UP: ಹೆಂಡತಿಯ ಕಿರುಕುಳ – ಬಿಳಿ ಪ್ಯಾಂಟ್ ಮೇಲೆ ಡೆತ್ ನೋಟ್ ಬರೆದಿಟ್ಟು ಪ್ರಾಣಬಿಟ್ಟ ಗಂಡ !!

UP: ಉತ್ತರ ಪ್ರದೇಶದಲ್ಲಿ ಒಂದು ಅಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು ಕುಟುಂಬ ಸದಸ್ಯರ ಕಿರುಕುಳ ತಾಳಲಾರದೆ ವ್ಯಕ್ತಿಯೊಬ್ಬರು ತನ್ನ ಬಿಳಿ ಪ್ಯಾಂಟ್ ಮೇಲೆ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ.

ಹೌದು, ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯ ಚೇಡಾ ನಾಗ್ಲಾ ಪ್ರದೇಶದ ದಿಲೀಪ್ ರಜಪೂತ್ ಎಂಬ ಯುವಕ ಪೊಲೀಸರು ಮತ್ತು ಅವರ ಪತ್ನಿಯ ಕುಟುಂಬ ಸದಸ್ಯರ ಕಿರುಕುಳವನ್ನು ಸಹಿಸಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವನು ಧರಿಸಿದ್ದ ಬಿಳಿ ಪ್ಯಾಂಟ್ ಮೇಲೆ ನೀಲಿ ಶಾಯಿಯಲ್ಲಿ ಡೇತ್ನೋಟ್ ಬರೆದಿದ್ದಾನೆ.
ಏನಿದು ಪ್ರಕರಣ?
ಫಾರೂಖಾಬಾದ್ ನ ಚೆಡ್ಡಾ ನಗ್ಲಾ ಪ್ರದೇಶದಲ್ಲಿ ವಿವಾಹಿತೆ ವನಾರಿ ಲಾಲ್, ತನ್ನ ಗಂಡ ದಿಲೀಪ್ ರಜಪೂತ್ ವಿರುದ್ಧ ಕುಡಿದು ಬಂದು ಹೊಡೆಯುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ತಂದೆಯ ಜೊತೆ ಪೊಲೀಸ್ ಠಾಣೆಗೆ ಹೋದಾಗ ಪೊಲೀಸ್ ಪೇದೆ ಯಶವಂತ್ ಯಾದವ್ ಎಂಬಾತ ಪ್ರಕರಣ ಇತ್ಯರ್ಥಗೊಳಿಸಲು 50 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ಒಪ್ಪದೇ ಇದ್ದಾಗ ಪೊಲೀಸರು ಹಲ್ಲೆ ಮಾಡಿದ್ದಾರೆ.
ನಂತರ ಮತ್ತೊಬ್ಬ ಪೊಲೀಸ್ ಮಹೇಶ್ ಉಪಾಧ್ಯಾಯ 10 ಸಾವಿರ ಕಡಿಮೆ ಮಾಡುತ್ತೇವೆ. 40 ಸಾವಿರ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ಒಪ್ಪದೇ ಇದ್ದಾಗ ದಿಲ್ಜಿತ್ ಗೆ ಬೇಡಿ ಹಾಕಿ ಅಪಮಾನಿಸಿದ್ದಾರೆ. ಪೊಲೀಸ್ ಠಾಣೆಯಿಂದ ಮರಳಿದ ಬೆನ್ನಲ್ಲೇ ದಿಲೀಪ್ ರಜಪೂತ್ ತಾನು ಧರಿಸಿದ್ದ ಬಿಳಿ ಪ್ಯಾಂಟ್ ಮೇಲೆ ನೀಲಿ ಬಣ್ಣದ ಇಂಕ್ ಪೆನ್ ನಿಂದ ಘಟನೆಯನ್ನು ವಿವರಿಸಿ ಡೆತ್ ನೋಟ್ ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಡೆತ್ ನೋಟ್ ನಲ್ಲಿ ಏನಿದೆ?
ಡೇತ್ನೋಟ್ನಲ್ಲಿ, ತನ್ನ ಪತ್ನಿಯ ಕುಟುಂಬ ಸದಸ್ಯರಾದ ವನ್ವರಿ ಲಾಲಾ, ರಾಜು ಮತ್ತು ರಾಜನೇಶ್ ರಜಪೂತ್ ಮತ್ತು ಪೊಲೀಸರು ತನಗೆ ಕಿರುಕುಳ ನೀಡಿದ್ದಾರೆ. ಅವರು ಲಂಚಕ್ಕೆ ಬೇಡಿಕೆ ಇಟ್ಟರು ಮತ್ತು ಅದನ್ನು ಸ್ವೀಕರಿಸದಿದ್ದರೆ ಥಳಿಸಿದರು. ಅಂತಿಮವಾಗಿ 40,000 ರೂ. ಪಾವತಿಸಿದ ನಂತರವೇ ಅವನನ್ನು ಬಿಡುಗಡೆ ಮಾಡಲಾಯಿತು ಎಂದು ಬರೆದು ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡನು. ತಮ್ಮ ಪ್ಯಾಂಟ್‌ನಲ್ಲಿರುವ ಆತ್ಮಹತ್ಯೆ ಪತ್ರದಲ್ಲಿ ಎಲ್ಲವನ್ನೂ ವಿವರಿಸಿದ್ದಾರೆ.
ಇನ್ನು ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಆರತಿ ಸಿಂಗ್ ಮಾತನಾಡಿ, “ಪತಿ ಪತ್ನಿಯನ್ನು ಥಳಿಸಿದ ಬಗ್ಗೆ ನಿನ್ನೆ ದೂರು ಸಲ್ಲಿಸಲಾಗಿದ್ದು, ಪತ್ನಿಯ ಸಂಬಂಧಿಕರು ಸಹ ಪೊಲೀಸ್ ಠಾಣೆಗೆ ತಲುಪಿದ್ದಾರೆ. ನಾವು ಎರಡೂ ಕಡೆಯವರು ರಾಜಿ ಮಾಡಿಕೊಳ್ಳಲು ಸಹಾಯ ಮಾಡಿದೆವು. ಆ ವ್ಯಕ್ತಿ ತನ್ನ ಮನೆಗೆ ತಲುಪಿ ಆತ್ಮಹತ್ಯೆ ಮಾಡಿಕೊಂಡನು. ಮರಣೋತ್ತರ ವರದಿಯಲ್ಲಿ ಅವರ ದೇಹದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ದೂರಿನಲ್ಲಿ, ವ್ಯಕ್ತಿಯ ಕುಟುಂಬವು ತನ್ನ ಹೆಂಡತಿಯ ಮೂವರು ಸಂಬಂಧಿಕರು ಮತ್ತು ಇಬ್ಬರು ಕಾನ್ಸ್ಟೇಬಲ್ಗಳನ್ನು ಹೆಸರಿಸಿದೆ. ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದರು.
Comments are closed.