Sigandhur: ಸಿಗಂದೂರು ಸೇತುವೆಗೆ ಬಿ ಎಸ್ ಯಡಿಯೂರಪ್ಪ ಹೆಸರು? ಹೈಕೋರ್ಟ್ ಮೆಟಿಲೇರಿದ ರೈತ

Sigandhur: ಸಿಗಂದೂರು ಭಾಗದ ಜನರ ದಶಕಗಳ ಕನಸಾಗಿರುವ ಸಿಗಂದೂರು ಸೇತುವೆ ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದೀಗ ಈ ಸೇತುವೆಗೆ ಬಿಎಸ್ ಯಡಿಯೂರಪ್ಪ ಅವರ ಹೆಸರನ್ನು ಇಡಬೇಕೆಂದು ರೈತರು ಒಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಹೌದು, ಜುಲೈ 14ರಂದು ಸಿಗಂದೂರು ಸೇತುವೆ ಲೋಕಾರ್ಪಣೆಗೊಳ್ಳಲಿದೆ. ಈ ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಹೆಸರಿಡುವಂತೆ ಕೋರಿ ಜಿಲ್ಲೆಯ ಸಾಗರದ ರೈತ ಹರನಾಥರಾವ್ ಅವರು ಹೈಕೋರ್ಟ್‌ಗೆ ಈ ಬಗ್ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದು, ನಾಳೆ ಈ ಬಗ್ಗೆ ವಿಚಾರಣೆ ನಡೆಯಲಿದೆ.
ಅರ್ಜಿಯಲ್ಲಿ ಎಸ್. ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲೆಯನ್ನ ಅಭಿವೃದ್ಧಿ ಮಾಡಿದ್ದಾರೆ. ಅವರ ಕಾರಣದಿಂದ ಅನೇಕ ಕೆಲಸಗಳು ಆಗಿದೆ. ಅಲ್ಲದೇ, ಈ ಸಿಗಂದೂರು ಸೇತುವೆ ನಿರ್ಮಿಸುವಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿದೆ. ಹಾಗಾಗಿ ಅವರ ಹೆಸರನ್ನ ಸೇತುವೆಗೆ ಇಡಬೇಕು ಎಂದು ಹೇಳಲಾಗಿದೆ.
ಇನ್ನು ಸುಮಾರು 424 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆಯನ್ನ ನಿರ್ಮಾಣ ಮಾಡಲಾಗಿದ್ದು, 2.44 ಕಿ.ಮೀ ಉದ್ದ, 16 ಮೀಟರ್ ಅಗಲವಿದೆ. ಭಾರತದ 2ನೇ ಅತಿ ಉದ್ದದ ಕೇಬಲ್ ಸೇತುವೆ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದ್ದು, ಇದಕ್ಕೆ ಯಡಿಯೂರಪ್ಪ ಹೆಸರನ್ನ ಇಡಲಾಗುತ್ತದೆಯೋ ಇಲ್ಲವೋ ಕಾದುನೋಡಬೇಕಿದೆ.
ಇದನ್ನೂ ಓದಿ:NEET: ನೀಟ್ ಪಿಜಿ 2025 ರ ಬಗ್ಗೆ ನಕಲಿ ನೋಟಿಸ್ ವೈರಲ್: NBEMS ನಿಂದ ಎಚ್ಚರಿಕೆ
Comments are closed.