Home News Viral Video : ‘ಅಪ್ಪಾಜಿ.. ಅಪ್ಪಾಜಿ.. ಇಲ್ನೋಡಿ ಅಪ್ಪಾಜಿ ಪ್ಲೀಸ್ ‘ ಎಂದು ಮಗಳಿಗಾಗಿ ಗೋಗರೆದ...

Viral Video : ‘ಅಪ್ಪಾಜಿ.. ಅಪ್ಪಾಜಿ.. ಇಲ್ನೋಡಿ ಅಪ್ಪಾಜಿ ಪ್ಲೀಸ್ ‘ ಎಂದು ಮಗಳಿಗಾಗಿ ಗೋಗರೆದ ಮಹಿಳೆ – ಕ್ಯಾರೆ ಎನ್ನದೆ ಸೀದಾ ಹೋದ ಸಿಎಂ ಸಿದ್ದರಾಮಯ್ಯ !!

Hindu neighbor gifts plot of land

Hindu neighbour gifts land to Muslim journalist

Viral Video : ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ವೈರಲ್ ಆಗುವ ವಿಡಿಯೋಗಳು ಎಂತವರ ಮನವನ್ನು ಕಲಕಿಬಿಡುತ್ತದೆ. ಒಮ್ಮೊಮ್ಮೆ ಕಣ್ಣಲ್ಲಿ ನೀರನ್ನು ತರಿಸುತ್ತದೆ. ಇದೀಗ ಅಂತದ್ದೇ ವಿಡಿಯೋ ಒಂದು ವೈರಲ್ ಆಗಿದ್ದು ಮಹಿಳೆ ಒಬ್ಬರು ಸಿಎಂ ಸಿದ್ದರಾಮಯ್ಯ ಅವರ ಬಳಿ ತನ್ನ ಮಗಳ ಚಿಕಿತ್ಸೆ ವಿಚಾರವಾಗಿ ಸಹಾಯ ಹಸ್ತ ಚಾಚಿ ಗೋಗರೆದರು ಕೂಡ ಸಿಎಂ ಕ್ಯಾರೇ ಎನ್ನದೆ ಸೀದಾ ಹೋಗಿದ್ದಾರೆ. ಆಗ ಆ ತಾಯಿಯ ದುಃಖದ ಆ ಮುಖವನ್ನು ಕಂಡಾಗ ಇಂಥವರಿಗೂ ಕೂಡ ಕರುಳು ಹಿಂಡುತ್ತದೆ.

ಹೌದು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಕಷ್ಟಗಳನ್ನು ಆಲಿಸುವ ವೇಳೆ ದಂಪತಿಯೊಂದು ತನ್ನ ಮಗುವನ್ನು ಎತ್ತಿಕೊಂಡು ಪರಿಹಾರ ಕೇಳಲು ಅವರ ಬಳಿ ಬರುತ್ತದೆ. ಆಗ ತಾಯಿ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾ ಪರಿಹಾರ ಕೇಳಿದಾಗ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡದೆ ಮುನ್ನಡೆಯುತ್ತಾರೆ. ಆಗ ಆ ತಾಯಿ “ಅಪ್ಪಾಜಿ.. ಅಪ್ಪಾಜಿ ಸಿದ್ದರಾಮಯ್ಯ ಅಪ್ಪಾಜಿ ನೋಡಿ ಅಪ್ಪಾಜಿ” ಎಂದು ಕರೆಯುತ್ತಾರೆ. ಈ ಬೆಳೆ ಕೊಂಚ ತಿರುಗಿದ ಸಿಎಂ ಬಳಿ ಆ ಮಹಿಳೆ ಮಗಳ ಚಿಕಿತ್ಸೆಗಾಗಿ ಕಳೆದ ಬಾರಿ ನಿಮಗೆ ಪತ್ರ ಕೊಟ್ಟಿದ್ದೆವು. 16 ಕೋಟಿ ರೂಪಾಯಿ ಖರ್ಚಾಗುತ್ತದೆ ಎಂದು ಹೇಳಿದ್ದೆವು ಎಂದು ಹೇಳುತ್ತಾರೆ. ಹೀಗೆ ಮಹಿಳೆ ಎಷ್ಟು ಬೇಡಿಕೊಂಡರೂ ಕೂಡ ಸಿಎಂ ಯಾವುದೇ ಪ್ರತಿಕ್ರಿಯೆ ನೀಡದೆ ತಮ್ಮ ಪಾಡಿಗೆ ತಾವು ಹೊರಟು ಹೋಗುತ್ತಾರೆ.

ಸಿಎಂ ಆ ಕಡೆ ತಿರುಗಿ ಮುನ್ನಡೆಯುತ್ತಿದ್ದಂತೆ ಆ ತಾಯಿಯ ಮುಖದಲ್ಲಿ ಕಂಡ ನಿರಾಶ ಭಾವನೆ, ದುಃಖ ಹಾಗೂ ಮಗುವನ್ನು ಎತ್ತಿಕೊಂಡು ನಿಂತ ತಂದೆಯ ಅಸಹಾಯಕತೆ ಎಂತಹ ಕಲ್ಲು ಹೃದಯದವರನ್ನು ಕೂಡ ಕರಗಿಸಿಬಿಡುತ್ತದೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

https://www.instagram.com/reel/DI6TY9mzLIS/?igsh=MnRyOGswdDl5eXZj

ಇದನ್ನೂ ಓದಿ: Viral Post : 20 ವರ್ಷಗಳಿಂದಲೂ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದ ತಾಯಿ – ಆಕೆಯ ಸಾವಿನ ಬಳಿಕ ಬಹಿರಂಗವಾಯ್ತು ಕಾರಣ !!