (Aniruddhacharya Maharaj) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಾರಣ ಅವರು ಇದೀಗ ಮಹಿಳೆಯರ ಕುರಿತು ನಾಲಗೆ ಹರಿಬಿಟ್ಟಿದ್ದಾರೆ.

ವೃಂದಾವನದ ಗೌರಿ ಗೋಪಾಲ್ ಆಶ್ರಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಅನಿರುದ್ಧಾಚಾರ್ಯ (Aniruddhacharya) ಅವರು, 25 ವರ್ಷದ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು, ಇದರ ವೀಡಿಯೋ ಸೋಶಿಯಲ್‌ ಮೀಡಿಯಾಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಅಲ್ಲದೆ ಇದು ಆಕ್ರೋಶವನ್ನು ಹುಟ್ಟುಹಾಕಿದೆ.

ಅನಿರುದ್ಧಾಚಾರ್ಯ ಹೇಳಿದ್ದೇನು..?

ಈಗ ಹುಡುಗಿಯರು 25 ನೇ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದಾರೆ. ಆದರೆ ಅದಕ್ಕೂ ಮೊದಲೇ ಆಕೆ ಎಷ್ಟೋ ಪುರುಷರ ಜೊತೆ ಇರುತ್ತಾಳೆ. ಅವಳ ಯೌವನವು ಎಲ್ಲೋ ಜಾರಬಹುದು ಎಂದು ಸ್ವಾಮೀಜಿ ಹೇಳಿದ್ದಾರೆ. ಸ್ವಾಮೀಜಿಯವರ ಈ ಹೇಳಿಕೆ ಕುರಿತು ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆಗಳು ಕೂಡ ನಡೆದಿದೆ.

ಕ್ಷಮೆಯಾಚನೆ:

ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ಅನಿರುದ್ಧಾಚಾರ್ಯ ತಮ್ಮ ಇನ್‌ಸ್ಟಾಗ್ರಾಮ್ ಅಧಿಕೃತ ಖಾತೆಯ ಮೂಲಕ ವೀಡಿಯೋ ಮಾಡಿ ಕ್ಷಮೆಯಾಚಿಸಿದ್ದಾರೆ. ತಮ್ಮ ಭಾಷಣದ ಒಂದು ಭಾಗವನ್ನು ಮಾತ್ರ ಪ್ರಸಾರ ಮಾಡಲಾಗಿದೆ, ಆದರೆ ಸ್ಪಷ್ಟೀಕರಣವನ್ನು ನೀಡುವ ಉಳಿದ ಭಾಗವನ್ನು ತೆಗೆದುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Mallikarjun Kharge : ಕಾಂಗ್ರೆಸ್ ಗೆಲ್ಲಿಸಿದ್ದು ನಾನು, ಸೋ ಸಿಎಂ ಆಗಬೇಕಾಗಿದ್ದು ನಾನು – ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ

Comments are closed.