Mallikarjun Kharge : ಕಾಂಗ್ರೆಸ್ ಗೆಲ್ಲಿಸಿದ್ದು ನಾನು, ಸೋ ಸಿಎಂ ಆಗಬೇಕಾಗಿದ್ದು ನಾನು – ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ

Mallikarjun Kharge: ಮಲ್ಲಿಕಾರ್ಜುನ್ ಖರ್ಗೆ ಅವರು ರಾಜ್ಯ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡವರು. ಅವರ ಪಕ್ಷ ಸಂಘಟನೆಯಿಂದಾಗಿ ಇಂದು ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನವೂ ಒಲಿದಿದೆ. ಕರ್ನಾಟಕ ಮಾತ್ರವಲ್ಲದೆ ಈ ಇಡೀ ದೇಶದಲ್ಲಿ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದಿದ್ದಾರೆ. ಆದರೆ ಇದೀಗ ಖರ್ಗೆ ಅವರು ತಮಗೆ ಸಿಎಂ ಸ್ಥಾನ ತಪ್ಪಿದರ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ಈ ಹಿಂದೆ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶವಿದ್ದರೂ ಕೊನೆಯ ಕ್ಷಣದಲ್ಲಿ ಕೈತಪ್ಪಿತ್ತು. ಇದು ದಶಕಗಳ ಹಿಂದೆ ನಡೆದ ಬೆಳವಣಿಗೆಯಾದರೂ ಅದನ್ನು ನೆನೆದು ಮಲ್ಲಿಕಾರ್ಜುನ್ ಖರ್ಗೆ ಅವರು ಬೇಸರದ ಮಾತುಗಳನ್ನು ಹೊರಹಾಕಿದ್ದಾರೆ.
ವಿಜಯಪುರ ಕಾರ್ಯಕ್ರಮದಲ್ಲಿ ಬೇಲಿಮಠದ ಶ್ರೀಗಳ ಬಳಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಬ್ಲಾಕ್ ಅಧ್ಯಕ್ಷನಿಂದ ನಾನು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ನಾನು ಯಾವತ್ತೂ ಅಧಿಕಾರದ ಬೆನ್ನು ಹತ್ತಿ ಹೋಗಿಲ್ಲ. ಪಕ್ಷದಲ್ಲಿ ಅಧಿಕಾರ, ಜವಾಬ್ದಾರಿ ನನಗೆ ಆದಾಗಿಯೇ ಸಿಕ್ಕಿದೆ ಎಂದು ಹೇಳಿದ್ದಾರೆ. ಇನ್ನು ಸಿಎಲ್ಪಿ ನಾಯಕನಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶ್ರಮಿಸಿದ್ದೆ. ಆದರೆ ಆಗ ಸಿಎಂ ಆಗಿದ್ದು ಎಸ್.ಎಂ.ಕೃಷ್ಣ ಅವರು. ನನ್ನ ಸೇವೆ ನೀರಿನಲ್ಲಿ ಹೋಯ್ತು ಎಂದು ಮಲ್ಲಿಕಾರ್ಜುನ್ ಖರ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Comments are closed.