Temple Theft: ದೇವಸ್ಥಾನದೊಳಗೆ ಕಳವು ಮಾಡಲು ಬಂದು ಗಾಢ ನಿದ್ದೆಗೆ ಜಾರಿದ ಕಳ್ಳ

Temple Theft: ಜಾರ್ಖಂಡ್ನ ಕಾಳಿ ದೇವಸ್ಥಾನದೊಳಗೆ ಕಳವು ಮಾಡಲೆಂದು ಬಂದ ಕಳ್ಳನೊಬ್ಬ ನಿದ್ದೆಗೆ ಜಾರಿದ ಘಟನೆ ನಡೆದಿದೆ. ಕದ್ದ ವಸ್ತುಗಳನ್ನು ಪಕ್ಕದಲ್ಲಿಟ್ಟುಕೊಂಡು ಮಲಗಿದ್ದ ವ್ಯಕ್ತಿಗೆ ಎಚ್ಚರನೇ ಆಗಿರಲಿಲ್ಲ. ನಂತರ ಬೆಳಗ್ಗೆ ಜನರಿಂದ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಜಮಡಾ ಪೊಲೀಸರು ಕಳ್ಳನನ್ನು ಎಬ್ಬಿಸಿ ಕದ್ದ ಮಾಲುಗಳ ಜೊತೆಗೆ ವಶಕ್ಕೆ ಪಡೆದಿದ್ದಾರೆ.

ವೀರ್ ನಾಯಕ್ ಎಂಬಾತನೇ ಕಳ್ಳ. ಬರಜಮ್ಡಾ ಒಪಿಯಲ್ಲಿ ಎಫ್ಐಆರ್ ದಾಖಲು ಮಾಡಿ, ನಂತರ ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಯಿತು. ನಂತರ ಜೈಲಿಗೆ ಕಳುಹಿಸಲಾಗಿದೆ. ಸೋಮವಾರ ರಾತ್ರಿ ಈತ ಮದ್ಯ ಸೇವಿಸಿ ನಂತರ ಕಾಳಿ ದೇವಸ್ಥಾನದ ಮುಂಭಾಗದ ಗೋಡೆಯನ್ನು ಹತ್ತಿ ಬಾಗಿಲಿನ ಬೀಗ ಮುರಿದು ದೇವಸ್ಥಾನದೊಳಗೆ ಪ್ರವೇಶ ಮಾಡಿದ್ದು, ದೇವಾಲಯದ ಒಳಗಿನ ಕಾಳಿ ಮಾತೆಯ ವಿಗ್ರಹದ ಮೇಲೆ ಹಾಕಲಾಗಿದ್ದ ಆಭರಣಗಳು, ಪೂಜಾ ತಾಳಿ, ಲೋಟ, ಗಂಟೆ ಅಲಂಕಾರಿಕ ಸಾಮಾಗ್ರಿಗಳನ್ನು ಚೀಲದಲ್ಲಿ ತುಂಬಿಸಿ ಓಡಿ ಹೋಗಲು ಸಿದ್ಧತೆ ಮಾಡುತ್ತಿದ್ದವನಿಗೆ ನಿದ್ದೆ ಬಂದಿದ್ದು, ಅಲ್ಲೇ ನಿದ್ರೆಗೆ ಜಾರಿದ್ದಾನೆ.
ಮಂಗಳವಾರ ದೇವಸ್ಥಾನಕ್ಕೆ ಬಂದ ಜನರು ಬಾಗಿಲು ನೋಡಿದಾಗ ದೇವಸ್ಥಾನದ ಒಳಗೆ ಒಬ್ಬ ವ್ಯಕ್ತಿ ನಿದ್ದೆ ಮಾಡುತ್ತಿರುವುದನ್ನು ಕಂಡು, ಚೆಲ್ಲಾಪಿಲ್ಲಿಯಾದ ದೇವಸ್ಥಾನದ ವಸ್ತುಗಳನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.
ಇದನ್ನೂ ಓದಿ: Kiara Advani Baby: ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗೆ ಹೆಣ್ಣು ಮಗು ಜನನ
Comments are closed.