Home News Jagadeep Dhankar: ‘ಆಪರೇಷನ್ ಸಿಂಧೂರ್’ ಚರ್ಚೆಗೆ ಅವಕಾಶ ಕೊಟ್ಟಿದ್ದೆ ಧನ್‌ಕರ್‌ಗೆ ಮುಳುವಾಯ್ತಾ? ತೆರೆಯ ಹಿಂದೆ ಏನು...

Jagadeep Dhankar: ‘ಆಪರೇಷನ್ ಸಿಂಧೂರ್’ ಚರ್ಚೆಗೆ ಅವಕಾಶ ಕೊಟ್ಟಿದ್ದೆ ಧನ್‌ಕರ್‌ಗೆ ಮುಳುವಾಯ್ತಾ? ತೆರೆಯ ಹಿಂದೆ ಏನು ನಡೆದಿರಬಹುದು?

Hindu neighbor gifts plot of land

Hindu neighbour gifts land to Muslim journalist

Jagadeep Dhankar: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ಅವರು ರಾಜೀನಾಮೆ ನೀಡಿರುವ ವಿಚಾರ ದೇಶಾದ್ಯಂತ ಭಾರಿ ಚರ್ಚೆಯಾಗುತ್ತಿದೆ. ಧನಕರ್ ಅವರು ಅನಾರೋಗ್ಯ ನಿಮಿತ್ತ ರಾಜೀನಾಮೆ ಕೊಟ್ಟದ್ದಲ್ಲ ಇದರ ಹಿಂದೆ ಬೇರೆ ಕಾರಣ ಇದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ಬೆನ್ನಲ್ಲೇ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಖರ್ಗೆ ಅವರಿಗೆ ಆಪರೇಷನ್ ಸಿಂದೂರ್ ಕುರಿತು ಚರ್ಚೆ ನಡೆಸಲು ಸುದೀರ್ಘ ಸಮಯ ಕೊಟ್ಟಿದ್ದೆ ಧನಕರ್ ಅವರ ಅಧಿಕಾರಕ್ಕೆ ಬ್ರೇಕ್ ಬೀಳಲು ಕಾರಣವೇ? ಎಂಬ ಪ್ರಶ್ನೆಯೊಂದಿಗೆ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಹೌದು, ನಿನ್ನೆ ದಿನ ಸಾಧನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ದಿಡೀರ್ ಎಂದು ರಾಷ್ಟ್ರಪತಿಗಳಿಗೆ ಅನಾರೋಗ್ಯದ ನಿಮಿತ್ತ ರಾಜೀನಾಮೆ ನೀಡುತ್ತೇನೆ ಎಂದು ಧನಕರ್ ಅವರು ರಾಜೀನಾಮೆ ಪತ್ರ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಸೋಮವಾರ ಅರೋಗ್ಯವಾಗಿ ರಾಜ್ಯಸಭಾ ಸದನದ ಕಲಾಪ ನಿರ್ವಹಿಸಿದ ಉಪರಾಷ್ಟ್ರಪತಿಗಳಿಗೆ ಏಕಾ ಏಕೀ ರಾಜೀನಾಮೆ ಕೊಡಬೇಕು ಅನ್ನಿಸಿದ್ದು ತೆರೆಯ ಹಿಂದೆ ಏನೇನು ನಡೆದಿದೆ ಎಂಬ ಚರ್ಚೆ ಹುಟ್ಟು ಹಾಕಿದೆ.

ತೆರೆಯ ಹಿಂದೆ ಏನು ನಡೆದಿರಬಹುದು?

ಕಾರಣ 1.ಅಲಹಾಬಾದ್‌ ಹೈ ಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ತನಿಖೆಗೆ ವಿಪಕ್ಷ ಗಳ ಸಂಸದರು ಕೊಟ್ಟಿದ್ದ ಅರ್ಜಿ ಸ್ವೀಕರಿಸಿದ್ದು ಸರ್ಕಾರ ಮತ್ತು ಧನ್ ಕರ್ ನಡುವೆ ತಿಕ್ಕಾಟಕ್ಕೆ ಕಾರಣ ಆಯಿತಾ?

2.ಸರ್ಕಾರವನ್ನು ಕಿಂಚಿತ್ತೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಿಪಕ್ಷ ಸಂಸದರು ಕೊಟ್ಟ ಅರ್ಜಿ ಸ್ವೀಕರಿಸಿ ಸೇಕ್ರೆಟರಿ ಜೆನೆರಲ್ ಗೆ ನಿರ್ದೇಶನ ಕೊಟ್ಟಿದ್ದು ಸರ್ಕಾರದ ಅಸಮಾಧಾನಕ್ಕೆ ಕಾರಣ ಆಯಿತಾ?

3.ಬಿಜೆಪಿ ಸಂಸದರು ಕೂಡ judges enquiry act ಪ್ರಕಾರ ನ್ಯಾಯಮೂರ್ತಿಗಳ ವಿರುದ್ಧ ತನಿಖೆಗೆ ಅರ್ಜಿಗೆ ಸಹಿ ಹಾಕಿದರು ಕೂಡ ವಿಪಕ್ಷಗಳ ಅರ್ಜಿ ಸಲ್ಲಿಸಿದ್ದು ಸರ್ಕಾರದ ಬೇಸರಕ್ಕೆ ಕಾರಣ ಆಯಿತಾ?

4. ಆಪರೇಷನ್ ಸಿಂದೂರ ವಿಷಯದಲ್ಲಿ ಖರ್ಗೆ ಅವರಿಗೆ ಸರ್ಕಾರದ ಜೊತೆ ಚರ್ಚಿಸದೆ ಸುದೀರ್ಘ ಮಾತಿಗೆ ಅವಕಾಶ ಕೊಟ್ಟಿದ್ದು ಸಂಸಾದೀಯ ಇಲಾಖೆ ಮತ್ತು ಉಪರಾಷ್ಟ್ರ ಪತಿ ನಡುವೆ ಕಿಡಿ ಹಚ್ಚಿತಾ?

5. ನ್ಯಾಯಮೂರ್ತಿಗಳ ವಿರುದ್ಧ ತನಿಖೆ ಕೋರಿ ಸಲ್ಲಿಸಿದ್ದ ವಿಪಕ್ಷಗಳ ಅರ್ಜಿಯನ್ನು ಸ್ವೀಕರಿಸಿದ್ದು ಶಾಸಕಾಂಗ ನ್ಯಾಯಾಂಗದ ನಡುವೆ ತಿಕ್ಕಾಟ ಕ್ಕೆ ಕಾರಣ ಆಗಬಹುದು ಎಂದು ಸರ್ಕಾರ ಉಪರಾಷ್ಟ್ರ ಪತಿ ಗಳ ರಾಜೀನಾಮೆಗೆ ಒತ್ತಡ ಹೇರಿತಾ?

6. ನಿನ್ನೆ ಮಧ್ಯಾಹ್ನ 4.30 ಕ್ಕೆ ನಡೆದ ರಾಜ್ಯಸಭೆಯ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸಭಾ ನಾಯಕ ಜೆ ಪಿ ನಡ್ದಾ ಮತ್ತು ಸಂಸಾದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗೈರು ಆಗಿ ಸರ್ಕಾರ ತನ್ನ ಬೇಸರವನ್ನು ಸೂಚಿಸಿತಾ?

ಇದನ್ನೂ ಓದಿ: blinkit: ಲಿಫ್ಟ್‌ನಲ್ಲಿ ಮೂತ್ರ ವಿಸರ್ಜಿಸಿದ ಬ್ಲಿಂಕಿಟ್ ಡೆಲಿವರಿ ಬಾಯ್ – ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ