Sadanand Master: ಎರಡು ಕಾಲಿಲ್ಲದ ಶಾಲಾ ಶಿಕ್ಷಕಕನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ ಬಿಜೆಪಿ – ಯಾರು ಈ ಸದಾನಂದ್ ಮಾಸ್ಟರ್?

Sadanand Master : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಲ್ಕು ಮಂದಿಯನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಈ ನಾಲ್ಕು ಮಂದಿ ಪೈಕಿ ಎರಡು ಕಾಲುಗಳಿಲ್ಲದ, ಸಮಾಜದಲ್ಲಿ ತನ್ನ ವಿಶೇಷ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡ ಸದಾನಂದ್ ಮಾಸ್ಟರ್ ಎಂಬುವರು ಒಬ್ಬರು. ಯಸ್, ದೇವರನಾಡು ಕೇರಳದ ಹಿರಿಯ ಸಾಮಾಜಿಕ ಕಾರ್ಯಕರ್ತ, ಶಿಕ್ಷಣ ತಜ್ಞರಾದ ಸದಾನಂದನ್ ಮಾಸ್ಟರ್ ( C Sadanandan Master ) ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ.

ಹೌದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಖ್ಯಾತ ವಕೀಲರಾದ ಉಲ್ವಲ್ ನಿಕಮ್, ಮಾಜಿ ವಿದೇಶಾಂಗ ಸಚಿವ ಹರ್ಷವರ್ಧನ್ ಶ್ರಿಂಗ್ಲಾ, ಇತಿಹಾಸಗಾರ್ತಿ ಡಾ. ಮೀನಾಕ್ಷಿ ಜೈನ್ ಹಾಗೂ ಕೇರಳದ ಹಿರಿಯ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞರಾಗಿರುವ ಸದಾನಂದನ್ ಮಾಸ್ಟರ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದಾರೆ. ಸದಾನಂದನ್ ಮಾಸ್ಟರ್ ಅವರ ನೇಮಕ ಇದೀಗ ಬಿಜೆಪಿ ಕಾರ್ಯಕರ್ತರ ಸಂಭ್ರಮಕ್ಕೆ ಕಾರಣವಾಗಿದೆ. ಹಾಗಿದ್ದರೆ ಯಾರು ಈ ಸದಾನಂದ ಮಾಸ್ಟರ್?
ಕೇರಳ ಮೂಲದ ಸದಾನಂದನ್ ಮಾಸ್ಟರ್ ಅವರ ಹಿನ್ನಲೆ ತುಂಬಾ ನೋವಿನದ್ದಾಗಿದ್ದರೂ, ಇವರ ದೇಶ ಪ್ರೇಮ, ಆರ್‌ಎಸ್‌ಎಸ್ ಸಿದ್ದಾಂತದ ಮೇಲಿನ ಆಕರ್ಷಣೆ, ಬಿಜೆಪಿ ಮೇಲಿನ ನಿಯತ್ತು, ಈಗ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುವವರೆಗೆ ತಂದು ನಿಲ್ಲಿಸಿದೆ. ಮೂಲತಃ, ಕಮ್ಯೂನಿಸ್ಟ್ ಕುಟುಂಬದಲ್ಲಿ ಹುಟ್ಟಿದ್ದರೂ, ಇವರು ಆಕರ್ಷಿತಗೊಂಡಿದ್ದು RSS ಮೇಲಿನ ಸಿದ್ದಾಂತವನ್ನು.
ಕೇರಳದ ಕಣ್ಣೂರು ಜಿಲ್ಲೆಯ ಕೂತುಪರಂಬಾದ ಪೆರಿಚೇರಿಯಲ್ಲಿ ಜನಿಸಿದ ಸದಾನಂದನ್ ಮಾಸ್ಟರ್ ಗೌವಾಹಟಿಯ ವಿಶ್ವವಿದ್ಯಾನಿಯಲದಿಂದ ಬಿಕಾಂ ಪದವಿ ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಬಿಎಡ್ ಪದವಿಯನ್ನು ಪಡೆದುಕೊಂಡಿದ್ದರು. ಸದಾನಂದನ್ ಮಾಸ್ಟರ್ ಅವರ ತಂದೆ ಕುಂಜಿರಾಮನ್ ನಂಬಿಯಾರ್ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ತನ್ನ ತಂದೆ ಹಾಗೂ ಸದಾನಂದನ್ ಮಾಸ್ಟರ್ ಅವರ ಅಣ್ಣ ಸಿಪಿಐಎಂನ ಸಿದ್ದಾಂತದಿಂದ ಪ್ತಭಾವಿತರಾಗಿದ್ದರು. ಆದರೆ ಸದಾನಂದ ಮಾಸ್ಟರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪ್ರಭಾವಿತರಾಗಿದ್ದರು. 1984ರಿಂದ ಸದಾನಂದನ್ ಮಾಸ್ಟರ್ ಅವರು ಆರ್‌ಎಸ್‌ಎಸ್ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ಕಮ್ಮಿಯಾಗಿರುವ ಹಿಂಸಾಚಾರ, ದಶಕಗಳಿದ ತೀವ್ರ ಸ್ವರೂಪವನ್ನೇ ಪಡೆದಿತ್ತು. ಕಮ್ಯೂನಿಸ್ಟ್ (ಸಿಪಿಐಎಂ) ಮತ್ತು ಸಂಘ ಪರಿವಾರದ ನಡುವಿನ ದ್ವೇಷಕ್ಕೆ ಅದೆಷ್ಟೋ ಅಮಾಯಕರು ಬಲಿಯಾಗಿದ್ದರು. ಹಿಂದೂ ಕಾರ್ಯಕರ್ತರು ಭಯಭೀತರಾಗಿ ಕೇರಳದ ಕೆಲವೊಂದು ಪ್ರದೇಶಗಳಲ್ಲಿ ಬಾಳಬೇಕಾದಂತಹ ಸ್ಥಿತಿಯಿತ್ತು. ಅಂತಹ ವೇಳೆ, ಸದಾನಂದನ್ ಮಾಸ್ಟರ್, ಸಂಘದ ಸಿದ್ದಾಂತದ ಪರವಾಗಿ ಗಟ್ಟಿಯಾಗಿ ನಿಂತರು.
ತಂಗಿಯ ಮದುವೆಗೆ ಆಮಂತ್ರಣ ಕೊಡಲು ಹೋದಾಗ ಹೋಯ್ತು ಎರಡು ಕಾಲು:
31 ವರ್ಷಗಳ ಹಿಂದೆ ಅಂದರೆ ಜನವರಿ 25, 1994ರಂದು ಸದಾನಂದನ್ ಮಾಸ್ಟರ್, ತನ್ನ ತಂಗಿಯ ಮದುವೆಗೆ ಆಮಂತ್ರಣ ಪತ್ರವನ್ನು ವಿತರಿಸಲು ಪ್ರಯಾಣಿಸುತ್ತಿದ್ದರು. ಆ ವೇಳೆ, ಸಿಪಿಐಎಂ ಕಾರ್ಯಕರ್ತರು ಎಂದು ಹೇಳಲಾಗುತ್ತಿರುವ ಗುಂಪು ಇವರ ಮೇಲೆ ದಾಳಿ ನಡೆಸಿತು. ಕಾರಿನಿಂದ ಅವರನ್ನು ಹೊರಗೆಳೆದು ಅವರ ಎರಡು ಕಾಲುಗಳನ್ನು ರಕ್ಕಸರಂತೆ ಕಡಿದು ಹಾಕಿತು. ನೋವಿನಿಂದ ಕಿರುಚಾಡುತ್ತಿದ್ದ ಇವರನ್ನು ಗೂಂಡಾಗಳು ರಸ್ತೆಯಲ್ಲಿ ಎಳೆದಾಡಿದರು. ಕಡಿದು ಹಾಕಿದ ಕಾಲನ್ನು ಮತ್ತೆ ಜೋಡಣೆಗೆ ಸಿಗಬಾರದೆಂದು ಅಡಗಿಸಿಟ್ಟರು. ಮಾನವೀಯತೆ ಇಲ್ಲದ ಈ ರಕ್ಕಸರ ಕ್ರೌರ್ಯ ನಡೆದಾಗ ಅವರಿಗೆ ಆಗಿನ್ನೂ ಮೂವತ್ತು ವರ್ಷ. ಪೊಲೀಸರು ಬಂದು ಇವರನ್ನು ಆಸ್ಪತ್ರೆಗೆ ಸೇರಿಸುವ ತನಕವೂ, ಅವರು ನೋವಿನಲ್ಲಿ ನರಳಾಡುತ್ತಿದ್ದಾರು. ಅಕ್ಷರಸಃ ಮಾನವೀಯತೆಯಿಲ್ಲದ ಕೆಲಸ ಅದಾಗಿತ್ತು. ಸದಾನಂದನ್ ಮಾಸ್ಟರ್ ಅವರ ಕಾಲು ಕತ್ತರಿಸಿದ ಪ್ರಕರಣ ಕೇರಳ ಮಾತ್ರವಲ್ಲ ದೇಶದಾದ್ಯಂತ ಬಾರೀ ಸುದ್ದಿಯನ್ನು ಮಾಡಿತ್ತು. ತನ್ನ ಕಾಲು ಕಳೆದುಕೊಂಡಿದ್ದರೂ ಕೂಡ ಅವರು ಎದೆಗುಂದದೆ ಬದುಕಿದ್ದು ಬಿಜೆಪಿಗೆ ವರದಾನವಾಗಿತ್ತು.
ಹೀಗೆ ಮಾನಸಿಕ ಮತ್ತು ದೈಹಿಕವಾಗಿ ಜರ್ಝರಿತರಾದರೂ, ಸಂಘದ ಮೇಲಿನ ಇವರ ನಿಷ್ಠೆ ಇನ್ನಷ್ಟು ಹೆಚ್ಚಾಯಿತು. ಕೃತಕ ಕಾಲುಗಳನ್ನು ಜೋಡಿಸಿಕೊಂಡರು. ಅಲ್ಲಿಂದ, ಕುಳಿಕಲ್ ಶಾಲೆಯಲ್ಲಿ ಸುಮಾರು 2.5 ವರ್ಷ ಕೆಲಸ ಮಾಡಿದರು. ನಂತರ, ಆರ್‌ಎಸ್‌ಎಸ್ ಅವರಿಗೆ ತ್ರಿಶೂರಿನ ಶಾಲೆಯಲ್ಲಿ ಸೇರಿಕೊಳ್ಳುವಂತೆ ಶಿಫಾರಸನ್ನು ಮಾಡಿತ್ತು. ಅಲ್ಲಿನ ದುರ್ಗಾವಿಲಾಸಂ ಶಾಲೆಯಲ್ಲಿ ಇಪ್ಪತ್ತೈದು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ 2020ರಲ್ಲಿ ನಿವೃತ್ತಿಯನ್ನು ಹೊಂದಿದರು. 2021ರಲ್ಲಿ ಕೇರಳದ ಕುತುಪರಾಂಬ ಅಸೆಂಬ್ಲಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ, ಮೂರನೇ ಸ್ಥಾನವನ್ನು ಪಡೆದರು. ಇದೀಗ ಬಿಜೆಪಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿರುವುದು ದೇಶಾದ್ಯಂತ ಭಾರಿ ಮೆಚ್ಚುಗೆಗೆ ವ್ಯಕ್ತವಾಗಿದೆ.
ಅಲ್ಲದೆ ಸದಾನಂದನ್ ಮಾಸ್ಟರ್ ಅವರ ಪ್ರೇರಣೆಯಿಂದಲೇ ಕೇರಳದಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕರ್ತರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಮಾನ್ಯ ಶಾಲೆಯ ಶಿಕ್ಷಕರಿಗೆ ರಾಜ್ಯಸಭೆಯ ಸ್ಥಾನಮಾನ ಸಿಕ್ಕಿರೋದು ಕೇರಳದ ಬಿಜೆಪಿಗರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.
Comments are closed.