Ananya Bhat: ಧರ್ಮಸ್ಥಳದಲ್ಲಿ ನಾಪತ್ತೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ದಿ.ಅನನ್ಯ ಭಟ್ ತಾಯಿಯಿಂದ SP ಗೆ ದೂರುಸಂತ್ರಸ್ತರು ಒಬ್ಬೊಬ್ಬರಾಗಿ ಪೊಲೀಸರ ಮೊರೆ!

Share the Article

Dharmasthala: ಧರ್ಮಸ್ಥಳ/ಮಂಗಳೂರು: ಧರ್ಮಸ್ಥಳ ಪ್ರದೇಶದಲ್ಲಿ ನಡೆದಿವೆ ಎನ್ನಲಾದ ಅತ್ಯಾಚಾರ ಕೊಲೆ ಪ್ರಕರಣದ ವಿಷಯಗಳಲ್ಲಿ ಬಹು ದೊಡ್ಡ ಬೆಳವಣಿಗೆಗಳು ನಡೆಯುತ್ತಿವೆ. ಧರ್ಮಸ್ಥಳದಲ್ಲಿ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿ (MBBS) ದಿವಂಗತ ಅನನ್ಯ ಭಟ್ ಅವರ ತಾಯಿ ಶ್ರೀಮತಿ ಸುಜಾತಾ ಭಟ್ ರವರು ಪೊಲೀಸರಿಗೆ ದೂರು ಕೊಡುವ ಬಗ್ಗೆ ಬೆಂಗಳೂರಿನ ಅಡ್ವೋಕೇಟ್ ಎನ್. ಮಂಜುನಾಥ್ ರವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು.

ಅದರಂತೆ ಇದೀಗ ದಿ. ಅನನ್ಯ ಭಟ್ ತಾಯಿ ಸುಜಾತ ಭಟ್ ರವರು ದಕ್ಷಿಣ ಕನ್ನಡ ಎಸ್ ಪಿ ಡಾ. ಅರುಣ್ ಕುಮಾರ್ ರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ ಮಾಡಬಹುದಾದ ಎಲ್ಲವನ್ನು ಮಾಡುವುದಾಗಿ ಎಸ್ ಪಿಯವರು ಹೇಳಿದ್ದಾಗಿ ವಕೀಲರು ತಿಳಿಸಿದ್ದಾರೆ.

ನಿನ್ನೆ ಹೊರಡಿಸಿದ ಪ್ರಕಟಣೆಯ ಸಾರಾಂಶ ಹೀಗಿದೆ.

“ಜುಲೈ 14, 2025 ರ ಪತ್ರಿಕಾ ಪ್ರಕಟಣೆಯ ಮುಂದುವರಿಕೆಯಾಗಿ, 2003 ರಲ್ಲಿ ಧರ್ಮಸ್ಥಳ ದೇವಸ್ಥಾನದಲ್ಲಿ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿ (MBBS) ದಿವಂಗತ ಅನನ್ಯ ಭಟ್ ಅವರ ತಾಯಿ ಶ್ರೀಮತಿ ಸುಜಾತಾ ಭಟ್ ರವರು ಇಂದು, ಮಂಗಳವಾರ ತಾರೀಕು 15 ನೆ ಜುಲೈ, ಸಂಜೆ 5.00 ಗಂಟೆಗೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಯ ಮುಂದೆ ತಮ್ಮ ವಕೀಲರೊಂದಿಗೆ ದೂರು ಸಲ್ಲಿಸಲಿದ್ದಾರೆ.” ಇದು ಅಡ್ವಕೇಟ್ ಏನ್ ಮಂಜುನಾಥ್ ಅವರು ಹೊರಡಿಸಿದ ಪತ್ರಿಕಾ ಪ್ರಕಟಣೆ.

ಕಳೆದ ವಾರ ಅನಾಮಧೇಯ ವ್ಯಕ್ತಿಯೊಬ್ಬ ನ್ಯಾಯಾಧೀಶರ ಮುಂದೆ ಬಂದಿದ್ದು, ನಾನು ಧರ್ಮಸ್ಥಳ ಪ್ರದೇಶದಲ್ಲಿ ನೂರಾರು ಶವಗಳನ್ನು, ಬೇರೆಯವರ ಬೆದರಿಕೆಯ ಹಿನ್ನೆಲೆಯಲ್ಲಿ ಹೂತು ಹಾಕಿದ್ದೇನೆ ಎಂದಿದ್ದರು. ಅಂದಿನಿಂದ ಇಡೀ ಪ್ರಕರಣ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕ್ಷಣ ಕ್ಷಣಕ್ಕೂ ಪ್ರಕರಣ ವೇಗ ಪಡೆದುಕೊಳ್ಳುತ್ತಿದೆ. ಈ ಹೊತ್ತಿನಲ್ಲೇ, ತನ್ನ ಮಗಳು ಅನನ್ಯ ಭಟ್ ಕಾಣೆಯಾಗಿದ್ದಾಳೆ. ಆಕೆಯ ಸಾವಿಗೆ ನ್ಯಾಯ ಕೊಡಿಸಿ ಎಂದು ಅನನ್ಯಾ ತಾಯಿ ಸುಜಾತಾ ಭಟ್ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅದಕ್ಕೆ SP ಯವರು ಪೂರಕವಾಗಿ ಸ್ಪಂದಿಸಿದ್ದು ಕಾನೂನಿನ ಅಡಿಯಲ್ಲಿ ಮಾಡಬಹುದಾದ ಸಹಾಯ ಮಾಡುವುದಾಗಿ ಹೇಳಿದ್ದಾಗಿ ವರದಿಯಾಗಿದೆ.

ಅದೇ ರೀತಿ ದಿ.ಅನನ್ಯ ಭಟ್ ತಾಯಿ ಸುಜಾತಾ ಭಟ್ ಧರ್ಮಸ್ಥಳ ಪೊಲೀಸ್ ಠಾಣೆಗೂ ತೆರಳಿ ದೂರು ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Dharmasthala: ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣ: ‘ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ ನೇತೃತ್ವದ ಎಸ್ಐಟಿ ರಚನೆಯಾಗಲಿ’- ದೂರುದಾರ ವಕೀಲರ ಆಗ್ರಹ

Comments are closed.