Traders’ strike: ಜುಲೈ 25ಕ್ಕೆ ವರ್ತಕರ ಮುಷ್ಕರ: ಏನೇನಿರಲಿದೆ, ಏನೇನಿರಲ್ಲ?

Traders’ strike: ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ (Karnataka Commercial Tax Department) ನೀಡಿರುವ ತೆರಿಗೆ ನೋಟಿಸ್‌ಗಳಿಂದ ಆಕ್ರೋಶ ಗೊಂಡಿರುವ ಅಂಗಡಿ ಮಾಲೀಕರು ಇದೀಗ ಅಂಗಡಿ ಮುಂಗಟ್ಟುಗಳನ್ನು ಬಂದ್ (Karnataka Traders’ strike) ಮಾಡಿ ಸರ್ಕಾರವನ್ನು ಪ್ರಶ್ನಿಸಲು ನಿರ್ಧರಿಸಿದ್ದಾರೆ.

ಜುಲೈ 23ರಿಂದ ಜುಲೈ 25ರವರೆಗೆ ಹಂತ ಹಂತವಾಗಿ ಅಂಗಡಿ ಬಂದ್ ಮಾಡಲಾಗುತ್ತದೆ ಎಂದು ವರ್ತಕರು ತಿಳಿಸಿದ್ದಾರೆ. ಹೀಗಾಗಿ ಕಾರ್ಮಿಕ ಪರಿಷತ್ ಸದ್ಯ ಪ್ರತಿ ಅಂಗಡಿಗೂ ತೆರಳಿ ಕರಪತ್ರ ನೀಡುತ್ತಿದೆ. ಬಂದ್‌ಗೆ ಬಂಬಲಿಸಿ ಎಂದು ಮನವಿ ಮಾಡುತ್ತಿದೆ.
ಜುಲೈ 23-24 ರಂದು ಕಪ್ಪು ಪಟ್ಟಿ ಧರಿಸಿ ಹಾಲು ಇಲ್ಲದ ಕಾಫಿ, ಚಹಾ ಮಾತ್ರ ಮಾರಾಟ. ಜುಲೈ 25 ರಂದು ಅಂಗಡಿ ಬಂದ್ ಮಾಡಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ.
ಮುಷ್ಕರದ ವೇಳೆ ಏನೇನಿರುತ್ತೆ?
ಜುಲೈ 23-24ರಂದು ಹಾಲು ಹೊರತುಪಡಿಸಿ ಉಳಿದ ವಸ್ತುಗಳ ವ್ಯಾಪಾರ ಇರಲಿದೆ.
ಜುಲೈ 25 ರಂದು ಬೇಕರಿ, ಕಾಂಡಿಮೆಂಟ್ಸ್, ಕಾಫಿ-ಚಹಾ ಅಂಗಡಿಗಳು, ಸಣ್ಣಪುಟ್ಟ ವ್ಯಾಪಾರಿಗಳ ವ್ಯವಹಾರ ಬಂದ್ ಇರಲಿದ್ದು, ಉಳಿದಂತೆ ಇತರೆ ಎಲ್ಲಾ ಸೇವೆಗಳು ಲಭ್ಯವಿರಲಿವೆ.
ಜುಲೈ 25ರ ಬಂದ್‌ಗೆ ಅಂಗಡಿ ಮಾಲೀಕರು ಬೆಂಬಲ ಸೂಚಿಸಿದ್ದು, ಅನಿವಾರ್ಯವಾದಲ್ಲಿ ಒಂದು ವಾರದ ಬಂದ್ಗೂ ಸಿದ್ಧ ಎಂದಿದ್ದಾರೆ.
Comments are closed.