Puttur: ಮಂಗಳೂರು – ಬೆಂಗಳೂರು : ಪ್ರಯಾಣಿಕರ ಅನೂಕೂಲಕ್ಕಾಗಿ ಬೆಂಗಳೂರಿಗೆ ಅಂಬಾರಿ ಉತ್ಸವ್ ಬಸ್ ಆರಂಭ

Puttur: ಪುತ್ತೂರಿನಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಕರ್ನಾಟಕ ಸರಕಾರ ಸಾರಿಗೆ ಇಲಾಖೆಯ ವತಿಯಿಂದ ಅಂಬಾರಿ ಉತ್ಸವ್ ಬಸ್ ಜು.27 ರಿಂದ ಸಂಚಾರ ಆರಂಭ ಮಾಡಿದೆ.

ಮಂಗಳೂರಿನಿಂದ ಹೊರಡುವ ಬಸ್ಸು ಪುತ್ತೂರಿಗೆ ಪ್ರತೀ ದಿನ ರಾತ್ರಿ 10.30 ಕ್ಕೆ ತಲುಪುತ್ತದೆ. ಪುತ್ತೂರು ಸುಳ್ಯ,ಮಡಿಕೇರಿ,ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತದೆ. ಪೂರ್ತಿ ಸ್ಟೀಪರ್ ಕೋಚ್ ಬಸ್ ಇದಾಗಿದ್ದು ಈ ಸೌಲಭ್ಯದಿಂದ ಪುತ್ತೂರು ಭಾಗದ ಪ್ರಯಾಣಿಕರು ವಂಚಿತರಾಗಿದ್ದರು. ಅಂಬಾರಿ ಉತ್ಸವ್ ಬಸ್ ಆರಂಭ ಮಾಡುವಂತೆ ಶಾಸಕ ಅಶೋಕ್ ರೈ ಅವರಿಗೆ ಸಾರ್ವಜನಿಕರು ಮನವಿ ಮಾಡಿದ್ದರು.
ಇದನ್ನೂ ಓದಿ: Indian army: ಭಾರತೀಯ ಸೇನೆಗೆ ಸೇರಲಿದೆ ಹೊಸ ಶಕ್ತಿ: ‘ರುದ್ರ’ ಬ್ರಿಗೇಡ್, ‘ಭೈರವ’ ಬೆಟಾಲಿಯನ್ ಪವರ್!
Comments are closed.