Bengaluru: ಮನೆ ಖಾಲಿ ಮಾಡುವಾಗ ಬಾಡಿಗೆದಾರನಿಗೆ ಮನೆ ಮಾಲೀಕನಿಂದ ಸಿಕ್ತು ಭರ್ಜರಿ ಗಿಫ್ಟ್!!

Bengaluru : ಬಾಡಿಗೆದಾರರು ಮತ್ತು ಮಲೆ ಮಾಲೀಕರ ನಡುವೆ ಸದಾ ಒಂದಲ್ಲ ಒಂದು ರೀತಿ ಕಿರಿಕಿರಿ ನಡೆಯುವುದು ಸರ್ವೆ ಸಾಮಾನ್ಯ. ಎಲ್ಲೋ ಬೆರಳೆಣಿಕೆಯ ಬಾಡಿಗೆದಾರರು ಅಥವಾ ಮಾಲೀಕರು ಪರಸ್ಪರ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಆದರೆ ಇಲ್ಲೊಬ್ಬ ಬೆಂಗಳೂರಿನ ವ್ಯಕ್ತಿ ಮನೆ ಮಾಲೀಕನು ತನ್ನನ್ನು ನಡೆಸಿಕೊಂಡ ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ಕುರಿತಾಗಿ ಪೋಸ್ಟ್ ಹಂಚಿಕೊಂಡಿದ್ದು ಅದು ಎಲ್ಲೆಡೆ ವೈರಲ್ ಆಗಿದೆ.

ಹೌದು, @Kind_Transition_7885/Reddit ರೆಡ್ಡಿಟ್ ಖಾತೆಯಲ್ಲಿ ಬಾಡಿಗೆ ಮನೆ ಬಿಡುವಾಗ ಮನೆ ಮಾಲೀಕನ ಪ್ರೀತಿಯ ಬೀಳ್ಕೊಡುಗೆ ಉಡುಗೊರೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇದರಲ್ಲಿ ಮನೆ ಖಾಲಿ ಮಾಡುವ ಸಂದರ್ಭದಲ್ಲಿ ತನ್ನನ್ನು ಅತಂತ್ಯ ಪ್ರೀತಿಯಿಂದ ಬೀಳ್ಕೊಟ್ಟ ಮನೆ ಮಾಲೀಕರು ನನಗೆ ಬೆಳ್ಳಿಯ ಕಡಗವನ್ನು ಉಡುಗೊರೆಯಾಗಿ ನೀಡಿ ವಿದಾಯ ಹೇಳಿದ್ದಾರೆ, ಎಂದು ಒಳ್ಳೆಯ ಮನಸ್ಸಿನ ವ್ಯಕ್ತಿ ಹಂಚಿಕೊಂಡಿದ್ದಾರೆ.
ಅಲ್ಲದೆ ಮನೆ ಮಾಲೀಕರು ಠೇವಣಿಯನ್ನೂ ಹಿಂದಿರುಗಿಸದ ನಗರದಲ್ಲಿ, ನನ್ನ ಮನೆ ಮಾಲೀಕರು ನನಗೆ ವಿದಾಯ ಉಡುಗೊರೆಯನ್ನು ನೀಡಿದರು. ನಾನು ಎರಡು ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ವೇಳೆಯಲ್ಲಿ ಮಾಲೀಕರು ತಮ್ಮ ವಾಸ್ತವ್ಯದ ಉದ್ದಕ್ಕೂ ತಮ್ಮನ್ನು ಮಗನಂತೆ ನಡೆಸಿಕೊಂಡಿದ್ದಾರೆ. ಮನೆ ಖಾಲಿ ಮಾಡುವಾಗ ಮನೆಯ ಮಾಲೀಕರಿಂದ ಬೀಳ್ಕೊಡುಗೆ ಉಡುಗೊರೆಯಾಗಿ ಬೆಳ್ಳಿ ಕಡಗ ಸಿಕ್ಕಿದೆ. ನನಗೆ ಅಗತ್ಯವಿದ್ದ ವಸ್ತುಗಳ ತೆಗೆದುಕೊಂಡು ಬರಲು ನನಗೆ ಅಗತ್ಯವಿದ್ದಾಗಲೆಲ್ಲಾ ಅವರು ತನ್ನ ಸ್ಕೂಟಿಯನ್ನು ಸಹ ನನಗೆ ನೀಡುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.
Comments are closed.