Bihar: ಉಚಿತ ವಿದ್ಯುತ್ ಘೋಷಿಸಲು ಸಲಹೆ ಕೊಟ್ಟಿದ್ದೇ ಪ್ರಧಾನಿ ಮೋದಿ – ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿಕೆ

Bihar: ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿಗಳನ್ನು ಘೋಷಿಸಿದ ಬೆನ್ನಲ್ಲೇ ಬಿಜೆಪಿ ಇವುಗಳನ್ನು ಟೀಕಿಸಿತ್ತು. ಆದರೆ ಇದೀಗ ಅಚ್ಚರಿ ಎಂಬಂತೆ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲೇ ಬಿಹಾರದಲ್ಲಿ 125 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಲಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಹೌದು, ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದ ಎಲ್ಲ ಗೃಹಬಳಕೆದಾರರಿಗೆ ಆಗಸ್ಟ್ 1 ರಿಂದ ತಿಂಗಳಿಗೆ 125 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಗುರುವಾರ ನಿತೀಶ್ ಕುಮಾರ್ ಘೋಷಿಸಿದ್ದರು. ಇದೀಗ ಅವರು ‘ರಾಜ್ಯದ ಜನರು ವಿದ್ಯುತ್ಗಾಗಿ ಹಣ ಪಾವತಿಸುವ ಅಗತ್ಯವಿಲ್ಲ. ಈ ಯೋಜನೆ ಜಾರಿಗೊಳಿಸಲು ಬೇಕಾಗಿರುವ ನೆರವನ್ನು ಪ್ರಧಾನಿ ಮೋದಿಯವರೇ ನೀಡಿದ್ದಾರೆ. ಅವರನ್ನು ನಾವು ಗೌರವಿಸುತ್ತೇವೆ. ಅವರ ಮಾರ್ಗದರ್ಶನದಲ್ಲೇ ನಾವು ಕೆಲಸ ಮಾಡುತ್ತೇವೆ’ ಎಂದು ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಅಂದಹಾಗೆ ಉಚಿತ ಕೊಡುಗೆಗಳನ್ನು ವಿರೋಧಿಸುವುದಾಗಿ ಎನ್ಡಿಎ ಹೇಳಿಕೊಂಡಿದ್ದರೂ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ‘200 ಯೂನಿಟ್ಸ್ ಉಚಿತ ವಿದ್ಯುತ್’ ಘೋಷಣೆಗೆ ಸೆಡ್ಡು ಹೊಡೆಯಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.
Comments are closed.