Suicide:ಮಲ್ಪೆ: ಬೆಲ್ಟ್ ನಿಂದ ನೇಣು ಬಿಗಿದು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ!

Suicide: ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಬೆಲ್ಟ್ ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿ ಸ್ವಸ್ತಿಕ್ ಮೃತ ದುರ್ದೈವಿ.

ಉಡುಪಿಯ ಕಾಲೇಜೊಂದರಲ್ಲಿ ಈತ ವ್ಯಾಸಂಗ ಮಾಡುತ್ತಿದ್ದ. ಮನೆಯ ಹಾಲ್ ನ ಕಿಟಕಿಗೆ ನೇಣು ಹಾಕಿಕೊಂಡು ಸೋಫಾದ ಮೇಲೆ ಒರಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ.
ಆತನನ್ನು ನೋಡಿದ ಕೂಡಲೇ ತಾಯಿ ಕುತ್ತಿಗೆಯಲ್ಲಿದ್ದ ಬೆಲ್ಟ್ ಕಟ್ ಮಾಡಿ ನೆರೆಮನೆಯವರ ಸಹಾಯದಿಂದ ಕಾರಿನಲ್ಲಿ ಗೆರೊಟ್ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಆದರೆ ಆತ ಆಗಲೇ ಮೃತಪಟ್ಟಿದ್ದ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.