Rayachur : ದೇವರ ಉದ್ಯಾನವನದಲ್ಲಿ ಹೇಳೋರಿಲ್ಲ, ಕೇಳೋರಿಲ್ಲ – 10 ರೂ. ಟಿಕೆಟ್ ಬದಲು 200 ರೂ. ಕೊಟ್ರೆ ಇಲ್ಲಿ ಎಲ್ಲದೂ ಖುಲ್ಲಂ ಖುಲ್ಲಾ !

Share the Article

Rayachur : ರಾಯಚೂರಿನ (Raichur) ಲಿಂಗಸುಗೂರು (Lingsugur) ತಾಲೂಕಿನ ದೇವರಬೂಪುರ ಗ್ರಾಮದ ಅಮರೇಶ್ವರ ದೇವಾಲಯದ (Amareshwara Temple) ಪುಣ್ಯ ಸ್ಥಳದ ಉದ್ಯಾನವನದಲ್ಲಿ ಅನೈತಿಕ ಚಟುವಟಿಕೆಗಳು ಬೆಳಕಿಗೆ ಬಂದಿವೆ. ಹತ್ರುಪಾಯಿ ಟಿಕೆಟ್ ಇರುವ ಈ ಉದ್ಯಾನದಲ್ಲಿ 200 ರೂ ನೀಡಿದರೆ ಎಲ್ಲದಕ್ಕೂ ಪರ್ಮಿಷನ್ ಸಿಗುತ್ತದೆ ಎಂಬ ಆರೋಪವು ಕೂಡ ಕೇಳಿ ಬಂದಿದೆ.

ಹೌದು, ಉದ್ಯಾನಕ್ಕೆ ಪ್ರವೇಶದರ 10 ರೂಪಾಯಿ ಇದೆ. ಆದರೆ 200 ರೂಪಾಯಿ ಕೊಟ್ಟರೆ ಇಲ್ಲಿ ಏನ್‌ಬೇಕಾದ್ರೂ ಮಾಡಬಹುದಾಗಿದೆ ಎಂಬ ಆರೋಪವಿದೆ. ಇದೀಗ ಜೋಡಿಯೊಂದು ಅನೈತಿಕ ಚಟುವಟಿಕೆ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಆರೋಪಗಳಿಗೆ ಪುಷ್ಟಿ ನೀಡಿದೆ.ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕನ್ನಡ ಸಂಘಟನೆ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ದೂರು ನೀಡಿದ್ದು ‘ಈ ಭಾಗದ ಆರಾಧ್ಯ ಧೈವ ಶ್ರೀ ಅಮರೇಶ್ವರ ಇಡೀ ಜಿಲ್ಲೆಗೆ ಹೆಸರು ವಾಸಿಯಾದ ಕ್ಷೇತ್ರವಾಗಿದೆ. ಇಂತಹ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ವಿಶ್ರಾಂತಿಗಾಗಿ ಈ ಹಿಂದೆ ದೈವಿ ಉದ್ಯಾನವನ ನಿರ್ಮಿಸಲಾಗಿತ್ತು, ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ದೈವಿವನದಲ್ಲಿ ಅನೈತಿಕ ಚಟುವಟಿಕೆ, ವೇಶವಾಟಿಕೆಯಂತಹ ಚಟುವಟಿಕೆಗಳ ತಾಣವಾಗಿ ಮಾರ್ಪಟಿದೆ. ದೈವ ಭಕ್ತರ ಸ್ಥಳದಲ್ಲಿ ವೇಶವಾಟಿಕೆ ಮಾಡುತ್ತಿರುವುದು ಭಕ್ತರು ತಲೆತಗ್ಗಿಸುವಂತಹ ವಿಷಯವಾಗಿದೆ. ಅಲ್ಲದೇ ಈ ವನದಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರ ಪವಾಡೆಪ್ಪ ತಂ/ ಗಂಗಪ್ಪ ಶರಣ ಸಾ। ಗುಂತಗೋಳ ಇವರು ಉದ್ಯಾನವನಕ್ಕೆ ಬರುವ ಭಕ್ತರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿದ್ದಾನೆ. ಹಣ ವಸೂಲಿಗೆ ಯಾವುದೇ ತರಹದ ಚೀಟಿ ನೀಡುವುದಿಲ್ಲ. ತಾನೇ ಅಧಿಕಾರಿಯಂತೆ ವರ್ತಿಸುತ್ತಿದ್ದಾನೆ. ಅಲ್ಲದೇ ಉದ್ಯಾನವನದಲ್ಲಿ ಕುರಿ. ಮೇಕೆಗಳನ್ನು ಮೇಯಿಸಲು ಬೀಡುತ್ತಿರುವುದು ಎಷ್ಟು ಸರಿ, ಈತನ ಕಾರಣದಿಂದಾಗಿ ಉದ್ಯಾನವನ ಹಾಳು ಉದ್ಯಾನವವಾಗಿ ಮಾರ್ಪಟಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ದೂರಿನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: CM-DCM: ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ: ಗದ್ದುಗೆ ಪಡೆಯಲು ಡಿ.ಕೆ.ಶಿವಕುಮಾರ್ ದೆಹಲಿ ಯಾತ್ರೆ – ಪ್ರತ್ಯೇಕವಾಗಿ ರಾಹುಲ್ ಗಾಂಧಿ ಭೇಟಿಗೆ ನಿರ್ಧಾರ

Comments are closed.