Basavanagowda Yatnal: ಶೀಘ್ರದಲ್ಲೇ ಕರ್ನಾಟಕ ಜನತೆಗೆ ಶುಭಸುದ್ದಿ ನೀಡುವೆ -ಯತ್ನಾಳ್ ಪೋಸ್ಟ್, ರಾಜ್ಯ ರಾಜಕೀಯದಲ್ಲಿ ಸಂಚಲನ

Share the Article

Basavanagowda Yatnal: ಬಿಜೆಪಿ ನಾಯಕ, ಹಿಂದೂ ಫೈಯರ್ ಬ್ರಾಂಡ್ ಬಸವನಗೌಡ ಪಾಟೀಲ್ ಅವರು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆಗೊಂಡಿದ್ದಾರೆ. ಇದನ್ನಲೇ ರಾಜ್ಯ ರಾಜಕೀಯದಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಯತ್ನಾಳ್ ಅವರು ಹೊಸ ರಾಜಕೀಯ ಪಕ್ಷವನ್ನು ಕಟ್ಟುತ್ತಾರೆ ಎಂಬ ವದಂತಿ ಕೂಡ ಹಬ್ಬಿತ್ತು. ಈ ಬೆನ್ನಲ್ಲೇ ಇದೀಗ ಯತ್ನಾಳ್ ಅವರು ಸದ್ಯದಲ್ಲೇ ಕರ್ನಾಟಕಕ್ಕೆ ಶುಭ ಸುದ್ದಿಯನ್ನು ನೀಡುತ್ತೇನೆ ಎಂಬ ಪೋಸ್ಟನ್ನು ಹಾಕಿದ್ದಾರೆ ಎಂಬ ಸುದ್ದಿ ಸಾಕಷ್ಟು ವೈರಲ್ ಆಗುತ್ತಿದೆ.

ಹೌದು, ಉಚ್ಛಾಟಿತ ಶಾಸಕ ಯತ್ನಾಳ್, ಶೀಘ್ರದಲ್ಲಿ ಕರ್ನಾಟಕದ ಜನತೆಗೆ ಶುಭಸುದ್ದಿ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದ್ರೆ ಇದನ್ನು ಫ್ಯಾಕ್ಟ್ ಚೆಕ್ ಮಾಡಿ ನೋಡಿದಾಗ ಯತ್ನಾಳ್ ಅವರ ಅಧಿಕೃತ ಖಾತೆ ಅಲ್ಲ. ಅವರ ಹೆಸರಿನಲ್ಲಿ ಬೇರೊಂದು fb ಖಾತೆಯಿಂದ ಪೋಸ್ಟ್ ಮಾಡಲಾಗಿದೆ.

ಬಸಮಗೌಡ ಪಾಟೀಲ್ ಯತ್ನಾಳ್ ಹೆಸರಿನ ಫೇಸ್ಬುಕ್ ಖಾತೆ 90 ಸಾವಿರ ಫಾಲೋವರ್ಸ್ ಹೊಂದಿದ್ದು, ಯತ್ನಾಳ್ ಅವರ ಪ್ರತಿಯೊಂದು ಕಾರ್ಯಚಟುವಟಿಕೆಗಳನ್ನು ಈ ಖಾತೆಯಲ್ಲಿ ಪೋಸ್ಟ್ ಆಗುತ್ತಿದೆ. ಯತ್ನಾಳ್ ಪ್ರತಿ ದಿನ ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೋ ಅದರ ಅಪ್ಟೇಟ್ ನನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳುತ್ತದೆ. ಆದರೆ ಇದು ಯತ್ನಾಳ್ ಅವರ ಅಧಿಕೃತ ಖಾತೆ ಅಲ್ಲ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: Indigo Flight: ಟೇಕಾಫ್‌ ಆದ ಕೆಲವೇ ಕ್ಷಣದಲ್ಲಿ ʼಇಂಡಿಗೋ ವಿಮಾನʼ ತುರ್ತು ಭೂಸ್ಪರ್ಶ: ತಪ್ಪಿತು ಇನ್ನೊಂದು ದುರಂತ

Comments are closed.