Bhatkala: ಭಟ್ಕಳ ನಗರ ಸ್ಪೋಟಕ್ಕೆ ಬೆದರಿಕೆ ಸಂದೇಶ: ಆರೋಪಿ ಅರೆಸ್ಟ್!

Share the Article

Bhatkala: ಭಟ್ಕಳ ನಗರವನ್ನು 24ಗಂಟೆಯೊಳಗೆ ಸ್ಫೋಟಿಸುವುದಾಗಿ ಭಟ್ಕಳ ಶಹರ ಠಾಣೆಗೆ ಇಮೇಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ಮೂಲದ ಕಣ್ಣನ್& ಮೋಸ್ಟ್ ವಾಂಟೆಡ್ ವ್ಯಕ್ತಿಯನ್ನು ಭಟ್ಕಳ ಶಹರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ತನಿಖೆ ವೇಳೆ, ಕಣ್ಣನ್ ಮೊಬೈಲ್‌ನಿಂದ ಮತ್ತೊಬ್ಬ ವ್ಯಕ್ತಿ ಈ ಕೃತ್ಯ ಮಾಡಿರುವುದು ಬಯಲಿಗೆ ಬಂದಿದೆ. ಮೋಬೈಲ್‌ನ್ನು ಹೇಗೆ ಆತ ತೆಗೆದುಕೊಂಡ ಎಂಬುವುದರ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು, ಕಣ್ಣನ್‌& ಮೋಸ್ಟ್ ವಾಂಟೆಡ್ ವ್ಯಕ್ತಿಯ ನಡುವಿನ ಭೇಟಿಯ ಕುರಿತು ತನಿಖೆ ಬಳಿಕ ಮಾಹಿತಿ ನೀಡುವುದಾಗಿ ಜಿಲ್ಲೆಯ SPತಿಳಿಸಿದ್ದಾರೆ.

ಇದನ್ನೂ ಓದಿ: Kerala: ಕೇರಳದಲ್ಲಿ ನಿಪಾ ವೈರಸ್‌ಗೆ ಇನ್ನೊಂದು ಬಲಿ: ಆರು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಿದ ಸರ್ಕಾರ!

Comments are closed.