Lakshmi Hebbalkar: ರಾಜಕೀಯದ ಜೊತೆಗೆ ‘ಕನ್ನಡ ಚಿತ್ರರಂಗ’ದತ್ತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Share the Article

Lakshmi Hebbalkar : ರಾಜ್ಯ ರಾಜಕೀಯದಲ್ಲಿ ಪ್ರಭಾವಿ ರಾಜಕೀಯ ಮಹಿಳೆಯಾಗಿ ಗುರುತಿಸಿಕೊಂಡಿರುವ ಕರ್ನಾಟಕದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇದೀಗ ರಾಜಕೀಯ ದೊಂದಿಗೆ ಕನ್ನಡ ಚಿತ್ರರಂಗದತ್ತ ಕೂಡ ಮುಖ ಮಾಡುತ್ತಿದ್ದಾರೆ.

ಹೌದು, ಹೆಬ್ಬಾಳ್ಕರ್ ತಮ್ಮದೇ ಹೊಸ ಪ್ರೊಡಕ್ಷನ್‌ ಹೌಸ್‌ ತೆರಯಲು ಸಜ್ಜಾಗಿದ್ದಾರೆ. ತಮ್ಮ ಮೊಮ್ಮಗಳ ಹೆಸರಿನಲ್ಲಿ ‘ಐರಾ ಪ್ರೊಡಕ್ಷನ್ ಹೌಸ್’ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ರಾಜಕಾರಣದ ಜೊತೆಗೆ ಕನ್ನಡ ಚಿತ್ರರಂಗದಲ್ಲೂ ತಮ್ಮ ವಿಶಿಷ್ಟ ಗುರುತು ಮೂಡಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

ಈ ಪ್ರೊಡಕ್ಷನ್ ಹೌಸ್‌ನಿಂದ ಎರಡು ಕನ್ನಡ ಚಿತ್ರಗಳು ಈಗಾಗಲೇ ನಿರ್ಮಾಣ ಹಂತದಲ್ಲಿದ್ದು, ಕನ್ನಡ ಚಿತ್ರರಂಗದ ದಿಗ್ಗಜ ನಟರಾದ ರಮೇಶ್ ಅರವಿಂದ್, ಗೋಲ್ಡನ್ ಸ್ಟಾರ್ ಗಣೇಶ್, ಮತ್ತು ಡಾಲಿ ಧನಂಜಯ್ ಈ ಚಿತ್ರಗಳಲ್ಲಿ ಅಭಿನಯಿಸುತ್ತಾರೆ ಎಂದು ಹೇಳಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಈ ಕುರಿತು ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಂಡಿಲ್ಲ.

ಇದನ್ನೂ ಓದಿ: Party Donation : ಬಿಜೆಪಿಗೆ ನೀಡೋ ದೇಣಿಗೆಯನ್ನು 4 ಪಟ್ಟು ಹೆಚ್ಚಿಸಿದ ವೇದಾಂತ ಕಂಪನಿ

Comments are closed.