Lawyer Jagadish: ಮದುವೆಯಾಗದೆ IVF ಗರ್ಭ ಧರಿಸಿದ ನಟಿ ಭಾವನ – ಮನಸ್ಸಿಗೆ ಸ್ವಲ್ಪ ನೋವಾಯಿತು ಎಂದ ಲಾಯರ್ ಜಗದೀಶ್

Lawyer Jagadish: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಉತ್ತಮ ಚಿತ್ರಗಳ ಮೂಲಕ ಗುರುತಿಸಿಕೊಂಡ ನಟಿ ಭಾವನ ರಾಮಣ್ಣ ಸದ್ಯ IVF ಮೂಲಕ ಗರ್ಭವತಿಯಾಗಿದ್ದಾರೆ. ಇದು ಸದ್ಯ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ವಿಚಾರ. ಆದರೂ ಭಾವನ ಅವರು ನನ್ನ ನಿರ್ಧಾರದ ಕುರಿತು ನನಗೆ ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಇತ್ತೀಚಿಗೆ ಸಂದರ್ಶನದಲ್ಲಿ ಭಾವನಾ ಅವರು ತನ್ನ IVF ಗರ್ಭಧಾರಣೆಗೆ ದಕ್ಷಿಣ ಭಾರತದ ಪುರುಷರೊಬ್ಬರ ವೀರ್ಯವನ್ನು ದಾನ ಪಡೆದಿದ್ದೇನೆ ಎಂದು ಬಹಿರಂಗಪಡಿಸಿದ್ದರು. ಆದರೆ ಈಗ ನಟಿ ಭಾವನ ನಿರ್ಧಾರಕಂಡು ಮನಸ್ಸಿಗೆ ಸ್ವಲ್ಪ ನೋವಾಯಿತು ಎಂದು ಲಾಯರ್ ಜಗದೀಶ್ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

ಹೌದು, ಮದುವೆ ಆಗದೇ ಭಾವನಾ ರಾಮಣ್ಣ ಗರ್ಭಿಣಿಯಾಗಿರುವ ಬಗ್ಗೆ ಚರ್ಚೆ ಆಗುತ್ತಿರೋದೇನೋ ಸತ್ಯ. ಆದರೆ, ಪರೋಕ್ಷವಾಗಿ ಐವಿಎಫ್ ಬಗ್ಗೆ ಪ್ರಚಾರ ಮಾಡುತ್ತಿದ್ದಾರಾ? ಆಸ್ಪತ್ರೆಗಳು ಐವಿಎಫ್ ಪ್ರಚಾರದಲ್ಲಿ ತೊಡಗಿದ್ದಾರಾ? ಎಂದು ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅನುಮಾನದ ಜೊತೆಗೆ ನೋವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಲಾಯರ್ ಜಗದೀಶ್ ಅವರು ಮಾತನಾಡಿರುವ ವಿಡಿಯೋ ಇದೀಘ ವೈರಲ್ ಆಗುತ್ತಿದೆ.
ಅಲ್ಲದೆ ಐವಿಎಫ್ ಮೂಲಕ ಮಕ್ಕಳನ್ನ ಭಾವನಾ ಪಡೆಯುತ್ತಿದ್ದಾರೆ. ಆಸ್ಪತ್ರೆಗಳು ಭಾವನಾ ಅವರನ್ನು ಬಳಸಿಕೊಂಡು ಐವಿಎಫ್ ಪ್ರಚಾರ ಮಾಡುತ್ತಿದೆಯೇ? ಎಂದು ಪ್ರಶ್ನೆಯನ್ನ ಲಾಯರ್ ಜಗದೀಶ್ ಅವರು ಮಾಡಿದ್ದಾರೆ. ಐವಿಎಫ್ ಬಳಸಿ, ಮದುವೆಯಾಗದೇ ತಾಯಿಯಾಗುತ್ತಿದ್ದಾರೆ. ಭಾವನಾ ಅವರಿಗೆ ಅಭಿನಂದನೆಗಳು. ನಿಮ್ಮ ಭಾವನೆಗಳಿಗೆ ಕರ್ನಾಟಕದ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಅದು ನಿಮ್ಮ ಖಾಸಗಿ ಬದುಕು. ಅದರ ಬಗ್ಗೆ ಯಾರೂ ಕಮೆಂಟ್ ಮಾಡುವಂತಿಲ್ಲ. ಅದು ನಿಮ್ಮ ಇಚ್ಚೆ. ಆದರೆ, ಮಾಧ್ಯಮಗಳ ಮುಂದೆ ಸೋಶಿಯಲ್ ಮೀಡಿಯಾದಲ್ಲಿ ನೀವು ಐವಿಎಫ್‌ನಿಂದ ತಾಯಿಯಾಗುತ್ತಿರುವ ವಿಚಾರ ಚರ್ಚೆಯಾಗುತ್ತಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಜೊತೆಗೆ ಭಾವನಾ ಅವರು ತಾಯಿ ಆಗುತ್ತಿರೋದು ಓಕೆ. ಆದರೆ, ಆಸ್ಪತ್ರೆಗಳು ಭಾವನಾ ಅವರನ್ನು ಬಳಸಿಕೊಂಡು ಐವಿಎಫ್ ಪ್ರಚಾರ ಮಾಡುತ್ತಿದ್ದಾರಾ? ಎಂದು ನನಗೆ ಮೆಸೇಜ್‌ಗಳನ್ನು ಮಾಡುತ್ತಿದ್ದಾರೆ. ಹಾಗೇ ಇಲ್ಲಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚರಿಕೆಯಿಲ್ಲದೆ ಭಾವನಾ ಅವರು ತಮ್ಮ ಭಾವನೆಗಳನ್ನು ಹೇಳಿಕೊಳ್ಳುತ್ತಿದ್ದಾರಾ?” ಎಂದು ಲಾಯರ್ ಜಗದೀಶ್ ಪ್ರಶ್ನೆ ಮಾಡಿದ್ದಾರೆ.
ಇನ್ನು “ಗಂಡೇ ಬೇಡ. ಮದುವೆನೇ ಬೇಡ. ನಾನು ತಾಯಿ ಆಗಿದ್ದೀನಿ ಅಂತ ಮಾಧ್ಯಮಗಳ ಮುಂದೆ ಪ್ರಮೋಷನ್ ಮಾಡಿದಾಗ ಎಲ್ಲೋ ಒಂದು ಕಡೆ ಐವಿಎಫ್ ಆಸ್ಪತ್ರೆಗಳು ಭಾವನಾ ಅವರನ್ನು ಪ್ರಮೋಷನ್‌ಗೆ ಬಳಸುತ್ತಿದ್ದಾರಾ? ಅಂತ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿದ್ದಾರೆ. ಗಂಡುನೂ ಬೇಕಾಗಿಲ್ಲ. ಮದುವೆನೂಬೇಕಾಗಿಲ್ಲ ಅಂತ ಕೆಲವರು ಹೇಳಿರೋದು. ಮಕ್ಕಳಾಗದವರು ಐವಿಎಫ್ ಬಳಸುವುದು ಓಕೆ. ಅಥವಾ ಇಚ್ಛೆ ಪಟ್ಟು ಭಾವನಾ ತರ ಮದುವೆನೇ ಬೇಡ ಅಂತ ಬಳಸುವವರೂ ಓಕೆ. ಆದರೆ, ಈ ಪ್ರಮೋಷನ್ಸ್ ಯಾಕೆ? ಎಲ್ಲೋ ಒಂದು ಕಡೆ ಐವಿಎಫ್ ಆಸ್ಪತ್ರೆಯವರು ಭಾವನಾ ಅವರನ್ನು ಬಳಸುತ್ತಿದ್ದಾರಾ ಅಂತ ನನ್ನ ಮನಸ್ಸಿಗೂ ಸ್ವಲ್ಪ ನೋವಾಯ್ತು.” ಎಂದು ಲಾಯರ್ ಜಗದೀಶ್ ಹೊಸ ಚರ್ಚೆಯನ್ನು ಹುಟ್ಟಾಕಿದ್ದಾರೆ.
ಇದನ್ನೂ ಓದಿ: Karwar: ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ ವೈದ್ಯಕೀಯ ಅಧೀಕ್ಷಕ
Comments are closed.