Viral Video : ಬೆಕ್ಕೆಂದು ಭಾವಿಸಿ ಚಿರತೆಯನ್ನು ಅಟ್ಟಾಡಿಸಿದ ಬೀದಿ ನಾಯಿಗಳು – ಮುಂದಾಗಿದ್ದು ಗೊತ್ತಾದರೆ ಬಿದ್ದು ಬಿದ್ದು ನಗ್ತೀರಾ!!

Viral Video : ಬೆಕ್ಕೆಂದು ಭಾವಿಸಿ ಬೀದಿನಾಯಿಗಳ ಗುಂಪೊಂದು ಅಟ್ಟಾಡಿಸಿಕೊಂಡು ಹೋಗಿ ಕೊನೆಗೆ ಅದು ಬೆಕ್ಕಲ್ಲಾ ಚಿರತೆ ಎಂಬುದು ಗೊತ್ತಾಗುತ್ತಿದ್ದಂತೆ ಹೋದ ದಾರಿಯಲ್ಲೇ ದಿಕ್ಕಾಪಾಲಾಗಿ ಓಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಹೌದು, ನಾಯಿಗಳ ಗುಂಪೊಂದು ಬೆಕ್ಕು ಎಂದು ಭಾವಿಸಿ ರಸ್ತೆಯುದ್ದಕ್ಕೂ ಚಿರತೆಯೊಂದನ್ನು ಬೆನ್ನಟ್ಟಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆ ಜುಲೈ 3 ರಂದು ರಾತ್ರಿ 11:00 ಗಂಟೆ ಸುಮಾರಿಗೆ ನಡೆದಿದೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಚಿರತೆಯೊಂದು ರಾತ್ರಿ 11:00 ರ ಸುಮಾರಿಗೆ ನಗರ ಪ್ರದೇಶದಲ್ಲಿ ರಸ್ತೆ ದಾಟುತ್ತಿರುವುದು ಕಂಡು ಬಂದಿದೆ ಇದಾದ ಬೆನ್ನಲ್ಲೇ 9 ಬೀದಿ ನಾಯಿಗಳ ಗುಂಪೊಂದು ಚಿರತೆಯನ್ನು ಅಟ್ಟಾಡಿಸಿಕೊಂಡು ಹೋಗಿದೆ, ಇದಾದ ಕೆಲ ಸಮಯದ ಬಳಿಕ ಬೀದಿನಾಯಿಗಳ ಗುಂಪು ಹೋದ ವೇಗದಲ್ಲೇ ಹಿಂತಿರುಗಿ ದಿಕ್ಕಾಪಾಲಾಗಿ ಓಡುತ್ತಿರುವುದು ಕಾಣುತ್ತದೆ, ಬಹುಶ ಚಿರತೆ ರಸ್ತೆ ದಾಟುವ ವೇಳೆ ಬೀದಿ ನಾಯಿಗಳು ಚಿರತೆಯನ್ನು ತಪ್ಪಾಗಿ ಗುರುತಿಸಿ ಬೆಕ್ಕು ಇರಬೇಕು ಎಂದು ಎಣಿಸಿ ಬೆನ್ನತ್ತಿವೆ ಆದರೆ ಕೆಲ ದೂರ ಹೋದ ಬಳಿಕ ನಾಯಿಗಳಿಗೆ ಇದು ಬೆಕ್ಕಲ್ಲ ಚಿರತೆ ಎಂಬುದು ಅರಿವಾಗಿದೆ, ಈ ವೇಳೆ ಬದುಕಿದೆಯಾ ಬಡ ಜೀವ ಎಂದು ಹೇಳಿ ದಿಕ್ಕಾಪಾಲಾಗಿ ಓಡಿವೆ.
ಈ ವಿಡಿಯೋವನ್ನು X ನಲ್ಲಿ “ಅವು ಕೇವಲ ಬೆಕ್ಕು ಎಂದು ಭಾವಿಸಿದ್ದವು” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಅಂತರ್ಜಾಲದಲ್ಲಿ ನಗೆಯ ಅಲೆ ಎಬ್ಬಿಸಿದೆ.
They thought it’s just a CAT
pic.twitter.com/EO6P9Z4ODi— Ghar Ke Kalesh (@gharkekalesh) July 15, 2025
Comments are closed.