Online betting app: ಆನ್‌ಲೈನ್ ಬೆಟ್ಟಿಂಗ್ ವ್ಯಸನ: ಸಾಲದ ಸುಳಿಗೆ ಸಿಲುಕಿ ಬ್ಯಾಂಕ್ ಉದ್ಯೋಗಿ ಸೂಸೈಡ್!

Share the Article

Online betting app: ಆನ್‌ಲೈನ್ ಬೆಟಿಂಗ್ ಚಟಕ್ಕೆ ಬಿದ್ದಿದ್ದ ಯುವಕನೊಬ್ಬ ಸಾಲದ ಸುಳಿಗೆ ಸಿಲುಕಿ, ಅದರಿಂದ ಹೊರಬರಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮನೋಜ್ ಕುಮಾರ್ (25) ಮೃತ ದುರ್ದೈವಿ, ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಮನೋಜ್ ಹಲವು ತಿಂಗಳಿಂದ ಆನ್‌ಲೈನ್ ಬೆಟಿಂಗ್ (Online betting app) ಚಟಕ್ಕೆ ದಾಸನಾಗಿದ್ದ. ತಾನು ಕೆಲಸ ಮಾಡುತ್ತಿದ್ದ ಬ್ಯಾಂಕಿನಿಂದಲೇ ಸಾಲ ಪಡೆದು ಆ ಹಣವನ್ನೆಲ್ಲಾ ಬೆಟ್ಟಿಂಗ್ ಮೇಲೆ ಸುರಿದಿದ್ದ.

ಸಾಲದ ಸುಳಿಯಲ್ಲಿ ಸಿಲುಕಿದ್ದ ಮನೋಜ್ ಸೆಲ್ಪಿ ವಿಡಿಯೋ ಮಾಡಿ ತನ್ನ ಪರಿಸ್ಥಿತಿ ಹೇಳಿಕೊಂಡು ಫ್ಯಾನಿಗೆ ನೇಣು ಹಾಕಿಕೊಂಡಿದ್ದಾನೆ. ಈ ಬಗ್ಗೆ ಆರ್ ಆ‌ರ್ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Kodagu Rain: ಕೊಡಗು ಗಡಿಯಲ್ಲಿ ಭಾರಿ ಮಳೆ – ಮಂಞಡ್ಕ ನದಿಯಲ್ಲಿ ಬೈಕ್ ಸಮೇತ ಕಾರ್ಮಿಕ ಕೊಚ್ಚಿ ಹೋಗಿರುವ ಶಂಕೆ

Comments are closed.