Dharmasthala : ಶವ ಹೂತಿಟ್ಟ ಪ್ರಕರಣ – ಧರ್ಮಸ್ಥಳದಲ್ಲಿ ಸ್ಥಳ ಮಹಜರು ಆರಂಭ, ಪೊದೆಗಳನ್ನು ತೋರಿಸುತ್ತಿರುವ ದೂರುದಾರ!!

Dharmasthala : ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಇದೀಗ ಅನಾಮಿಕ ಸಾಕ್ಷಿ ದೂರುದಾರನನ್ನು ಬೆಳ್ತಂಗಡಿ ಎಸ್ಐಟಿ ಕಚೇರಿಯಿಂದ ಧರ್ಮಸ್ಥಳಕ್ಕೆ ಕರೆತಂದಿದ್ದು, ತನಿಖೆಯನ್ನು ಶುರು ಮಾಡಲಾಗಿದೆ.

ಇದೀಗ ಧರ್ಮಸ್ಥಳಕ್ಕೆ ಬಂದ ಈ ದೂರುದಾರ ಶವಗಳನ್ನು ಹೂತಿಟ್ಟ ಜಾಗಗಳನ್ನು ತೋರಿಸುತ್ತಿದ್ದು ಪೊಲೀಸರು ಅವುಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಕಂದಾಯ ಇಲಾಖೆ, ಅರಣ್ಯ ಇಲಾಖೆ, ಎಸ್‌ಬಿಸಿಒ ಅಧಿಕಾರಿಗಳು, ಎಫ್‌ಎಎಲ್ ತಜ್ಞರು ಎಸ್‌ಐಟಿ ತನಿಖಾಧಿಕಾರಿಗಳೊಂದಿಗೆ ಕೈಜೋಡಿಸಿದ್ದಾರೆ.
ಸರ್ವೇಯರ್ ಅಧಿಕಾರಿಗಳು ಕೂಡ ಹಲವು ದಾಖಲೆಗಳನ್ನು ತಂದಿದ್ದು, ಪೊಲೀಸರಿಗೆ ಅದನ್ನು ನೀಡಿದ್ದಾರೆ. ನೇತ್ರಾವತಿ ನದಿ ತಟದ ಬಳಿ ಜನಸಾಗರವೇ ಸೇರಿದ್ದು, ನೂರಾರು ಮಂದಿ ವೀಕ್ಷಿಸುತ್ತಿದ್ದಾರೆ. 40 ಅಧಿಕ ಮಾಧ್ಯಮಗಳ ವರದಿಗಾರರು ಸ್ಥಳದಲ್ಲಿ ಜಮಾಯಿಸಿದ್ದಾರೆ.
Comments are closed.