Dharmasthala : ಶವ ಹೂತಿಟ್ಟ ಪ್ರಕರಣ – ಧರ್ಮಸ್ಥಳಕ್ಕೆ ಮುಸುಕುದಾರಿ ಆಗಮನ !! ಆರೋಪಿಗಳಿಗೆ ಖೆಡ್ಡಾ, ಕ್ಷಣಗಣನೆ ಆರಂಭ!

Share the Article

Dharmasthala : ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಇದೀಗ ಅನಾಮಿಕ ಸಾಕ್ಷಿ ದೂರುದಾರನನ್ನು ಬೆಳ್ತಂಗಡಿ ಎಸ್ಐಟಿ ಕಚೇರಿಯಿಂದ ಧರ್ಮಸ್ಥಳಕ್ಕೆ ಕರೆತರಲಾಗುತ್ತಿದೆ

ಹೌದು, ಇಂದು ತನಿಖೆಯ ಭಾಗವಾಗಿ ಅನಾಮಿಕ ದೂರುದಾರನನ್ನು ಸ್ಥಳ ಮಹಜರಿಗೆ ಅಧಿಕಾರಿಗಳು ಕರೆದೊಯ್ಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಸಾಕ್ಷಿದೂರುದಾರನ ಆಗಮನವಾಗಿತ್ತು. ಇದೀಗ ಅಧಿಕಾರಿಗಳು ಈ ದೂರುದಾರನನ್ನು ಧರ್ಮಸ್ಥಳಕ್ಕೆ ಕರೆತರುತ್ತಿದ್ದಾರೆ.

ತಲೆಬುರುಡೆ ಸ್ಥಳ ಮಹಜರು ಪ್ರಕ್ರಿಯೆ ನಡೆಯಲಿದ್ದು, ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಎಸ್ಪಿ ಸೈಮನ್, ಅರಣ್ಯ ಇಲಾಖೆ, ಭೂ ದಾಖಲೆ ವಿಭಾಗದ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಧರ್ಮಸ್ಥಳ ಬುರುಡೆ ತೆಗೆದ ಜಾಗಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: Health tips: ನಿಮಗೆ ಮೊಡವೆಗಳು, ತುರಿಕೆ, ಕೆಂಪು ಕಲೆಗಳು ಮತ್ತು ಇತರ ಚರ್ಮದ ಅಲರ್ಜಿಗಳು ಇದೆಯೇ? ಈ ಮನೆಮದ್ದನ್ನು ಪ್ರಯತ್ನಿಸಿ!

Comments are closed.