Ekka: ಯುವರಾಜ್‌ ಕುಮಾರ್‌ ಭಾಷಣದ ವೇಳೆ ಕೇಳಿ ಬಂತು ‘ಡಿಬಾಸ್‌’ ಕೂಗು: ದೊಡ್ಮನೆ ಹುಡ್ಗನ ರಿಪ್ಲೈ ಹೇಗಿತ್ತು?

Share the Article

Ekka : ಯುವ ರಾಜ್‌ಕುಮಾರ್‌ ನಟನೆಯ ಎರಡನೇ ಚಿತ್ರ ಎಕ್ಕ ಇದೇ ಶುಕ್ರವಾರ ( ಜುಲೈ 18 ) ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹೀಗೆ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಸಮಯದಲ್ಲಿ ಚಿತ್ರತಂಡ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದ್ದು, ನಿನ್ನೆ ( ಜುಲೈ 15 ) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿತ್ತು.

ಈ ವೇಳೆ ನಟ ಯುವ ರಾಜ್‌ಕುಮಾರ್‌ ಎಕ್ಕ ಚಿತ್ರದ ಡೈಲಾಗ್‌ ಹೇಳಲು ಮುಂದಾದಾಗ ಪ್ರೇಕ್ಷಕರ ಕಡೆಯಿಂದ ಡಿ ಬಾಸ್‌ ಎಂಬ ಕೂಗು ಕೇಳಿಬಂತು. ಕೂಡಲೇ ಡೈಲಾಗ್‌ ನಿಲ್ಲಿಸಿ ಡಿಬಾಸ್‌ ಕೂಗನ್ನು ಆಲಿಸಿದ ಯುವ ಇನ್ನೂ ಜೋರಾಗಿ ಕೂಗಿ ಎಂದು ಕೈಸನ್ನೆ ಮೂಲಕ ತಿಳಿಸಿದರು. ಇದರ ಬೆನ್ನಲ್ಲೇ ಮತ್ತೊಂದೆಡೆ ಅಪ್ಪು.. ಅಪ್ಪು… ಎಂದು ಕಿರುಚಲಾರಂಭಿಸಿದರು. ಇದಕ್ಕೂ ಸಹ ಯುವ ಬೆಂಬಲ ಸೂಚಿಸಿದರು.

ಇನ್ನು ಕೂಗಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಡಿಬಾಸ್ ಎಂದು ಕೂಗಿರುವುದನ್ನು ಪುನೀತ್ ಹಾಗೂ ಯುವ ಫ್ಯಾನ್ಸ್ ಒಪ್ಪುತ್ತಿಲ್ಲ. ಅಭಿಮಾನಿಗಳು ಅಪ್ಪು.. ಅಪ್ಪು ಎಂದು ಕೂಗಿದ್ದಾರೆ. ಬಳಿಕ ಯುವ.. ಯುವ ಎಂದು ಜೈಕಾರ ಹಾಕಿದ್ದಾರೆ. ಅದು ನಿಮಗೆ ಸರಿಯಾಗಿ ಕೇಳಿಸ್ತಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇದು ಅಭಿಮಾನಿಗಳ ನಡುವೆ ಪರಸ್ಪರ ತಿಕ್ಕಾಟಕ್ಕೆ ಕಾರಣವಾಗಿದೆ.

ಇದನ್ನೂ ಓದಿ: KMF: ರಾಜ್ಯದಲ್ಲಿ ಸತತ ಒಂದು ತಿಂಗಳಲ್ಲಿ ಏರಿದ ಹಾಲು ಉತ್ಪಾದನೆ – ಕೆಎಂಎಫ್ ಇತಿಹಾಸದಲ್ಲೇ ಅತಿ ಹೆಚ್ಚು ಹಾಲು ಸಂಗ್ರಹ

Comments are closed.