Su From So: ತಲೆ ಕೆಳಗಾಯ್ತು ಎಲ್ಲಾ ಲೆಕ್ಕಾಚಾರ- ಎರಡು ದಿನದಲ್ಲಿ ಬರೋಬ್ಬರಿ ಮೂರು ಕೋಟಿ ಬಾಚಿದ ‘ಸು ಫ್ರಮ್ ಸೋ’ !!

Share the Article

Su From So: ಕನ್ನಡ ಚಿತ್ರರಂಗ ಕಳೆದ ಆರು ತಿಂಗಳಿನಿಂದ ಒಂದು ದೊಡ್ಡ ಗೆಲುವಿಗಾಗಿ ಎದುರು ನೋಡುತ್ತಿತ್ತು. ಇದಕ್ಕೆ ಭರವಸೆಯ ಬೆಳಕೊಂದು ಮೂಡಿದೆ. ಅದು “ಸು ಫ್ರಮ್‌ ಸೋ’. ರಾಜ್‌ ಬಿ ಶೆಟ್ಟಿ ನಿರ್ಮಾಣದಲ್ಲಿ ಮೂಡಿಬಂದಿರುವ ಮೂಡಿಬಂದಿರುವ “ಸು ಫ್ರಮ್‌ ಸೋ’ ಮತ್ತೆ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಇದು ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದ್ದು ದುಪ್ಪಟ್ಟು ಗಳಿಕೆಯತ್ತ ಮುನ್ನುಗ್ಗುತ್ತಿದೆ.

ಹೌದು, “ಸು ಫ್ರಮ್‌ ಸೋ” ಚಿತ್ರದ ಬಗ್ಗೆ ಗುರುವಾರದವರೆಗೂ ಹೆಚ್ಚು ಸುದ್ದಿಯೇ ಇರಲಿಲ್ಲ. ಯಾವಾಗ ಚಿತ್ರ ಶುಕ್ರವಾರ ಬಿಡುಗಡೆಯಾಗಿ ಚಿತ್ರ ಚೆನ್ನಾಗಿದೆ ಎಂಬ ಪ್ರತಿಕ್ರಿಯೆ ಹೊರಬಿತ್ತೋ, ಅಲ್ಲಿಂದ ಲೆಕ್ಕಾಚಾರವೇ ಬದಲಾಗಿದೆ. ಸದ್ಯ ಬೆಂಗಳೂರಿನಲ್ಲೇ 200ಕ್ಕೂ ಹೆಚ್ಚು ಪ್ರದರ್ಶನಗಳು ಕಾಣುತ್ತಿದೆ. ಚಿತ್ರದ ಗಳಿಕೆಯೂ ಹೆಚ್ಚಾಗಿದ್ದು, ಮೊದಲ ದಿನ ಸುಮಾರು 80 ಲಕ್ಷ ಗಳಿಕೆಯಾದರೆ, ಎರಡನೇ ದಿನ ಇನ್ನಷ್ಟು ಜಾಸ್ತಿಯಾಗಿದೆ. ಒಟ್ಟಾರೆ ಎರಡು ದಿನಗಳಿಂದ ಮೂರು ಕೋಟಿ ಗಳಿಕೆ ಆಗಿದೆ ಎಂದು ಹೇಳಲಾಗುತ್ತಿದೆ. ಹೊಸಬರ ಚಿತ್ರವೊಂದಕ್ಕೆ ಈ ರೀತಿಯ ಗಳಿಕೆ ಆಗುತ್ತಿರುವುದು ಹಲವರ ಹುಬ್ಬೇರಿಸಿದೆ.

ಈಗಾಗಲೇ ಚಿತ್ರಕ್ಕೆ ಬಾಯ್ಮಾತಿನ ಪ್ರಚಾರ ಸಿಕ್ಕಿ ಆಗಿದೆ. ಈ ಕಾರಣದಿಂದಲೇ ಚಿತ್ರ ಬಹುತೇಕ ಕಡೆಗಳಲ್ಲಿ ಹೌಸಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಮುಖ್ಯವಾಗಿ ಹೆಮ್ಮೆಯ ಸಂಗತಿ ಅಂದ್ರೆ ಪವನ್‌ ಕಲ್ಯಾಣ್‌ ನಟನೆಯ “ಹರಿಹರ ವೀರಮಲ್ಲು’ ಚಿತ್ರವನ್ನು ಹಿಂದಿಕ್ಕಿದ “ಸು ಫ್ರಮ್‌ ಶೋ’, ಆ ಚಿತ್ರಕ್ಕೆ ನೀಡಿದ ಶೋಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

Comments are closed.