Dharmasthala : ಶವ ಹೂತಿಟ್ಟ ಪ್ರಕರಣ – ಇಂದು ಸಾಕ್ಷಿ ದೂರುದಾರನಿಂದ ಸ್ಥಳ ಮಹಜರು ಸಾಧ್ಯತೆ, SIT ಕಚೇರಿಗೆ ಬಂದ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು

Share the Article

Dharmasthala : ಧರ್ಮಸ್ಥಳದ (Dharmasthala) ಸುತ್ತಮುತ್ತ ಶವಗಳ ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಆರಂಭವಾಗಿದ್ದು ಇದೀಗ ಅನಾಮಿಕ ವ್ಯಕ್ತಿಯ ವಿಚಾರಣೆ ನಡೆದಿದೆ. ಈಗಾಗಲೇ ಎರಡು ದಿನಗಳಿಂದ ಅನಾಮಿಕ ವ್ಯಕ್ತಿಯ ವಿಚಾರಣೆ ನಡೆದಿದ್ದು, ಇಂದು ಆತನನ್ನು ಸ್ಥಳ ಮಹಜರಿಗೆ ಕರೆದೊಯ್ಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೌದು, ನಿನ್ನೆ ವಿಚಾರಣೆ ವೇಳೆ ಅನಾಮಿಕ ವ್ಯಕ್ತಿಯನ್ನ ಪ್ರಶ್ನೆ ಮಾಡಿರುವ ಮೊಹಾಂತಿ ಅಧಿಕಾರಿಗಳ ಮುಂದೆ ಹೇಳಿರುವ ವಿಚಾರಗಳು ನಿಜಾನಾ? ನಿಮ್ಮ ಹೇಳಿಕೆ, ಆರೋಪಗಳ ಬಗ್ಗೆ ನಿಮಗೆ ಅರಿವಿದೆಯಾ? ಮುಂದಿನ ತನಿಖಾ ಪ್ರತಿಕ್ರಿಯೆಗಳಿಗೆ ನಿಮ್ಮ ಒಪ್ಪಿಗೆ ಇದೆಯಾ? ಶವ ಹೂತಿಟ್ಟ ಜಾಗಗಳನ್ನು ತೋರಿಸಲು ಸಿದ್ಧರಿದ್ದೀರಾ? ಎಂದೆಲ್ಲಾ ಸಾಲು ಸಾಲು ಪ್ರಶ್ನೆಗಳನ್ನ ಕೇಳಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಇಂದು ಅನಾಮಿಕನ ಮೂಲಕ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಇದೆ.

ಈಗಾಗಲೇ ಬೆಳ್ತಂಗಡಿಯ ಎಸ್.ಐ.ಟಿ ಕಚೇರಿ ಎದುರು ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಎಸ್.ಐ.ಟಿ ಕಚೇರಿ ಬಳಿ ಕಂದಾಯ, ಭೂ ದಾಖಲೆ ವಿಭಾಗದ ಅಧಿಕಾರಿವರ್ಗ, ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿದ್ದಾರೆ. ಎಸ್‌ಐಟಿ ಕಚೇರಿ ಬಳಿ ನಿಂತಿರೋ ಮೂರು ಡಿಎಆರ್ ತುಕಡಿಗಳು ನಿಯೋಜಿಸಲಾಗಿದೆ.

ಬುರುಡೆ ರಹಸ್ಯ ಟ್ರೇಸ್‌ಗೂ ಸಿದ್ಧತೆ: 

ಅನಾಮಿಕ ದೂರುದಾರ ನೀಡಿರುವ ಬುರುಡೆ ಸಾಕ್ಷ್ಯಾದ ಬಗ್ಗೆ ಗಂಭೀರ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಇದೀಗ ಬುರುಡೆಯ ರಹಸ್ಯವನ್ನು ಟ್ರೇಸ್‌ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.

Comments are closed.