SSLC Mark: SSLC ಪಾಸಿಂಗ್ ಪರ್ಸಂಟೆಜ್ ಕಡಿತ ವಿಚಾರ – ಇನ್ಮೇಲೆ ಒಟ್ಟು 206 ಮಾರ್ಕ್ ಸಿಕ್ರೆ ಪಾಸ್

SSLC Mark: ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮಕ್ಕಳು ಇನ್ನು ಮುಂದೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಮಾದರಿಯಲ್ಲೇ ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (PUC) ಪರೀಕ್ಷೆ ಬರೆಯಲಿದ್ದಾರೆ. ಲಿಖಿತ ಪರೀಕ್ಷೆ ಮತ್ತು ಅಂತರಿಕ ಅಂಕಗಳೂ ಸೇರಿ 100ಕ್ಕೆ ಕನಿಷ್ಠ ಅಂದರೆ ಶೇ. 33 ಅಂಕ ಪಡೆದರೆ ವಿದ್ಯಾರ್ಥಿಗಳು ಪಾಸಾಗಲಿದ್ದಾರೆ. ಸರ್ಕಾರದ ನಿರ್ಧಾರವನ್ನ ಕೃಪಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸ್ವಾಗತಿಸಿದ್ದಾರೆ.

ಕಳೆದ ಐದು ವರ್ಷದಿಂದ ಪಾಸಿಂಗ್ ಮಾರ್ಕ್ಸ್ ವಿಚಾರವಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೆವು. ಈಗ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದನ್ನ ಸ್ವಾಗತಿಸುತ್ತೇವೆ. ಈ ಹಿಂದೆ ಮಕ್ಕಳು ಪಾಸ್ ಆಗಬೇಕಾದ್ರೆ 218ಅಂಕ ಪಡೆಯಬೇಕಿತ್ತು. ಆದ್ರೆ ಈಗ 206ಕ್ಕೆ ಇಳಿಕೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಲಾಭವಾಗಲಿದೆ. ಆದ್ರೆ ಸರ್ಕಾರ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಮತ್ತೆ ಶಿಕ್ಷಣ ಗುಣಮಟ್ಟ ಕುಸಿಯುವ ಆತಂಕ ಇದೆ ಎಂದು ಲೋಕೇಶ್ ತಾಳಿಕಟ್ಟೆ ಅವರು ಹೇಳಿದರು.
ಸಿಬಿಎಸ್ಇಯಲ್ಲಿ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸುವ ಆಧಾರದ ಮೇಲೆ ಪ್ರಾಕ್ಟಿಕಲ್ ಅಂಕಗಳನ್ನು ಕೊಡಲಾಗುತ್ತೆ. ಆದ್ರೆ ರಾಜ್ಯ ಪಠ್ಯಕ್ರಮದಲ್ಲಿ ಈ ರೀತಿ ಇಲ್ಲ. ಇದನ್ನ ಸರ್ಕಾರ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದು ಖಾಸಗಿ ವಾಹಿನಿಯೊಂದಕ್ಕೆ ಕೃಪಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿಕೆ ನೀಡಿದ್ದಾರೆ.
Comments are closed.