Maharastra : ನಾಯಿಗಳನ್ನು ವಾಕ್ ಮಾಡಿಸಿ ತಿಂಗಳಿಗೆ 4.5 ಲಕ್ಷ ಹಣ ಗಳಿಸುತ್ತಾನೆ ಈ ಯುವಕ!!

Maharastra : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜೀವನ ನಡೆಸುವುದೇ ದೊಡ್ಡ ಸಂಗತಿ. ಕೆಲವರು ತಮ್ಮ ಓದಿಗೆ ತಕ್ಕ ರೀತಿಯ ಕೆಲಸ ಬೇಕು ಎಂದು ಪ್ರತಿಷ್ಠೆ ಬಿದ್ದರೆ, ಮತ್ತೆ ಕೆಲವರು ಎಷ್ಟೇ ಓದಿದರೂ ಕೂಡ ಜೀವನ ನಡೆಸಲು ಯಾವುದಾದರೂ ಒಂದು ಕೆಲಸ ಸಿಕ್ಕಿದರೆ ಸಾಕು ಎಂದು ಅನೇಕರು ಪರಿತಪಿಸುತ್ತಾರೆ. ಇನ್ನು ಕೆಲವರು ತಮ್ಮ ಕ್ರಿಯಾತ್ಮಕ ಆಲೋಚನೆಗಳಿಂದ ಸಾಕಷ್ಟು ದುಡಿಮೆ ಮಾಡುತ್ತಾರೆ. ಅಂತೇ ಮಹಾರಾಷ್ಟ್ರದ ಯುವಕನೊಬ್ಬ ತನ್ನ ಜೀವನದ ದಿಕ್ಕಿನ ಬದಲಾಗಿಸಿಕೊಂಡು ಎಲ್ಲಾರಿಗೂ ಅಚ್ಚರಿಯಾಗುವಂತೆ ಸಾಕುಪ್ರಾಣಿಗಳಿಗೆ ವಾಕ್ ಮಾಡಿಸುವಂತಹ ಉದ್ಯೋಗವನ್ನು ಆರಿಸಿಕೊಂಡು ತಿಂಗಳಿಗೆ ಲಕ್ಷ ಲಕ್ಷ ಹಣ ಸಂಪಾದಿಸುತ್ತಿದ್ಧಾನೆ

ಹೌದು, ಮಹಾರಾಷ್ಟ್ರದ ಈ ಯುವಕನ ಪ್ರತಿದಿನದ ಕೆಲಸ ಶುರುವಾಗುವುದೇ ಸಾಕು ನಾಯಿಗಳನ್ನು ಹೊರಗೆ ಕರೆದುಕೊಂಡು ವಾಕಿಂಗ್ ಮಾಡಿಸುವುದು. ಇದು ನಮ್ಮ ಕಣ್ಣೀಗೆ ಸಣ್ಣ ಕೆಲಸವಾಗಿ ಕಾಣಬಹುದು ಆದರೆ ಅವನು ಇದರಿಂದಾಗಿಯೇ ತಿಂಗಳಿಗೆ 4.5 ಲಕ್ಷ ಹಣವನ್ನು ಸಂಪಾದನೆ ಮಾಡುತ್ತಾನೆ. ಈತ ಪ್ರತಿದಿನ 38 ನಾಯಿಗಳನ್ನು ವಾಕ್ ಮಾಡಿಸುತ್ತಾನೆ. ಪ್ರತಿ ನಾಯಿಗೆ ತಿಂಗಳಿಗೆ ಕನಿಷ್ಠ 15,000 ರೂ. ಸಿಗುತ್ತದೆ. ಒಟ್ಟು ತಿಂಗಳಿಗೆ ಸುಮಾರು 4.5 ಲಕ್ಷ ರೂ. ಇದು ಸಾಫ್ಟ್‌ವೇರ್ ಎಂಜಿನಿಯರ್ ಅಥವಾ ವೈದ್ಯರಿಗಿಂತ ಹೆಚ್ಚಿನ ಹಣವನ್ನು ಇವನೊಬ್ಬನಿ ಗಳಿಸುತ್ತಾನೆ.
ಇವನು ಏನು ಅವಿದ್ಯಾವಂತನಲ್ಲ ವಿದ್ಯಾವಂತ.ಇತ್ತೀಚೆಗೆ ವಿದೇಶದಲ್ಲಿ ಎಂಬಿಎ ಪದವಿಯನ್ನು ಮಾಡಿ ಒಂದು ಉನ್ನತ ಕಂಪನಿಯಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ ತಿಂಗಳಿಗೆ 70,000 ರೂ. ಸಂಪಾದಿಸುತ್ತಿದ್ದಾರೆ. ಆದರೆ ಅವರ ಅಣ್ಣ ತಮ್ಮ ‘ಪದವಿ’ಗಿಂತ ಸಾಕುಪ್ರಾಣಿಗಳಿಂದ ಹೆಚ್ಚು ಸಂಪಾದಿಸುತ್ತಿದ್ದಾರೆ. ಆರು ಪಟ್ಟು ಹೆಚ್ಚು ಸಂಪಾದಿಸುತ್ತಿದ್ದಾರೆ.
ಇದನ್ನೂ ಓದಿ: Vice President : ಜಗದೀಪ್ ಧನಕರ್ ರಾಜೀನಾಮೆ – ಯಾರಾಗ್ತಾರೆ ಮುಂದಿನ ಉಪರಾಷ್ಟ್ರಪತಿ ?
Comments are closed.