Home News Feroz Chuttipara : 90 ಲಕ್ಷಕ್ಕೂ ಹೆಚ್ಚು ಸಬ್ಸ್ಕ್ರೈಬರ್ಸ್, ಕೋಟಿಗಟ್ಟಲೆ ಆದಾಯವಿದ್ರೂ ಯೂ ಟ್ಯೂಬ್ ಗೆ...

Feroz Chuttipara : 90 ಲಕ್ಷಕ್ಕೂ ಹೆಚ್ಚು ಸಬ್ಸ್ಕ್ರೈಬರ್ಸ್, ಕೋಟಿಗಟ್ಟಲೆ ಆದಾಯವಿದ್ರೂ ಯೂ ಟ್ಯೂಬ್ ಗೆ ಗುಡ್ಬೈ ಖ್ಯಾತ ವ್ಲಾಗರ್ !! ಕೊಟ್ಟ ಕಾರಣ ಅಚ್ಚರಿ

Hindu neighbor gifts plot of land

Hindu neighbour gifts land to Muslim journalist

Feroz Chuttipara:ಇಂದು ಯೂಟ್ಯೂಬ್ ಮನರಂಜನೆಯ ಮಾಧ್ಯಮವಾಗಿ ಉಳಿಯದೆ ಗಳಿಕೆಯ ಮಾಧ್ಯಮವಾಗಿಯೂ ರೂಪುಗೊಂಡಿದೆ. ಕೆಲವರು ಯೂಟ್ಯೂಬ್ ನಂಬಿಕೊಂಡೇ ಜೀವನವನ್ನು ನಡೆಸುತ್ತಿದ್ದಾರೆ. ಲಕ್ಷ ಲಕ್ಷ ಸಬ್ಸ್ಕ್ರೈಬರ್ಸ್ ಗಳನ್ನು ಹೊಂದುವ ಮುಖಾಂತರ ಕೋಟಿಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಊಟ, ತಿಂಡಿ, ಅಡುಗೆ, ಪ್ರವಾಸ ಎನ್ನುತ್ತಾ ಅನೇಕ ರೀತಿಯ ಬ್ಲಾಗ್ ಮಾಡಿಕೊಂಡು ಹಣ ಗಳಿಸುತ್ತಿದ್ದಾರೆ.

ಆದರೆ ಈ ರೀತಿ ಹಣಗಳಿಸುತ್ತಿರುವವರನ್ನು ಕಂಡು ಇಂದು ಅನೇಕರು ಒ ಯೂಟ್ಯೂಬ್ ಚಾನೆಲ್ ತೆರೆಯುತ್ತಿದ್ದಾರೆ. ಆದರೆ ಅವರು 1,000 ಸಬ್ಸ್ಕ್ರೈಬರ್ಸ್ ಗಳನ್ನು ಗಳಿಸಿಕೊಳ್ಳುವುದರೊಳಗೆ ಸುಸ್ತು ಹೊಡೆಯುತ್ತಿದ್ದಾರೆ. ಆದರೆ ಆಶ್ಚರ್ಯ ಅಂದ್ರೆ 90 ಲಕ್ಷಕ್ಕೂ ಹೆಚ್ಚು ಸಬ್ಸ್ಕ್ರೈಬರ್ಸ್ ಇದ್ದು, ಲಕ್ಷ ಲಕ್ಷ ಆದಾಯವಿದ್ರೂ ಖ್ಯಾತ ವ್ಲಾಗರ್ ಒಬ್ರು YouTubeಗೆ ಗುಡ್ಬೈ ಹೇಳರೋರಟಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.

ಹೌದು, ಫಿರೋಜ್ ಚುಟ್ಟಿಪರಾ ಓರ್ವ ಫೇಮಸ್ ವ್ಲಾಗರ್. ತಮ್ಮ ವಿಭಿನ್ನ ಅಡುಗೆ ವಿಡಿಯೋಗಳಿಂದಲೇ ಹೆಸರುವಾಸಿಯಾಗಿದ್ದಾರೆ. ಹಾವು ಮತ್ತು ಉಷ್ಟ್ರಪಕ್ಷಿಯನ್ನು ಗ್ರಿಲ್ ಮಾಡುವುದು ಸೇರಿದಂತೆ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಫಿರೋಜ್ ಅವರು ತಮ್ಮ ಯೂಟ್ಯೂಬ್‌ನಲ್ಲಿ ಒಂಬತ್ತು ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು ಇದೀಗ ಅವರು ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಮುಚ್ಚುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ.

ಫಿರೋಜ್ ಹೇಳಿದ್ದೇನು?

ಇನ್ನು ಮುಂದೆ ಕೇವಲ ಯೂಟ್ಯೂಬ್ ಆದಾಯವನ್ನೇ ಅವಲಂಬಿಸಲು ಸಾಧ್ಯವಿಲ್ಲ ಮತ್ತು ಹೊಸ ಹೆಜ್ಜೆ ಇಡಲು ಸಿದ್ಧತೆ ನಡೆಸುತ್ತಿದ್ದೇನೆ ಎಂದು ಫಿರೋಜ್ ಹೇಳಿದ್ದಾರೆ. ನಾನು ಪ್ರಸ್ತುತ ಶಾರ್ಜಾದಲ್ಲಿದ್ದೇನೆ. ನಾವು ಒಂದು ಸಣ್ಣ ಹೆಜ್ಜೆ ಇಡುವ ಬಗ್ಗೆ ಯೋಚಿಸುತ್ತಿದ್ದೇವೆ. ಅದರ ಭಾಗವಾಗಿ ನಾವು ದುಬೈಗೆ ಬಂದಿದ್ದೇವೆ ಎಂದು ಯೂಟ್ಯೂಬ್ನಲ್ಲಿ ಹರಿಬಿಟ್ಟಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ನಾನು ಉದ್ಯಮಕ್ಕೆ ಇಳಿಯುವ ಬಗ್ಗೆ ಯೋಚಿಸುತ್ತಿದ್ದೇನೆ. ಯೂಟ್ಯೂಬ್ ನನ್ನ ಪ್ರಸ್ತುತ ಆದಾಯದ ಮೂಲವಾಗಿದೆ. ಆ ಆದಾಯವನ್ನು ಅವಲಂಬಿಸದೆ ನಾನು ಬೇರೆ ಯಾವುದಾದರೂ ವ್ಯವಹಾರವನ್ನು ಪ್ರಾರಂಭಿಸಿದರೆ ನೀವು ನನ್ನನ್ನು ಬೆಂಬಲಿಸುತ್ತೀರಾ? ನಾನು ರೆಸ್ಟೋರೆಂಟ್ ವ್ಯವಹಾರಕ್ಕೆ ಹೋದರೆ ಅದು ಎಷ್ಟು ಯಶಸ್ವಿಯಾಗುತ್ತದೆ ಎಂದು ನನಗೆ ತಿಳಿದಿಲ್ಲ. ಆಹಾರ ವ್ಯವಹಾರವು ಸ್ವಲ್ಪ ಅಪಾಯಕಾರಿ. ನಾನು ಏನಾದರೂ ವ್ಯವಹಾರ ಮಾಡಬೇಕು. ಆ ರೀತಿಯಲ್ಲಿ, ನಾನು ಒಂದು ಬ್ರ್ಯಾಂಡ್ ಅನ್ನು ನಿರ್ಮಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: NASA: ಜುಲೈ 30 ರಂದು NISAR ಉಪಗ್ರಹವನ್ನು ಉಡಾವಣೆ – ಮೊದಲ 90 ದಿನಗಳವರೆಗೆ NISAR ಕಾರ್ಯನಿರ್ವಹಿಸುವುದಿಲ್ಲ! ಏಕೆ?