Dharmasthala Case: ಧರ್ಮಸ್ಥಳ ಘಟನೆ ಸಂಬಂಧ ಸರ್ಕಾರದಿಂದ SIT ರಚನೆ – ನಾನು ಧರ್ಮಸ್ಥಳ ಪರ ನಿಲ್ತೇನೆ – ಸಿ ಟಿ ರವಿ

Dharmasthala Case: ಧರ್ಮಸ್ಥಳ ಘಟನೆ ಸಂಬಂಧಿಸಿದಂತೆ ಸರ್ಕಾರ SIT ತನಿಖೆಗೆ ವಹಿಸಿದೆ. ಅದನ್ನ ನಾವು ಸ್ವಾಗತ ಮಾಡ್ತೇವೆ. ತನಿಖೆ ಪಾರದರ್ಶಕವಾಗಿ ನಡೆಯಲಿ. ನಾವು ಮಧ್ಯಪ್ರವೇಶ ಮಾಡಲ್ಲ. ನಮ್ಮ ಕ್ಷೇತ್ರದ ಮೂರು ದೇವಾಲಯ, ಚೋಳರ ಕಾಲದ ದೇವಸ್ಥಾನ ಕಟ್ಟುವ ಕೆಲಸ ಮಾಡಿದೆವು. ಪ್ರಾಚೀನ ಚೋಳರ ಕಾಲದ ದೇವಸ್ಥಾನ ಪುನರುಜ್ಜೀವನ ಮಾಡಿದೆ ಇದು ಸುಳ್ಳಾ.? ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇಂದ 500 ಕೆರೆ ಜೀರ್ಣೋದ್ಧಾರ ಮಾಡಿದ್ದಾರೆ. ಸಾವಿರಾರು ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಿದ್ದಾರೆ. ಧರ್ಮಸ್ಥಳ ಸರ್ಕಾರ ಅಲ್ಲ. ಜನ ಕೊಟ್ಟಿರೋ ಹಣದಲ್ಲಿ ಅನೇಕ ಸಾರ್ವಜನಿಕ ಕಾರ್ಯಕ್ರಮ ನಡೆದಿದೆ ಎಂದು ಬಿಜೆಪಿ ನಾಯಕ ಸಿ ಟಿ ರವಿ ಹೇಳಿದ್ದಾರೆ.

ಭಕ್ತರು ಶ್ರದ್ಧಾ ಕೇಂದ್ರವಾಗಿ ನೊಡ್ತಾರೆ. ಮಂಜುನಾಥ ಶೈವ ಪರಂಪರೆಗೆ ಸೇರಿದ್ರೆ, ವೈಷ್ಣ ಪರಂಪರೆ ಪೂಜಿಸ್ತಾರೆ, ಜೈನ ಪರಂಪರೆ ಮುನ್ನಡೆಸಿಕೊಂಡು ಹೋಗ್ತಿದ್ದಾರೆ. ಸಹ ಪಂಕ್ತಿ ಭೋಜನ ತಂದಿದ್ದು ಸಾಮಾಜಿಕ ಕ್ರಾಂತಿ ಅಲ್ವಾ.? ಹಾಗಾಗಿ ನಾನು ಧರ್ಮಸ್ಥಳ ಪರ ನಿಲ್ತೇನೆ. ಯಾರೇ ವ್ಯಕ್ತಿ ತಪ್ಪು ಮಾಡಿದ್ರೂ, ಕಾನೂನು ಎಲ್ಲರಿಗೂ ಒಂದೇ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಲಿ.
ಸೌಜನ್ಯ ಪ್ರಕರಣದ ಬಗ್ಗೆ ಕೂಡ ಪಾರದರ್ಶಕ ತೀರ್ಪು ಬರಲಿ. ಅದು ಬಿಟ್ಟು ಅವರೇ ತನಿಖೆ ಮಾಡಿ, ಅವರೇ ತೀರ್ಪು ಮಾಡುವ ಕೆಲಸ ಮಾಡೋದು ಸರಿಯಲ್ಲ ಎಂದರು.
ಹೈಕೋರ್ಟ್ ನ್ಯಾಯಾಧೀಶರೇ ಮಾನೀಟರಿಂಗ್ ಮಾಡಲಿ. ನಮ್ಮ ಯಾವುದೇ ಆಕ್ಷೇಪಣೆ ಇಲ್ಲ.ದುರ್ಜನರ ಕೆಲಸ, ಸಜ್ಜನರಿಗೆ ಅನ್ಯಾಯ ಆಗಲು ಬಿಡೋದಿಲ್ಲ. ಸಜ್ಜನರ ಮೌನವನ್ನು ದೌರ್ಬಲ್ಯ ಎಂದು ಭಾವಿಸಬೇಡಿ. ಇದು ನಿಮಗೆ ಎಚ್ಚರಿಕೆ ನೀಡುತ್ತೇನೆ ಎಂದ ಸಿಟಿ ರವಿ, ಸೋಶಿಯಲ್ ಮೀಡಿಯಾದಲ್ಲಿ ತನಿಖೆ ಮಾಡೋಕೆ ಯಾರು ಇವರೆಲ್ಲಾ? ಎಂದು ಪೊರಶ್ನಿಸಿದರು.
ಧರ್ಮಸ್ಥಳ ಮೇಲೆ ಅಲ್ಲ, ವ್ಯಕ್ತಿ ಮೇಲೆ ಆರೋಪ ಮಾಡಲಿ. ವ್ಯಕ್ತಿ ತಪ್ಪು ಮಾಡಿದ್ರೆ ವ್ಯಕ್ತಿ ಮೇಲೆ ಕ್ರಮ ಆಗಲಿ. ನಾನು ಕನ್ನಡ, ಸಂಸ್ಕೃತಿ ಸಚಿವ ಆಗಿದ್ದೆ. 397 ದೇವಾಲಯ ಪುನರುಜ್ಜೀವನ ಮಾಡಲಾಯ್ತು, ಅದರಲ್ಲಿ 37 ದೇವಾಲಯ ಚಿಕ್ಕಮಗಳೂರು ಜಿಲ್ಲೆಯಲ್ಲೇ ಇತ್ತು. ನಾವು ಯಾರಾದ್ರೂ ತಪ್ಪು ಮಾಡಿದ್ರೆ, ಮಂಜುನಾಥ ಸ್ಚಾಮಿ ಮೇಲೆ ಆಣೆ ಮಾಡು ಅಂತೀವಿ. ಅಂತಹ ಶ್ರದ್ದೆಗೆ ಅಪನಂಬಿಕೆ ಮಾಡಬಾರದು. ಎಜುಕೇಶನ್ ಇಸ್ ಬ್ಯುಸಿನೆಸ್ ಅಂತ ಕೆಲವರು ಹೇಳ್ತಾರೆ. ಆದ್ರೆ ಧರ್ಮಸ್ಥಳ ಎಂದೂ ಹಾಗೆ ಹೇಳಿಲ್ಲ. ಅದಕ್ಕೆ ಅದರ ಫೀಸ್ ಸ್ಟ್ರಕ್ಚರ್ ನೋಡಿ ಎಂದರು.
ನಾನು ಇದನ್ನ ಹೇಳಿದ್ದಕ್ಕೆ ಸಿಟಿರವಿ ಅಲ್ಲ, ಓಟಿ ರವಿ ಅಂತ ಕುಡುಕನ್ನ ಮಾಡಿದ್ರು. 2019ರಲ್ಲಿ ನನ್ನ ಕಾರು ಅಪಘಾತ ಆಯ್ತು.
ಸಿಟಿ ರವಿ ಕಾರಲ್ಲಿ ಇದ್ದರಾ ಅಂತ ಕೆಲ ಮಾಧ್ಯಮ ಪ್ರಶ್ನೆ ಮಾಡಿತು. ಸಿಸಿ ಕ್ಯಾಮೆರಾ ಪರಿಶೀಲನೆ ಬಳಿಕ ನನ್ನ ಕಾರ್ ಡ್ರೈವರ್ ಮೇಲೆ ಕೇಸ್ ಹಾಕಿದ್ರು. ಸಿಟಿ ರವಿ, ಓಟಿ ರವಿ ಅಂತೆಲ್ಲಾ ಅಪಪ್ರಚಾರ ಮಾಡಿದ್ರು. ನನ್ನ ಜೊತೆ ಇರೋರು ನಾನು ಕಾಫಿ ಕುಡಿಯೋಕೂ ಹಿಂದು, ಮುಂದು ನೋಡ್ತೇನೆ ಅಂತ ಗೊತ್ತಿದೆ. ಧರ್ಮಸ್ಥಳ ವಿಚಾರ ಮಾತಾಡಿದ್ರೆ, ನಾನು ಕುಡುಕ ಆಗ್ತೇನೆ.
ಇಂತವರೇ ಧರ್ಮಸ್ಥಳ ಮೇಲೆ ಆರೋಪ ಮಾಡ್ತಿರೋರು ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: Viral Video : ನಾಪತ್ತೆಯಾದ ಯುವತಿ ಬಗ್ಗೆ ನದಿಯಲ್ಲಿ ನಿಂತು ವರದಿ – ರಿಪೋರ್ಟರ್ ಕಾಲ ಕೆಳಗೆ ಬಂತು ಶವ!!
Comments are closed.