KSRTC: ಸಿಡಿದೆದ್ದ ಸಾರಿಗೆ ನೌಕರರು – ಆಗಸ್ಟ್ 5 ರಂದು ಸಾರಿಗೆ ಬಂದ್ – ನೌಕರರ ಬೇಡಿಕೆ ಏನು?

Share the Article

KSRTC: ಮತ್ತೆ ಸರ್ಕಾರದ ವಿರುದ್ದ ಸಾರಿಗೆ ನೌಕರರು ಸಿಡಿದೆದ್ದಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಪ್ರೆಸ್ ಮೀಟ್ ಮಾಡಿ ಮುಷ್ಕರ ಬಗ್ಗೆ ಮಾಹಿತಿ ನೀಡಿದ ಮುಖಂಡರು, ಆಗಸ್ಟ್ 5 ರಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮಲ್ಲೇಶ್ವರಂ ನಲ್ಲಿರುವ AITUS ಕಚೇರಿಯಲ್ಲಿ ಪ್ರೆಸ್‌ ಮೀಟ್ ಮಾಡಿ ಮಾಹಿತಿ ನೀಡದ್ದಾರೆ.

ಹಲವು ಬಾರಿ ನಮ್ಮ ಬೇಡಿಕೆಗೆ ಸಕರಾತ್ಮಕವಾಗಿ ಸಿಎಂ ಸ್ಪಂದಿಸಿಲ್ಲ. ಕಳೆದ ವಾರ ಮತ್ತೆ ನಿಮ್ಮ ಜೊತೆ ಸಭೆ ಮಾಡ್ತಿನಿ ಅಂತ ತಿಳಿಸಿದ್ರು ಆದರೆ ಎರಡು ವಾರವಾದರೂ ಇನ್ನೂ ಸಭೆ ಕರೆದಿಲ್ಲ. ಹೀಗಾಗಿ ನೌಕರರು ಮುಷ್ಕರ ಕರೆ ಕೊಟ್ಟಿದ್ದಾರೆ.

ಸಾರಿಗೆ ನೌಕರರ ಬೇಡಿಕೆಗಳು?

-38 ತಿಂಗಳ ವೇತನ ಬಾಕಿ ಹಣ ನೀಡಬೇಕು

-ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು

-ಖಾಸಗೀಕರಣ ಭ್ರಷ್ಟಾಚಾರ ಕಾರ್ಮಿಕರ ಕಿರುಕುಳ ನಿಲ್ಲಬೇಕು

-ನಗದು ರಹಿತ ವೈದ್ಯಕೀಯ ಸೌಲಭ್ಯ

-ನಮ್ಮ ಹಕ್ಕಿನ ರಜೆ

-1-1-2024 ರಿಂದ ವೇತನ ಜಾರಿಗೊಳಿಸುವುದು

-ಉತ್ತಮ ಕ್ಯಾಂಟೀನ್ ವ್ಯವಸ್ಥೆ

-ಈ ಹಿಂದೆ 2020 ಮತ್ತು 2021ರ ಸಾರಿಗೆ ಮುಷ್ಕರ ಸಂದರ್ಭದಲ್ಲಿ ನೌಕರರ ಮೇಲೆ ಹಾಕಲಾಗಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಬೇಕು

-ಸಾರಿಗೆ ನಿಗಮದ ವಿದ್ಯುತ್‌ ಬಸ್‌ಗಳಲ್ಲಿ ಸಂಸ್ಥೆಯ ಚಾಲಕರನ್ನೇ ಚಾಲನಾ ಕೆಲಸಕ್ಕೆ ನಿಯೋಜಿಸಬೇಕು

-ಈ ಬಸ್‌ಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ಧತಿ ಕೈಬಿಡಬೇಕು

ಇದನ್ನೂ ಓದಿ: Ekka: ಯುವರಾಜ್‌ ಕುಮಾರ್‌ ಭಾಷಣದ ವೇಳೆ ಕೇಳಿ ಬಂತು ‘ಡಿಬಾಸ್‌’ ಕೂಗು: ದೊಡ್ಮನೆ ಹುಡ್ಗನ ರಿಪ್ಲೈ ಹೇಗಿತ್ತು?

Comments are closed.