Dharmasthala Case: ಧರ್ಮಸ್ಥಳ ಪ್ರಕರಣಗಳಲ್ಲಿ ಎಸ್ಐಟಿ ರಚನೆ ವಿಚಾರ – ಇಂದು ನಾಳೆಯೊಳಗೆ ಧರ್ಮಸ್ಥಳಕ್ಕೆ ಎಸ್ಐಟಿ ತಂಡ – ಗೃಹಸಚಿವ ಪರಮೇಶ್ವರ್

Share the Article

Dharmasthala Case: ಧರ್ಮಸ್ಥಳ ಪ್ರಕರಣಗಳಲ್ಲಿ ಎಸ್ಐಟಿ ರಚನೆ ವಿಚಾರವಾಗಿ ಇಂದು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್ ಪ್ರಣವ್ ಮೊಹಂತಿ ತಂಡ ಇಂದು ಅಥವಾ ನಾಳೆ ಧರ್ಮಸ್ಥಳಕ್ಕೆ ಹೋಗಬಹುದು ಎಂದು ಹೇಳಿದ್ದಾರೆ. ಎಸ್ಐಟಿ ತಂಡಕ್ಕೆ ಸೂಚನೆ ಕೊಡಲಾಗಿದೆ. ಕೂಡಲೇ ಧರ್ಮಸ್ಥಳಕ್ಕೆ ಹೋಗಿ ತ‌ನಿಖಾ ಪ್ರಕ್ರಿಯೆ ಶುರು ಮಾಡಲು ತಿಳಿಸಲಾಗಿದೆ. ಸದ್ಯದಲ್ಲೇ ಎಸ್ಐಟಿ ತಂಡ ಧರ್ಮಸ್ಥಳಕ್ಕೆ ಹೋಗಲಿದೆ ಎಂದು ತಿಳಿಸಿದ್ದಾರೆ.

ಇನ್ನು ಧರ್ಮಸ್ಥಳದ ಪೊಲೀಸರಿಗೂ ಈ ಸಂಬಂಧ ಸೂಚನೆ ಕೊಡಲಾಗಿದೆ. ಎಸ್ಐಟಿ ತಂಡದಿಂದ ಯಾರೂ ಹೊರಗುಳಿಯಲ್ಲ.

ಯಾರಾದ್ರೂ ಹೊರಗೆ ಉಳಿಯುವುದಾದರೆ ನಮಗೆ ತಿಳಿಸಲಿ, ಆ ಬಗ್ಗೆ ಕ್ರಮ ತಗೋತೇವೆ. ಇನ್ನೂವರೆಗೆ ಯಾರೂ ನಮ್ಮನ್ನು ಈ ವಿಚಾರದಲ್ಲಿ ಏನೂ ಮಾಹಿತಿ ಕೊಟ್ಟಿಲ್ಲ ಎಂದರು. ಇನ್ನು ಬಿಜೆಪಿಯವರು ಎಸ್ಐಟಿಗೆ ಯಾಕೆ ಆಕ್ಷೇಪ ಮಾಡ್ತಿದ್ದಾರೆ ಅಂತ ಮಾಧ್ಯಮದವರು ಕೇಳಿದ ಪ್ರಸ್ಣೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು ಈಗಿಂದಲೇ ಯಾಕೆ ಅವರು ಏನೇನೋ ಫ್ರೇಮ್ ಮಾಡ್ತಿದ್ದಾರೆ.

ಎಸ್ಐಟಿ ರಚನೆಯಲ್ಲಿ ರಾಜಕೀಯ ಉದ್ದೇಶ ಇದೆ ಅಂತ ಈಗಲೇ ಹೇಗೆ ಹೇಳ್ತಾರೆ ಅವ್ರು? ಅಂದಮೇಲೆ ಅವರ ಮನಸಲ್ಲಿ ಏನೋ ಇದೆ ಅಂತ ಆಯ್ತಲ್ಲ ಎಂದು ಬಿಜೆಪಿಯವರ ಆಕ್ಷೇಪಕ್ಕೆ ಪರಮೇಶ್ವರ್ ಟಕ್ಕರ್ ನೀಡಿದರು.

ಉಗ್ರಪ್ಪ ನೇತೃತ್ವದ ಸಮಿತಿ ಸಲ್ಲಿಸಿದ ವರದಿಯಲ್ಲಿ ಬೆಳ್ತಂಗಡಿಯಲ್ಲಿ ಅಸಹಜ ಸಾವುಗಳ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಉಲ್ಲೇಖ ವಿಚಾರವಾಗಿ ಮಾತನಾಡಿ, ಆ ತರದ ವರದಿ ಏನಾದ್ರೂ ಸರ್ಕಾರಕ್ಕೆ ಸಲ್ಲಿಕೆ ಆಗಿದ್ದರೆ ಪರಿಶೀಲನೆ ಮಾಡ್ತೇವೆ. ಸರ್ಕಾರದ ವತಿಯಿಂದ ಆಗಿರುವ ವರದಿಯಾ ಅಂತ ನೋಡ್ತೇವೆ. ಸರ್ಕಾರ ಸತ್ಯ ಹೊರಗೆಳೆಯಲು ಎಸ್ಐಟಿ ರಚಿಸಿದೆ. ಈಗಲೇ ಬಿಜೆಪಿಯವ್ರು ಅದೂ ಇದೂ ಹೇಳಿದ್ರೆ ಹೇಗೆ? ಸತ್ಯ ಹೊರಗೆ ಬರಲಿ ಅಂತ ಎಸ್ಐಟಿ ಮಾಡಿದ್ದೇವೆ, ಅಷ್ಟಕ್ಕೇ ಎಲ್ರೂ ಸೀಮಿತ ಆದ್ರೆ ಸಾಕು ಎಂದು ಹೇಳಿದರು.

ಇದನ್ನೂ ಓದಿ: Rashmika mandanna: ಹೊಸ ಪರ್ಪ್ಯೂಮ್ ಬ್ರಾಂಡ್ ಆರಂಭಿಸಿದ ನಟಿ ರಶ್ಮಿಕಾ!

Comments are closed.