Viral Video : ನಾಪತ್ತೆಯಾದ ಯುವತಿ ಬಗ್ಗೆ ನದಿಯಲ್ಲಿ ನಿಂತು ವರದಿ – ರಿಪೋರ್ಟರ್ ಕಾಲ ಕೆಳಗೆ ಬಂತು ಶವ!!

Share the Article

Viral Video : ಪ್ರಪಂಚದ ಯಾವುದೇ ಮೂಲೆಯಲ್ಲಿ ಯಾವುದೇ ದುರಂತ ಸಂಭವಿಸಿದರು ಅದನ್ನು ಜಗತ್ತಿಗೆ ತಿಳಿಸುವುದು ಮಾಧ್ಯಮದ ಕರ್ತವ್ಯ.ಇದರಲ್ಲಿ ವರದಿಗಾರರು ಬಹಳ ಮುಖ್ಯವಾದದ್ದು. ಇಂತಹ ವೇಳೆ ಅವರು ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲು ಕೂಡ ಸಿದ್ದರಿರುತ್ತಾರೆ. ಇಂತಹ ಸಮಯದಲ್ಲಿ ಅವರ ಧೈರ್ಯ ಮೆಚ್ಚುವಂತದ್ದೇ. ಇದೀಗ ಅಂತದ್ದೇ ಒಂದು ಘಟನೆ ನಡೆದಿದ್ದು ಅದೇ ರಿಪೋರ್ಟರ್ ಒಬ್ಬ ನದಿಗೆ ಇಳಿದು ವರದಿ ಮಾಡುತ್ತಿದ್ದ ವೇಳೆ ಆಘಾತಕಾರಿ ಘಟನೆ ನಡೆದಿದೆ.

ಬ್ರೆಜಿಲ್ ದೇಶದಲ್ಲಿ 13 ವರ್ಷದ ಬಾಲಕಿಯೊಬ್ಬಳು ನದಿಯಲ್ಲಿ ಈಜುತ್ತಿದ್ದ ವೇಳೆ ನಾಪತ್ತೆಯಾಗಿದ್ದಳು. ಈ ಘಟನೆಯ ಬಗ್ಗೆ ವರದಿಗಾರನೋರ್ವ ನದಿಗೆ ಇಳಿದು ವರದಿ ಮಾಡುತ್ತಿದ್ದ. ಈ ನದಿ ಎಷ್ಟು ವಿಶಾಲವಾಗಿದೆ. ಆಳವಾಗಿದೆ ಎಂಬುದನ್ನು ಆತ ಲೈವ್ ರಿಪೋರ್ಟಿಂಗ್ ಮೂಲಕ ತಿಳಿಸುತ್ತಿದ್ದ ಅಷ್ಟರಲ್ಲೇ ನಾಪತ್ತೆಯಾಗಿದ್ದ ಬಾಲಕಿಯ ಶವ ನೀರಿನಲ್ಲಿ ತೇಲುತ್ತಾ ಆತನ ಕಾಲಿನ ಕೆಳಗೆ ಬಂದಿದ್ದು, ಅಕ್ಷರಶಃ ವರದಿಗಾರ ಭಯ ಬಿದ್ದಿದ್ದಾನೆ. ಈ ವೇಳೆ ಆತ ತಕ್ಷಣವೇ ನದಿಯಲ್ಲೇ ಅತ್ತಿತ್ತ ಸರಿದಿದ್ದಾನೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂದಹಾಗೆ ವರದಿ ಮಾಡುತ್ತಿರುವ ವೇಳೆ ನೀರಿನ ತಳದಲ್ಲಿ ಏನೋ ಇದೆ ಅಂತ ನನಗೆ ಅನಿಸುತ್ತಿದೆ ಎಂದು ಆತ ತನ್ನ ತಂಡಕ್ಕೆ ಹೇಳುತ್ತಾನೆ. ಅಲ್ಲದೇ ಮುಂದೆ ಹೋಗುವುದಕ್ಕೆ ಹಿಂಜರಿಯುವ ಆತ ಇಲ್ಲ, ನಾನು ಆ ಕಡೆ ಹೋಗಲಾರೆ ನನಗೆ ಭಯವಾಗುತ್ತಿದೆ. ಅದು ತೋಳಿನಂತೆ ಅನಿಸುತ್ತಿತ್ತು.ಅದು ಅವಳಾಗಿರಬಹುದೇ? ಆದರೆ ಅದು ಮೀನೂ ಆದರೂ ಆಗಿರಬಹುದು. ನನಗೆ ಗೊತ್ತಿಲ್ಲ ಎಂದು ಹೇಳುತ್ತಾನೆ. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಅದು ಯುವತಿಯ ಶವ ಎಂದು ತಿಳಿದು ಆತ ದಂಗಾಗುತ್ತಾನೆ.

ಇದನ್ನೂ ಓದಿ: Fighter jet MiG-21: 62 ವರ್ಷಗಳ ನಂತರ ಮಿಗ್-21 ಯುದ್ಧವಿಮಾನ ನಿವೃತ್ತಿ, ಸೆಪ್ಟೆಂಬರ್‌ನಲ್ಲಿ ಔಪಚಾರಿಕ ಬೀಳ್ಕೊಡುಗೆ

Comments are closed.