Manipal : ಜಿಟಿ ಜಿಟಿ ಮಳೆಯಲ್ಲಿ ಸೊಂಟದ ಕೆಳಗೆ ಏನೂ ಹಾಕದೆ ಸ್ಕೂಟರ್ ಓಡಿಸಿದ ವ್ಯಕ್ತಿ – ವಿಡಿಯೋ ವೈರಲ್ !!

Share the Article

Malipal : ಕರಾವಳಿಯಲ್ಲಿ ಎಲ್ಲೆಡೆ ಮಳೆಯ ಆರ್ಭಟ ಜೋರಾಗಿದೆ. ಈ ಮಳೆಯಲ್ಲಿ, ಚಳಿಯಲ್ಲಿ ಹೊರಗೆ ಹೋಗುವುದೇ ಬೇಡವೆಂದು ಅನೇಕರು ಮನೆಯಲ್ಲಿ ಬೆಚ್ಚಗಿರುತ್ತಾರೆ. ಆದರೆ ಇನ್ನೊಬ್ಬ ಆಸಾಮಿ ಜಿಟಿ ಜಿಟಿ ಮಳೆಯ ನಡುವೆ, ಸೊಂಟದ ಕೆಳಗೆ ಏನನ್ನು ಧರಿಸದೆ, ಅರೆಬೆತ್ತಲಾಗಿ ಬೈಕ್ ಓಡಿಸುತ್ತಾ ಜಾಲಿ ರೈಡ್ ಮಾಡಿರುವ ಘಟನೆ ಮಣಿಪಾಲದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

@ellkaani ಎಂಬ ಯೂಟ್ಯೂಬ್ ಪೇಜ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಅದಕ್ಕೆ ‘ಹನಿ ಹನಿ ಮಳೆಯಲ್ಲಿ ಚಡ್ಡಿ ಧರಿಸದೆ ಸ್ಕೂಟಿ ಓಡಿಸಿದ ವ್ಯಕ್ತಿ… ?! ಮಣಿಪಾಲದ ರಸ್ತೆಯಲ್ಲಿ ಕೇವಲ ಬನಿಯನ್‌ ಮಾತ್ರ ಧರಿಸಿ. ಹೆಲ್ಮೇಟ್‌ ಸೈಡ್‌ ಮಿರರ್‌ ಗೆ ಸಿಕ್ಕಿಸಿ, ಮಧ್ಯ ವಯಸ್ಸಿನ ಪುರುಷನೋರ್ವ ಸ್ಕೂಟಿ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ…

ಅಂದಹಾಗೆ ಕಾರಿನಲ್ಲಿ ಕೂತು ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಮುಂದೆ ಬೈಕ್ ನಲ್ಲಿ ಒಬ್ಬ ಸುಮಾರು 55 ರಿಂದ 60 ವರ್ಷದ ಪ್ರಾಯದ ವ್ಯಕ್ತಿ ಒಬ್ಬರು ಕೇವಲ ಬನಿಯನ್ ಧರಿಸಿಕೊಂಡು, ಸೊಂಟದ ಕೆಳಗೆ ಏನನ್ನು ಉತ್ತರಿಸದೆ ಬೈಕ್ ಓಡಿಸುತ್ತಿರುವುದನ್ನು ಕಾಣಬಹುದು.

https://youtube.com/shorts/nIPoQlDessk?si=Uu6U0SRHsS6dpUaX

ಇದನ್ನೂ ಓದಿ: Viral Video : ಬೆಕ್ಕೆಂದು ಭಾವಿಸಿ ಚಿರತೆಯನ್ನು ಅಟ್ಟಾಡಿಸಿದ ಬೀದಿ ನಾಯಿಗಳು – ಮುಂದಾಗಿದ್ದು ಗೊತ್ತಾದರೆ ಬಿದ್ದು ಬಿದ್ದು ನಗ್ತೀರಾ!!

Comments are closed.