Gokarna: ಗೋಕರ್ಣದ ಗುಹೆಯಲ್ಲಿ ವಾಸವಿದ್ದಿದ್ದೇಕೆ? ಶಾಕಿಂಗ್ ವಿಚಾರ ಬಹಿರಂಗಪಡಿಸಿದ ರಷ್ಯಾ ಮಹಿಳೆ!!

Gokarna: ಕಳೆದ ಶನಿವಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ರಾಮತೀರ್ಥ ಬೆಟ್ಟಗಳಲ್ಲಿರುವ ಗುಹೆಯಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದ ರಷ್ಯಾದ ಮಹಿಳೆಯನ್ನು ರಕ್ಷಿಸಲಾಗಿತ್ತು. ಈ ವಿಚಾರ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಈಗ ವಿಚಾರಣೆ ವೇಳೆ ಈ ಮಹಿಳೆ ಹೇಳಿರುವ ಕೆಲವು ವಿಚಾರಗಳನ್ನು ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.

ಹೌದು, ರಷ್ಯಾ ಮಹಿಳೆ ನೀನಾ ಕುಟಿನಾ (40) , ತನ್ನಿಬ್ಬರು ಮಕ್ಕಳಾದ ಪ್ರಾಯಾ (6) ಮತ್ತು ಅಮಾ (4) ಜತೆ ಗೋಕರ್ಣ ಬಳಿಯಿರುವ ಗುಹೆಯಲ್ಲಿ ರಹಸ್ಯವಾಗಿ ವಾಸವಿದ್ದು, ಇದೀಗ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಮಹಿಳೆ ನೀನಾ ಕುಟೀನಾ ಕೆಲವೊಂದು ಆಶ್ಚರ್ಯಕರ ಸಂಗತಿಗಳನ್ನು ತೆರೆದಿಟ್ಟಿದ್ದಾರೆ.
ನನ್ನ ಹಿರಿಯ ಮಗ ಸಾವನ್ನಪ್ಪಿದ್ದರಿಂದ ವೀಸಾ ಪಡೆಯಲು ಸಾಧ್ಯವಾಗಿರಲಿಲ್ಲ. ಭಾರತದ ವೀಸಾ ಅವಧಿ ಮುಗಿದಿತ್ತು. ಅದಕ್ಕಾಗಿ ನಾನು 20 ದೇಶದಲ್ಲಿ ಇದೇ ರೀತಿ ಕಾಡಿನಲ್ಲಿ ವಾಸವಿದ್ದೆ. ಪ್ರಕೃತಿಯ ಜೊತೆಗಿದ್ದರೆ ಅಪಾರವಾದ ಅನುಭವ ಸಿಗುತ್ತದೆ. ಬದುಕಿನಲ್ಲಿ ಚಂದದ ಅನುಭವ ಸಿಗಬೇಕು ಎನ್ನುವ ಕಾರಣಕ್ಕೆ ಪ್ರಕೃತಿಯ ಮಧ್ಯೆ ವಾಸವಾಗಿದ್ದೆ ಎಂದಿದ್ದಾರೆ.
ಅಲ್ಲದೆ ತನ್ನ ಕುರಿತು ಮಾತನಾಡಿದ ಆಕೆ ನೀವು ಈಗಾಗಲೇ ಸಾಕಷ್ಟು ತಪ್ಪು ಮಾಹಿತಿಯನ್ನು ನೀಡಿದ್ದೀರಿ. ನಮಗೆ ನೈಸರ್ಗಿಕವಾಗಿ ಕಾಡಿನಲ್ಲಿ ಉಳಿಯಲು ಸಾಕಷ್ಟು ಅನುಭವವಿದೆ ಮತ್ತು ನಾವೇನು ಸಾಯುತ್ತಿರಲಿಲ್ಲ. ನಾನು ನನ್ನ ಹೆಣ್ಣುಮಕ್ಕಳನ್ನು ಕಾಡಿನಲ್ಲಿ ಸಾಯಲು ಕರೆತಂದಿರಲಿಲ್ಲ, ನನ್ನ ಮಕ್ಕಳಿಗೆ ಯಾವುದೇ ಬೇಸರವೂ ಇರಲಿಲ್ಲ ಮತ್ತು ತುಂಬಾ ಸಂತೋಷವಾಗಿದ್ದರು. ಕಾಡಿನ ಜಲಪಾತದಲ್ಲಿ ಅವರು ಈಜುತ್ತಿದ್ದರು ಮತ್ತು ವಾಸಿಸುತ್ತಿದ್ದರು. ಮಲಗಲು ಅಲ್ಲಿ ಉತ್ತಮವಾದ ಸ್ಥಳವಿತ್ತು. ಕಲಾ ತಯಾರಿಕೆಯ ಬಗ್ಗೆ ಬಹಳಷ್ಟು ಪಾಠಗಳನ್ನು ಕಲಿತರು. ನಾವು ಜೇಡಿಮಣ್ಣಿನಿಂದ ಸಾಕಷ್ಟನ್ನು ತಯಾರಿಸಿದ್ದೇವೆ ಮತ್ತು ಬಣ್ಣ ಬಳಿದಿದ್ದೇವೆ. ಅಲ್ಲಿರುವಷ್ಟು ದಿನ ನಾವು ಚೆನ್ನಾಗಿ ತಿಂದಿದ್ದೇವೆ. ನಾನು ಗ್ಯಾಸ್ ಬಳಸಿ ಅಡುಗೆ ಮಾಡುತ್ತಿದ್ದೆ. ತುಂಬಾ ಒಳ್ಳೆಯ ಮತ್ತು ರುಚಿಕರವಾದ ಆಹಾರವನ್ನು ಮಾಡುತ್ತಿದ್ದೆ ಎಂದು ನೀನಾ ಕುಟಿನಾ ಹೇಳಿದ್ದಾರೆ.
ಗುಹೆಯೊಳಗೆ ಹಾವುಗಳು ಆಗಾಗ ಹರಿದಾಡುತ್ತಿದ್ದರೂ ಅವುಗಳಿಗೆ ನಾವು ಏನು ತೊಂದರೆ ಕೊಡುತ್ತಿರಲಿಲ್ಲ. ಹೀಗಾಗಿ ಅವುಗಳ ಪಾಡಿಗೆ ಬಂದು ಹೋಗುತ್ತಿದ್ದವು. ನಾನು ಯಾವತ್ತೂ ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿರಲಿಲ್ಲ. ಇಲ್ಲಿಗೆ ಬಂದ ಮೇಲೆ ವೈದ್ಯರ ಬಳಿ ಮಕ್ಕಳನ್ನು ಕರೆದುಕೊಂಡು ಹೋದರು. ಪ್ರಕೃತಿಯ ಮಧ್ಯೆ ಇದ್ದುದ್ದರಿಂದ ಆರೋಗ್ಯವಾಗಿಯೇ ಇರುತ್ತೇವೆ ಎಂದು ಹೇಳಿದರು.
ತನ್ನ ಹೆಣ್ಣುಮಕ್ಕಳು ಆರಾಮದಾಯಕ ಮತ್ತು ಸಂತೋಷದಿಂದಿದ್ದಾರೆ. ನನ್ನ ಬಳಿ ಟೆಲಿಗ್ರಾಮ್ ಚಾನಲ್ ಇದೆ. ನಾವು ಗುಹೆಯಲ್ಲಿ ಏನು ಮಾಡುತ್ತೇವೆ ಎಂಬುದನ್ನು ರೆಕಾರ್ಡ್ ಮಾಡಿ ಪೋಸ್ಟ್ ಮಾಡುತ್ತೇವೆ. ನಮ್ಮಲ್ಲಿ ಫೋಟೋ, ವಿಡಿಯೋ ಎಲ್ಲ ಇದೆ. ನಾವು ರುಚಿಕರವಾದ ಆಹಾರವನ್ನು ಹೇಗೆ ಬೇಯಿಸುತ್ತೇವೆ? ನಾವು ಏನು ತಿನ್ನುತ್ತೇವೆ? ನಾವು ಹೇಗೆ ಪಾಠ ಮಾಡುತ್ತೇವೆ? ಕಲೆ, ಚಿತ್ರಕಲೆ ಮತ್ತು ಜೇಡಿಮಣ್ಣು ನಾವು ಮಾಡುವ ಎಲ್ಲವನ್ನೂ ನೀವು ನೋಡಬಹುದು ಎಂದು ಕುಟಿನಾ ಹೇಳಿದರು.
ಗೋಕರ್ಣಕ್ಕೆ ಮೋಹಿ ಬಂದಿದ್ದೇಗೆ..?
ಬ್ಯುಸಿನೆಸ್ ವೀಸಾದಡಿ ಮೋಹಿ ರಷ್ಯಾದಿಂದ ಗೋವಾಕ್ಕೆ ಬಂದಿದ್ದರು. ಹಿಂದೂ ತತ್ವಶಾಸ್ತ್ರ ಮತ್ತು ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳಿಂದ ಆಕರ್ಷಿತರಾದ ಮೋಹಿ ಗೋಕರ್ಣದತ್ತ ವಿಶೇಷವಾಗಿ ಆಕರ್ಷಿತರಾದರು. ಹೀಗಾಗಿ ಗೋವಾದಿಂದ ಗೋಕರ್ಣಕ್ಕೆ ಬಂದು ರಾಮತೀರ್ಥ ಬಳಿಯ ಗುಹೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಿದ್ದರು. ಅಲ್ಲದೇ ಅಲ್ಲಿಯೇ ಚಿಕ್ಕ ರುದ್ರನ ಮೂರ್ತಿ ಇಟ್ಟುಕೊಂಡು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ದಿನಗಳನ್ನು ಕಳೆಯುತ್ತಿದ್ದರು.
Comments are closed.