Congress: ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಉಷಾ ಅಂಚನ್!

Share the Article

Congress: ದ.ಕ.ಜಿಲ್ಲಾ ಮಹಿಳಾ

ಕಾಂಗ್ರೆಸ್ (Congress) ಅಧ್ಯಕ್ಷೆಯಾಗಿ ತಾ.ಪಂ.

ಮಾಜಿ ಸದಸ್ಯೆ, ಪ್ರಸ್ತುತ ದ.ಕ.ಜಿಲ್ಲಾ

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ನೆಲ್ಯಾಡಿಯ ಉಷಾ ಅಂಚನ್ ರವರು ನೇಮಕಗೊಂಡಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿ ಉಸ್ತುವಾರಿಯೂ ಆಗಿರುವ ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿಯವರ ಸೂಚನೆಯಂತೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೌಮ್ಯ ರೆಡ್ಡಿಯವರ ಶಿಫಾರಸಿನ ಮೇರೆಗೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅಲ್ಲಾ ಲಂಬಾ ಅವರು ಈ ನೇಮಕ ಮಾಡಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ: ಶುರುವಾಗಿಬಿಟ್ಟ SIT ತನಿಖೆ, ಮುಖವಾಡದ ಹಿಂದೆ ಪ್ರತ್ಯಕ್ಷವಾದ ದೂರುದಾರ

Comments are closed.