UP: ‘ವಿದ್ಯುತ್ ಕೇವಲ 3 ಗಂಟೆ ಕಾಲ ಬರ್ತಿದೆ, ಪರಿಹಾರ ಕೊಡಿ’ ಎಂದ ಜನ- ‘ಜೈ ಶ್ರೀರಾಮ್, ಜೈ ಶ್ರೀರಾಮ್’ ಎಂದು ಕೂಗುತ್ತಾ ಕಾರು ಏರಿ ಹೊರಟ ಸಚಿವ!!

UP: ನಾವು ಆರಿಸಿ ಕಳಿಸುವ ಜನಪ್ರತಿಗಳು ನಮ್ಮ ಕುಂದು ಕೊರತೆಗಳನ್ನು ಆಲಿಸಿ, ಅವುಗಳನ್ನು ಸರಿಪಡಿಸಿ ನಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಡಬೇಕು. ಆದರೆ ಇನ್ನೊಬ್ಬ ಸಚಿವ ಜನರು ತಮ್ಮ ಕಷ್ಟವನ್ನು ಹೇಳಿಕೊಂಡರೆ ಕೈಯೆತ್ತಿ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ಕಾರು ಏರಿ ಹೋರಾಟ ವಿಚಿತ್ರ ಪ್ರಕರಣ ನಡೆದಿದೆ.
ಹೌದು, ಉತ್ತರ ಪ್ರದೇಶದ ವಿದ್ಯುತ್ ಸಚಿವರೊಬ್ಬರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರ ಗಂಭೀರ ಸಮಸ್ಯೆಗಳಿಗೆ ಅವರ ಪ್ರತಿಕ್ರಿಯೆ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ವಿಡಿಯೋದಲ್ಲಿ, ಸಚಿವರನ್ನು ಜನರು ಹೂಮಾಲೆ, ಘೋಷಣೆಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಬಳಿಕ ಸಚಿವರೇ, 24 ಗಂಟೆ ವಿದ್ಯುತ್ ಭರವಸೆ ನೀಡಿದ್ದೀರಿ, ಆದರೆ 3 ಗಂಟೆಯೂ ಸಿಗುತ್ತಿಲ್ಲ! ಎಂದು ಒಬ್ಬರು ಕೂಗಿದರೆ, ‘ವ್ಯಾಪಾರ ಸಮುದಾಯ ಸಂಕಷ್ಟದಲ್ಲಿದೆ, ಏನಾದರೂ ಮಾಡಿ!’ ಎಂದು ಮತ್ತೊಬ್ಬರು ದೂರುತ್ತಾರೆ.
ಆದರೆ, ಸಚಿವರು ಮೌನವಾಗಿದ್ದು, ದೂರುಗಳಿಗೆ ಕಿವಿಗೊಡದಂತೆ ಸುಮ್ಮನೆ ಇರುತ್ತಾರೆ. ಜನರು ಜೋರಾಗಿ ಮತ್ತೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವಾಗ ಎರಡು ಕೈಗಳನ್ನು ಎತ್ತಿ ಜೈ ಶ್ರೀ ರಾಮ್ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಕಾರನ್ನು ಏರಿಸಿದ ಅಲ್ಲಿಂದ ತೆರಳುತ್ತಾರೆ. ಜನರು ಇಂತಹ ನಾಲಾಯಕ್ ನಾಯಕನನ್ನು ನಾವು ಆರಿಸಿದ್ದೇವೆ ಎಂದು ನಿರಾಸೆ, ಕೋಪ, ದ್ವೇಷಗಳಿಂದ ಕಂಗಲಾಗಿ ನೋಡುತ್ತಾ ನಿಲ್ಲುತ್ತಾರೆ.
Comments are closed.