Home News Chain snatch: ಹಾಡು ಹಗಲೇ ಮಹಿಳೆ ಮೇಲೆ ಹಲ್ಲೆ ನಡೆಸಿ ಸರ ಅಪಹರಣ – ...

Chain snatch: ಹಾಡು ಹಗಲೇ ಮಹಿಳೆ ಮೇಲೆ ಹಲ್ಲೆ ನಡೆಸಿ ಸರ ಅಪಹರಣ – ಕಳ್ಳನನ್ನು ಪತ್ತೆ ಹಚ್ಚಿ ಧರ್ಮದೇಟು ನೀಡಿದ ಗ್ರಾಮಸ್ಥರು

Hindu neighbor gifts plot of land

Hindu neighbour gifts land to Muslim journalist

Chain snatch: ಸರ ಕಳ್ಳತನ ಇತ್ತೀಚಿನ ದಿನಗಳಲ್ಲಿ ಕೊಂಚ ಕಮ್ಮಿಯಾಗಿತ್ತು. ಇಲ್ಲವೆಂದರೆ ದಿನ ಬೆಳಗಾದರೆ ಸರಗಳ್ಳರದ್ದೇ ಸುದ್ದಿ. ಇದೀಗ ಮಡಿಕೇರಿ ತಾಲೂಕಿನ ಕೊಂಡಂಗೇರಿ ಗ್ರಾಮದಲ್ಲಿ ಹಾಡ ಹಗಲೇ ಕುಡಿಯಲು ನೀರು ಕೇಳುವ ನೆಪದಲ್ಲಿ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಚಿನ್ನದ ಸರ ದೋಚಿ ಪರಾರಿಯಾಗಿದ್ದ. ಬಳಿಕ ಗ್ರಾಮಸ್ಥರ ಕೈಗೆ ಸಿಕ್ಕಿ ಹಣ್ಣು ಗಾಯಿ ನೀರು ಗಾಯಿಯಾದ ಘಟನೆ ನಡೆದಿದೆ.

ಗ್ರಾಮದ ಸಾರಮ್ಮ ಎಂಬುವವರು ತನ್ನ ಸೊಸೆಯೊಂದಿಗೆ ವಾಸದಲ್ಲಿದ್ದ ಮನೆಗೆ ಆಗಮಿಸಿದ ಕಳ್ಳ ಪಕ್ಕದಲ್ಲಿ ಕೆಲಸಕ್ಕೆ ಬಂದಿದ್ದು ಕುಡಿಯಲು ನೀರು ಬೇಕು ಎಂದು ಕೇಳಿದ್ದಾನೆ, ನೀರು ತಂದು ಕೊಡುತ್ತಿದ್ದಂತೆ ಆಕೆಯ ಕುತ್ತಿಗೆಯಲ್ಲಿದ ಸರಕ್ಕೆ ಕೈ ಹಾಕಿದ್ದು, ಮಹಿಳೆ ಪ್ರತಿರೋಧ ತೋರಿಸಿದಕ್ಕೆ ಕೈ ನಲ್ಲಿದ್ದ ಚಾಕುವಿನಿಂದ ಹಲ್ಲೆ ಮಾಡಿ ಸರ ಕಿತ್ತು ಪರಾರಿಯಾಗಿದ್ದಾನೆ.

ತಕ್ಷಣ ಎಚೆತ್ತುಕೊಂಡ ಗ್ರಾಮದ ಯುವಕರು ಗ್ರಾಮದಲ್ಲಿ ಕಳ್ಳನಿಗಾಗಿ ಹುಡುಕಾಟ ನಡೆಸಿದ್ದು, ಈ ಸಂದರ್ಭ ಕಾಫಿ ತೋಟವೊಂದರಲ್ಲಿ ಅವಿತು ಕುಳಿತಿದ್ದ ಕಳ್ಳ ಪಾಲಿಬೆಟ್ಟ ಗ್ರಾಮದ ಹ್ಯಾರಿಸ್ ಪುತ್ರ ಮನಾವರ್ ನನ್ನು ಗ್ರಾಮಸ್ಥರು ಹಿಡಿದಿದ್ದಾರೆ. ಅಲ್ಲದೆ ಪೊಲೀಸರಿಗೆ ಒಪ್ಪಿಸುವ ಮೊದಲು ಆಥನಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ. ಇದೀಗ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Prakash Raj: ಬೆಟ್ಟಿಂಗ್ ಆ್ಯಪ್ ಪ್ರಚಾರ: ನಟ ಪ್ರಕಾಶ್ ರಾಜ್ ಸಹಿತ ಹಲವರಿಗೆ ಇ.ಡಿ ಸಮನ್ಸ್!