Nandini : ವಿದೇಶದಲ್ಲೂ ಘಮಲು ಬೀರಲು ರೆಡಿಯಾದ ನಂದಿನಿ ತುಪ್ಪ – ಸದ್ಯದಲ್ಲೇ ಆಸ್ಟ್ರೇಲಿಯಾ, ಕೆನಡಾಗೆ ರಫ್ತು

Nandini: ನಮ್ಮ ಕರ್ನಾಟಕದ ಹೆಮ್ಮೆಯ ಗ್ರಾಂಡ್ ಆಗಿರುವ ನಂದಿನಿ ತುಪ್ಪದ ಘಮಲು ಇದೀಗ ವಿದೇಶಗಳನ್ನು ಪಸರಿಸಲು ಮುಂದಾಗಿದೆ. ಸತ್ಯದಲ್ಲೆ ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಕ್ಕೂ ಕೂಡ ನಂದಿನಿ ತುಪ್ಪ ಪ್ರಧಾನಿಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೌದು, ಕೆಲವು ದಿನಗಳ ಹಿಂದೆನಂದಿನಿ ನಕಲು ತುಪ್ಪವನ್ನು ತಡೆಯಲು ಇದೀಗ ಕೆಎಂಎಫ್ ಮಹತ್ವ ನಿರ್ಧಾರವನ್ನು ಕೈಗೊಂಡಿದ್ದು ನಂದಿನಿ ತುಪ್ಪದ ಹೊಸ ಪ್ಯಾಕೆಟ್ಗಳನ್ನು ಬಿಡುಗಡೆಗೊಳಿಸಿದೆ. ಈ ವೇಳೆ ರಾಜ್ಯ ಮಾತ್ರವಲ್ಲದೆ ದಕ್ಷಿಣ, ಉತ್ತರ ಭಾರತದ ಹಲವು ರಾಜ್ಯಗಳು, ಸೌದಿ ಅರೇಬಿಯಾ, ದುಬೈನಲ್ಲೂ ನಂದಿನಿ ಔಟ್‌ಲೆಟ್‌ಗಳಿವೆ. ಆಸ್ಟ್ರೇಲಿಯಾ, ಕೆನಡಾದಿಂದಲೂ 3 ಸಾವಿರ ಟನ್ ತುಪ್ಪಕ್ಕೆ ಬೇಡಿಕೆ ಬಂದಿದೆ ಎಂದು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದರು.
ಈ ಕುರಿತಾಗಿ ಮಾತನಾಡಿದವರು ದುಬೈ, ಸೌದಿಅರೇಬಿಯಾಕ್ಕೆ ಈಗಾಗಲೇ ‘ನಂದಿನಿ’ ತುಪ್ಪ ಮಾರಾಟ ಮಾಡುತ್ತಿದ್ದು, ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ, ಕೆನಡಾ ದೇಶಗಳಿಗೂ ಪೂರೈಸಲಾಗುವುದು. ಆಗಸ್ಟ್‌ನಲ್ಲಿ ಅಲ್ಲಿ ನಡೆಯುವ ಉತ್ಸವಕ್ಕೆ 3ಸಾವಿರ ಟನ್‌ಗೆ ಬೇಡಿಕೆ ಬಂದಿದೆ ಎಂದು ತಿಳಿಸಿದರು.
Comments are closed.