Share the Article

Raichur: ಜುಲೈ 11 ರಂದು ರಾಯಚೂರಿನ ಗುರ್ಜಾಪುರ ಬ್ರಿಡ್ಜ್‌ ಬಳಿ ಪತ್ನಿ ಗದ್ದೆಮ್ಮ ತನ್ನ ಪತಿ ತಾತಪ್ಪನನ್ನು ಫೋಟೋ ತೆಗೆಯುವ ಉದ್ದೇಶದಲ್ಲಿ ನಿಲ್ಲಿಸಿ ಕೃಷ್ಣ ನದಿಗೆ ತಳ್ಳಿದ ಘಟನೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ನೆಟ್ಟಿಗರಂತೂ 2025 ರಲ್ಲಿ ಹೆಂಡತಿ ಕೊಲೆ ಮಾಡಲು ಪ್ರಯತ್ನದಲ್ಲಿ ಬದುಕುಳಿದ ಏಕೈಕ ಗಂಡ ಎಂದು ಹೇಳಿದ್ದಾರೆ.

ಈ ಘಟನೆಯ ನಂತರ ಮನೆ ಮಂದಿ ಗಂಡ-ಹೆಂಡತಿ ಕೂರಿಸಿ ರಾಜಿ ಪಂಚಾಯಿತಿ ಮಾಡಿದ್ದಾರೆ. ಇದರ ಜೊತೆಗೆ ಗಂಡ ತಾತಪ್ಪ ನಿಗದಿತ ಷರತ್ತುಗಳ ಜೊತೆ ಹೆಂಡತಿ ಕುರಿತಾಗಿ ಕೆಲವೊಂದು ನಿರ್ಧಾರವನ್ನು ಹೇಳಿದ್ದಾನೆ.

ಗಂಡ ಹೆಂಡತಿ ಇಬ್ಬರ ಹಿರಿಯರ ಸಮ್ಮುಖದಲ್ಲಿ ಅಂತಿಮ ಸಂಧಾನ ಮಾತುಕತೆ ಆಗಿದೆ. ಈ ರಾಜಿ ಪಂಚಾಯಿತಿಯಲ್ಲಿ ಪತಿ ತಾತಪ್ಪ ತನ್ನ ಹೆಂಡತಿಯ ಕೃತ್ಯವನ್ನು ತೀವ್ರವಾಗಿ ಖಂಡನೆ ಮಾಡಿದ್ದು, ಗ್ರಾಮೀಣ ಠಾಣೆ ಪೊಲೀಸರಿಗೂ ಸಂಪೂರ್ಣ ಮಾಹಿತಿ ನೀಡಲಾಗಿದೆ.

ನನಗೆ ಪತ್ನಿಗೆ ಜೊತೆ ಮುಂದಿನ ಜೀವನ ನಡೆಸಲು ಗಂಡ ತಾತಪ್ಪ ಸ್ಪಷ್ಟ ನಿರಾಕರಣೆ ಮಾಡಿದ್ದಾನೆ. ತವರು ಮನೆಯಲ್ಲಿಯೇ ಪತ್ನಿ ಇರಬೇಕು. ನನ್ನ ಜೊತೆ ಬೇಡ. ಮದುವೆ ಸಂಬಂಧ ಇನ್ನು ಮುಂದೆ ಮುಕ್ತವಾಗಬೇಕು. ನನಗೆ ಈಕೆಯಿಂದ ಡಿವೋರ್ಸ್‌ ಬೇಕು. ಪತ್ನಿಯನ್ನು ಕರೆದುಕೊಂಡು ಬಾ ಎಂದು ಒತ್ತಡ ಹೇರುವಂತಿಲ್ಲ. ನನ್ನ ಜೊತೆಗೆ ಪತ್ನಿ ಕರೆದೊಯ್ಯುವಂತೆ ಹೇಳಿದರೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಗಂಡ ತಾತಪ್ಪ ಕಟು ನಿರ್ಧಾರ ಮಾಡಿದ್ದಾನೆ.

ಪತಿ ತಾತಪ್ಪ ನೀಡಿರುವ ಮಾಹಿತಿಯ ಆಧಾರದಲ್ಲಿ ರಾಯಚೂರಿನ ಗ್ರಾಮೀಣ ಪೊಲೀಸರು ಮುಂದಿನ ಹಂತದ ತನಿಖೆಗೆ ಸಿದ್ಧತೆ ಮಾಡಿದ್ದಾರೆ. ರಾಜಿ ಮೂಲಕ ಪ್ರಕರಣ ಮುಕ್ತಾಯಗೊಂಡರೂ, ತಾತಪ್ಪ ಕಾನೂನು ಹೋರಾಟ ನಡೆಸಲು ನಿರ್ಧಾರ ಮಾಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ನು ಬಸ್ ನಲ್ಲಿ ಕೊಂಡೊಯ್ಯಬಹುದು ಫ್ರಿಡ್ಜ್, ವಾಷಿಂಗ್ ಮಿಷಿನ್, ನಾಯಿ, ಬೆಕ್ಕು, ಮೊಲ !!

Comments are closed.