ICC: ಕ್ರಿಕೆಟ್ ಲೋಕಕ್ಕೆ 2 ಹೊಸ ತಂಡಗಳ ಸೇರ್ಪಡೆ – ಐಸಿಸಿ ಅಧಿಕೃತ ಘೋಷಣೆ!!

Share the Article

ICC: ಜುಲೈ 20 ರಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ವಾರ್ಷಿಕ ಸಭೆ ಸಿಂಗಾಪುರದಲ್ಲಿ ನಡೆದಿದ್ದು, ಈ ವೇಳೆ ಕ್ರಿಕೆಟ್ ಜಗತ್ತಿಗೆ 2 ಹೊಸ ತಂಡಗಳನ್ನು ಸಹ ಸಹವರ್ತಿ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗಿದೆ.

ಹೌದು, ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಅನ್ನು ಹೆಚ್ಚು ಜನಪ್ರಿಯಗೊಳಿಸುವ ಮತ್ತು ಹೊಸ ಕ್ಷೇತ್ರಗಳಲ್ಲಿ ಅದರ ಅಭಿವೃದ್ಧಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ICC ಮಹತ್ವದ ನಿರ್ಧಾರ ಕೈಗೊಂಡಿದ್ದು ಕ್ರಿಕೆಟ್ ಜಗತ್ತಿಗೆ 2 ಹೊಸ ತಂಡಗಳನ್ನು ಸಹ ಸಹವರ್ತಿ ಸದಸ್ಯರನ್ನಾಗಿ ಸೇರಿಸಿಕೊಂಡಿದೆ.

ಹೊಸದಾಗಿ ಸೇರಿದ ತಂಡಗಳು:

ಟಿಮೋರ್ ಮತ್ತು ಜಾಂಬಿಯಾ ಐಸಿಸಿಯ ಹೊಸ ಸದಸ್ಯ ತಂಡಗಳಾಗಿವೆ ಎಂದು ಐಸಿಸಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಟಿಮೋರ್-ಲೆಸ್ಟೆ ಕ್ರಿಕೆಟ್ ಫೆಡರೇಶನ್ ಮತ್ತು ಜಾಂಬಿಯಾ ಕ್ರಿಕೆಟ್ ಯೂನಿಯನ್ ಅನ್ನು ಐಸಿಸಿಯ ಅಸೋಸಿಯೇಟ್ ಸದಸ್ಯರನ್ನಾಗಿ ಔಪಚಾರಿಕವಾಗಿ ಸೇರಿಸಿಕೊಳ್ಳಲಾಗಿದೆ

ಇದನ್ನೂ ಓದಿ: MP: ‘ನೇಹಾ’ ಆದವಳು ‘ಅಬ್ದುಲ್’ ಆದ – 8 ವರ್ಷ ಮಂಗಳಮುಖಿಯಾಗಿದ್ದು, ಈಗ ಪುರುಷನಾದ ಬಾಂಗ್ಲಾ ಪ್ರಜೆ ಅರೆಸ್ಟ್!!

Comments are closed.