Viral News: ಪತ್ನಿಯನ್ನು ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್‌ಫಾರ್ಮ್‌ಗೇ ಬಂದ ಪತಿ

Share the Article

Gwalior: ಜಗಳವಾಡಿ ಮನೆಯಿಂದ ಹೊರಟ ಪತ್ನಿಯನ್ನು ಹುಡುಕಿಕೊಂಡು ಬಂದ ಗಂಡ ತನ್ನ ಕಾರನ್ನು ರೈಲ್ವೆ ಪ್ಲಾಟ್‌ಫಾರ್ಮ್‌ಗೆ ಕಾರು ಓಡಿಸಿಕೊಂಡು ಬಂದ ವಿಚಿತ್ರ ಘಟನೆ ಗ್ವಾಲಿಯರ್‌ನಲ್ಲಿ ನಡೆದಿದೆ. ಈತ ಮದ್ಯಪಾನ ಮಾಡಿದ್ದಾಗಿಯೂ ವರದಿಯಾಗಿದೆ.

ಬೆಳಗಿನ 3 ಗಂಟೆ ಸುಮಾರಿಗೆ ಸಬ್‌ ಇನ್ಸ್‌ಪೆಕ್ಟರ್‌ ರವೀಂದ್ರ ಸಿಂಗ್‌ ರಾಜಾವತ್‌ ತಮ್ಮ ತಂಡದ ಜೊತೆ ಫ್ಲಾಟ್‌ಫಾರ್ಮ್‌ನಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಝಾನ್ಸಿ ಕಡೆಯಿಂದ ಕಾರೊಂದು ಪ್ಲಾಟ್‌ಫಾರ್ಮ್‌ಗೆ ಚಲಿಸುವುದನ್ನು ಗಮನಿಸಿ ತಡೆದು ವಿಚಾರಣೆ ಮಾಡಿದ್ದಾರೆ.

ನಿತಿನಗ ತನ್ನ ಹೆಂಡತಿ ಜೊತೆ ಜಗಳವಾಡಿದ್ದಾಗಿ ಹೇಳಿದ್ದು, ಆಕೆ ಮನೆ ಬಿಟ್ಟು ಹೋಗಿದ್ದಾಳೆ. ಆಕೆಯನ್ನು ಹುಡುಕುತ್ತಾ ಇಲ್ಲಿಗೆ ಬಂದಿರುವುದಾಗಿ ಹೇಳಿದ್ದಾನೆ. ನಿತಿನ್‌ನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದು, ಏನೇ ಸಮಸ್ಯೆ ಇದ್ದರೂ ಪ್ಲಾಟ್‌ಫಾರ್ಮ್‌ ಮೇಲೆ ಕಾರು ತರುವುದು ತಪ್ಪು ಎಂದು ಝಾನ್ಸಿ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಮನೋಜ್‌ ಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ: Bantwala: ಬಂಟ್ವಾಳ: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್!

Comments are closed.