Dasara: ಮೈಸೂರು ದಸರಾಕ್ಕೆ 9 ಆನೆಗಳ ಮೊದಲ ಪಟ್ಟಿ ಬಿಡುಗಡೆ- ಈ ಬಾರಿ ಅಂಬಾರಿ ಹೊರೋದು ಯಾರು?

Share the Article

Dasara: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆ ಪೂರ್ಣಸಿದ್ಧತೆ ಪೂರ್ಣಗೊಂಡಿದೆ. ಈ ಬೆನ್ನಲ್ಲೇ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳ ಪಟ್ಟಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ.

ಹೌದು, ಈ ಬಾರಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಒಟ್ಟು 14 ಆನೆಗಳ ಪೈಕಿ 9 ಆನೆಗಳ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಿರೀಕ್ಷೆಯಂತೆ ಈ ಬಾರಿಯೂ ಆನೆ ಅಭಿಮನ್ಯು ಗಜಪಡೆಯ ಕ್ಯಾಪ್ಟನ್ ಆಗಿ ಚಿನ್ನದ ಅಂಬಾರಿ ಹೊರಲಿದೆ

ಆಗಸ್ಟ್ 4 ರಂದು ಆನೆಗಳು ಕಾಡಿನಿಂದ ನಾಡಿಗೆ ಬರಲಿದೆ ಎಂದು ಮೈಸೂರು ಜಿಲ್ಲಾಡಳಿತ ಹೇಳಿದೆ. ಹೀಗಾಗಿ ಆಗಸ್ಟ್ 4 ರಂದು ಆನೆ ಶಿಬಿರಗಳಿಂದ ಆನೆಗಳನ್ನು ಮೈಸೂರಿಗೆ ಕರೆ ತರಲಾಗುತ್ತದೆ ಎಂದಿದ್ದಾರೆ.

ದಸರಾ ಆನೆಗಳ ಪಟ್ಟಿ

ಕ್ಯಾಪ್ಟನ್ ಅಭಿಮನ್ಯು, 59 ವರ್ಷ, ನಾಗರಹೊಳೆಯ ಮತ್ತಿಗೋಡು ಶಿಬಿರ, ದಸರಾ ಅನುಭವ: 20 ವರ್ಷ

ಭೀಮ, 25 ವರ್ಷ, ಮತ್ತಿಗೋಡು ಶಿಬಿರ, ದಸರಾ ಅನುಭವ: 4 ವರ್ಷ

ಪ್ರಶಾಂತ, 53 ವರ್ಷ, ದುಬಾರೆ ಶಿಬಿರ, ದಸರಾ ಅನುಭವ: 15 ವರ್ಷ

ಮಹೇಂದ್ರ, 42 ವರ್ಷ, ಮತ್ತಿಗೋಡು ಶಿಬಿರ, ದಸರಾ ಅನುಭವ: 4 ವರ್ಷ

ಧನಂಜಯ, 45 ವರ್ಷ, ದುಬಾರೆ ಶಿಬಿರ, ದಸರಾ ಅನುಭವ: 7 ವರ್ಷ

ಕಂಜನ್, 26 ವರ್ಷ, ದುಬಾರೆ ಶಿಬಿರ, ದಸರಾ ಅನುಭವ: 2 ವರ್ಷ

ಏಕಲವ್ಯ, 40 ವರ್ಷ, ಮತ್ತಿಗೋಡು, ದಸರಾ ಅನುಭವ: 2 ವರ್ಷ

ಕಾವೇರಿ, 45 ವರ್ಷ, ದುಬಾರೆ ಶಿಬಿರ, ದಸರಾ ಅನುಭವ: 13 ವರ್ಷ

ಲಕ್ಷ್ಮಿ, 54 ವರ್ಷ, ಬಳ್ಳೆ ಆನೆ ಶಿಬಿರ , ದಸರಾ ಅನುಭವ: 2 ವರ್ಷ

ಇದನ್ನೂ ಓದಿ: Elephant Attack: ಮಡಿಕೇರಿ ಸುತ್ತಮುತ್ತ ನಿಲ್ಲದ ಕಾಡಾನೆಗಳ ಪುಂಡಾಟ – ಚೆಂಬು ಗ್ರಾಮದಲ್ಲಿ ಆನೆಗಳ ದಾಂಧಲೆ – ಹೈರಾಣದ ಗ್ರಾಮಸ್ಥರು

Comments are closed.