Home News Arvinda Limbavali: ‘ಅಂದು’ ಕಾಂಗ್ರೆಸ್ ಸೇರಲು ಯಡಿಯೂರಪ್ಪ ಮುಂದು? ಬಿಜೆಪಿ ನಾಯಕ ಗಂಭೀರ ಆರೋಪ

Arvinda Limbavali: ‘ಅಂದು’ ಕಾಂಗ್ರೆಸ್ ಸೇರಲು ಯಡಿಯೂರಪ್ಪ ಮುಂದು? ಬಿಜೆಪಿ ನಾಯಕ ಗಂಭೀರ ಆರೋಪ

Hindu neighbor gifts plot of land

Hindu neighbour gifts land to Muslim journalist

Arivnda Limbavali: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುತೂಹಲದ ನಡುವೆ ಭಿನ್ನರ ಚಟುವಟಿಕೆ ಜೋರಾಗಿದೆ. ಇದರ ನಡುವೆ ಮಾಜಿ ಸಂಸದ ಅರವಿಂದ ಲಿಂಬಾವಳಿ, ಬಿಎಸ್‌ ಯಡಿಯೂರಪ್ಪ ವಿರುದ್ದ ಗುಡುಗಿದ್ದಾರೆ. ಅಲ್ಲದೆ ಅಂದು ಪಕ್ಷ ತೆರೆದಿದ್ದ ಯಡಿಯೂರಪ್ಪನವರು ಕಾಂಗ್ರೆಸ್ ಬಾಗಿಲು ತಟ್ಟಿದರು ಎಂದು ಆರೋಪಿಸಿದ್ದಾರೆ.

ಹೌದು, ಜಿ.ಎಂ. ಸಿದ್ದೇಶ್ವರ ಅಭಿಮಾನಿ ಬಳಗವು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಅವರ 74ನೇ ಜನ್ಮದಿನದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ‘ನಮ್ಮಾಭಿಮಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ತೊರೆದು ಹೋಗಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್‌ ನಾಯಕರ ಮನೆ ಬಾಗಿಲು ಬಡಿದು, ಮತ್ತೇಕೆ ಪಕ್ಷಕ್ಕೆ ಮರಳಿದರೋ ಗೊತ್ತಿಲ್ಲ ಎಂದು ಲಿಂಬಾವಳಿ ಕಿಡಿ ಕಾರಿದ್ದಾರೆ.

ಅಲ್ಲದೆ ಜೆಡಿಎಸ್‌-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಬಿ.ಎಸ್‌. ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಲು, ಮುಖ್ಯಮಂತ್ರಿ ಹುದ್ದೆಗೆ ಏರಲು ಜಿ.ಎಂ. ಸಿದ್ದೇಶ್ವರ ಪರಿಶ್ರಮವಿದೆ. ಆರ್ಥಿಕ ಶಕ್ತಿಯಾಗಿ, ಹೆಗಲಿಗೆ ಹೆಗಲು ಕೊಟ್ಟು ಜೊತೆಗಿದ್ದ ಸ್ನೇಹಿತನನ್ನು ಯಡಿಯೂರಪ್ಪ ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಬೇಸರವಿದೆ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: C P Yogishwar: ಪತ್ನಿ, ಪುತ್ರಯಿಂದಲೇ ಶಾಸಕ ಸಿಪಿ ಯೋಗೀಶ್ವರ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಗೆ ದೂರು!!